Radish Food Combination: ಕೆಲವು ಆಹಾರದೊಂದಿಗೆ ಮೂಲಂಗಿ ತಿನ್ನುವುದರಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು. ಆದ್ದರಿಂದ ಯಾವ ಆಹಾರದೊಂದಿಗೆ ಮೂಲಂಗಿಯನ್ನು ಸೇವಿಸಿದಾಗ ಅದು ನಮಗೆ ಹಾನಿಯನ್ನುಂಟು ಮಾಡಬಹುದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಸಾಮಾನ್ಯವಾಗಿ ವೈದ್ಯರು ಮೂಲವ್ಯಾಧಿ, ಪೈಲ್ಸ್ ಸಂಬಂಧಿತ ಕಾಯಿಲೆಗಳಿಗೆ ಮೂಲಂಗಿ ಸೇವಿಸಲು ಸಲಹೆ ನೀಡುತ್ತಾರೆ. ಇದನ್ನು ಕೆಲವರು ಹಸಿಯಾಗಿ ಸೇವಿಸಿದರೆ, ಮತ್ತೆ ಕೆಲವರು ಸಲಾಡ್ ರೂಪದಲ್ಲಿ, ರೊಟ್ಟಿ ಅಥವಾ ಚಪಾತಿಯಲ್ಲಿ ಸ್ಟಫ್ ಮಾಡಿ ಅಥವಾ ಸಾಂಬಾರ್, ಕರಿ ಮಾಡಿ ಸೇವಿಸುತ್ತಾರೆ.
27
ಪೋಷಕಾಂಶಗಳಿಂದ ಸಮೃದ್ಧವಾಗಿದೆ ಮೂಲಂಗಿ
ಇತರ ತರಕಾರಿಯಂತೆ ಮೂಲಂಗಿ ಸಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದು ವಿಟಮಿನ್ ಎ, ವಿಟಮಿನ್ ಸಿ, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಅಂಶಗಳಿಂದ ಸಮೃದ್ಧವಾಗಿದೆ. ಅದಕ್ಕಾಗಿಯೇ ಇದನ್ನು ಆರೋಗ್ಯಕ್ಕೆ ವರದಾನವೆಂದು ಪರಿಗಣಿಸಲಾಗುತ್ತದೆ. ಆದರೆ ಪ್ರತಿಯೊಂದು ಆರೋಗ್ಯಕರ ಪದಾರ್ಥವನ್ನು ಸರಿಯಾದ ರೀತಿಯಲ್ಲಿ ಸೇವಿಸುವುದು ಸಹ ಮುಖ್ಯ. ಕೆಲವು ಆಹಾರದೊಂದಿಗೆ ಮೂಲಂಗಿ ತಿನ್ನುವುದರಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು. ಆದ್ದರಿಂದ ಯಾವ ಆಹಾರದೊಂದಿಗೆ ಮೂಲಂಗಿಯನ್ನು ಸೇವಿಸಿದಾಗ ಅದು ನಮಗೆ ಹಾನಿಯನ್ನುಂಟು ಮಾಡಬಹುದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
37
ರೋಗ ಮುಕ್ತವಾಗಿಡಲು
ವೈದ್ಯರು ಹೇಳುವಂತೆ ಮೂಲಂಗಿ ಪೌಷ್ಟಿಕ ತರಕಾರಿ ಮಾತ್ರವಲ್ಲ, ಅಮೃತವಿದ್ದಂತೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಮಲಬದ್ಧತೆಯನ್ನು ನಿವಾರಿಸುತ್ತದೆ ಮತ್ತು ದೇಹಕ್ಕೆ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಆದರೆ ಕೆಲವು ಆಹಾರದೊಂದಿಗೆ ಸೇವಿಸಿದಾಗ ಅದರ ಪ್ರಯೋಜನಗಳು ಹಾನಿಯಾಗಿ ಬದಲಾಗುತ್ತವೆ. ಆದ್ದರಿಂದ ಮೂಲಂಗಿಯನ್ನು ತಿನ್ನೋವಾಗ ಇವುಗಳ ಜೊತೆ ಸೇವಿಸುವುದನ್ನ ತಪ್ಪಿಸಬೇಕು. ಸರಿಯಾಗಿ ತಿಂದಾಗ ಮಾತ್ರ ಮೂಲಂಗಿ ದೇಹವನ್ನು ಬಲವಾಗಿ ಮತ್ತು ರೋಗ ಮುಕ್ತವಾಗಿಡಲು ಸಹಾಯ ಮಾಡುತ್ತದೆ.
ಹಾಲು ಪೌಷ್ಟಿಕ ಪಾನೀಯವಾಗಿದ್ದು, ಮೂಳೆಗಳು ಮತ್ತು ಚರ್ಮ ಎರಡಕ್ಕೂ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಮೂಲಂಗಿ ತಿಂದ ತಕ್ಷಣ ಹಾಲು ಸೇವಿಸುವುದು ಹಾನಿಕಾರಕವಾಗಿದೆ. ಆಯುರ್ವೇದದ ಪ್ರಕಾರ, ಮೂಲಂಗಿ ಮತ್ತು ಹಾಲಿನ ಸಂಯೋಜನೆಯು ಅಲರ್ಜಿ, ಚರ್ಮದ ಸಮಸ್ಯೆಗಳು ಮತ್ತು ಹೊಟ್ಟೆಯ ಸಮಸ್ಯೆಗೆ ಕಾರಣವಾಗಬಹುದು. ಇದು ಗ್ಯಾಸ್ ಮತ್ತು ಅಜೀರ್ಣವನ್ನು ಹೆಚ್ಚಿಸುತ್ತದೆ. ಆದ್ದರಿಂದ ಮೂಲಂಗಿ ತಿಂದ ಕನಿಷ್ಠ ಎರಡು ಗಂಟೆಗಳ ನಂತರ ಹಾಲು ಸೇವಿಸಬೇಕು.
57
ಹಾಗಲಕಾಯಿ
ಕಹಿ ರುಚಿಯ ಹೊರತಾಗಿಯೂ ಹಾಗಲಕಾಯಿ ಮಧುಮೇಹ ನಿಯಂತ್ರಣ ಮತ್ತು ರಕ್ತ ಶುದ್ಧೀಕರಣಕ್ಕೆ ಹೆಸರುವಾಸಿಯಾಗಿದೆ. ಮೂಲಂಗಿ ಕೂಡ ತಂಪಾಗಿಸುವ ತರಕಾರಿಯಾಗಿದೆ. ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ದೇಹದಲ್ಲಿ ವಿಷಕಾರಿ ವಸ್ತುಗಳು ರೂಪುಗೊಳ್ಳಬಹುದು. ಆಯುರ್ವೇದವು ಈ ಸಂಯೋಜನೆಯನ್ನು ಅತ್ಯಂತ ಹಾನಿಕಾರಕವೆಂದು ಪರಿಗಣಿಸುತ್ತದೆ. ಮೂಲಂಗಿ ಮತ್ತು ಹಾಗಲಕಾಯಿಯನ್ನು ಒಟ್ಟಿಗೆ ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ದುರ್ಬಲಗೊಳ್ಳುತ್ತದೆ.
67
ಕಿತ್ತಳೆ
ಚಳಿಗಾಲದಲ್ಲಿ ಕಿತ್ತಳೆ ಹಣ್ಣುಗಳು ಸುಲಭವಾಗಿ ಲಭ್ಯವಿರುತ್ತವೆ ಮತ್ತು ಜನರು ಅವುಗಳನ್ನು ಬೆಳ್ಳಂಬೆಳಗ್ಗೆ ಮೂಲಂಗಿಯೊಂದಿಗೆ ತಿನ್ನುವ ತಪ್ಪನ್ನು ಮಾಡುತ್ತಾರೆ. ಕಿತ್ತಳೆ ವಿಟಮಿನ್ ಸಿ ಯಿಂದ ಸಮೃದ್ಧವಾಗಿದ್ದು, ಮೂಲಂಗಿ ಜೀರ್ಣಕ್ರಿಯೆಗೆ ಉತ್ತಮ ತರಕಾರಿಯಾಗಿದೆ. ಆದರೆ ಈ ಎರಡನ್ನೂ ಸೇರಿಸುವುದರಿಂದ ದೇಹದಲ್ಲಿ ಅಸಿಡಿಟಿ ಹೆಚ್ಚಾಗುತ್ತದೆ. ಮೂಲಂಗಿಯೊಂದಿಗೆ ಕಿತ್ತಳೆ ತಿನ್ನುವುದರಿಂದ ಗ್ಯಾಸ್, ಹೊಟ್ಟೆ ನೋವು ಮತ್ತು ಎದೆಯುರಿ ಉಂಟಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಇದು ಚರ್ಮದ ದದ್ದುಗಳು ಮತ್ತು ಅಲರ್ಜಿಯ ಪ್ರತಿಕ್ರಿಯೆಗಳನ್ನು ಸಹ ಉಂಟುಮಾಡಬಹುದು. ಆದ್ದರಿಂದ, ಮೂಲಂಗಿ ತಿಂದ ತಕ್ಷಣ ಕಿತ್ತಳೆ ತಿನ್ನುವುದು ಹಾನಿಕಾರಕ.
77
ಜೇನುತುಪ್ಪ
ಜೇನುತುಪ್ಪವನ್ನು ನೈಸರ್ಗಿಕ ಔಷಧವೆಂದು ಪರಿಗಣಿಸಲಾಗುತ್ತದೆ. ಇದನ್ನು ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಆದರೆ ಮೂಲಂಗಿ ಮತ್ತು ಜೇನುತುಪ್ಪವನ್ನು ಸಂಯೋಜಿಸುವುದು ವಿಷಕಾರಿಯಾಗಬಹುದು. ಈ ಸಂಯೋಜನೆಯನ್ನು ಆಯುರ್ವೇದದಲ್ಲಿ ನಿಷೇಧಿಸಲಾಗಿದೆ. ಏಕೆಂದರೆ ಇದು ವಿಷಕಾರಿ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು. ಮೂಲಂಗಿಯೊಂದಿಗೆ ಜೇನುತುಪ್ಪವನ್ನು ಸೇವಿಸುವುದರಿಂದ ದೇಹಕ್ಕೆ ದೀರ್ಘಕಾಲೀನ ಹಾನಿ ಉಂಟಾಗುತ್ತದೆ. ಆದ್ದರಿಂದ ಮೂಲಂಗಿಯನ್ನು ಸೇವಿಸಿದ ನಂತರ ಜೇನುತುಪ್ಪವನ್ನು ತಪ್ಪಿಸಬೇಕು.