ನಿದ್ರೆಯು ನಮ್ಮ ಆರೋಗ್ಯದಲ್ಲಿ ಒಂದು ಪ್ರಮುಖ ಅಂಶವಾಗಿದೆ. ಆದರೆ ನಮ್ಮಲ್ಲಿ ಹೆಚ್ಚಿನವರಿಗೆ ನಮ್ಮ ಜೀವಿತಾವಧಿಯಲ್ಲಿ ನಿದ್ರೆಗೆ ಸಂಬಂಧಿಸಿದ ಕೆಲವು ಸಮಸ್ಯೆ ತುಂಬಾನೆ ಕಾಡುತ್ತವೆ. ಕೆಲವು ಜನರು ಸಾಕಷ್ಟು ನಿದ್ರೆ ಪಡೆಯಲು ಇಷ್ಟಪಡ್ತಾರೆ ಮತ್ತು ಕೆಲವರು ನಿದ್ರೆ ಮಾಡಲು ಸಹ ಹೆಣಗಾಡಬೇಕಾಗುತ್ತೆ.
ನಿಮ್ಮ ನಿಗದಿತ ಸಮಯಕ್ಕಿಂತ ಕಡಿಮೆ ನಿದ್ರೆ(Sleep) ತೆಗೆದುಕೊಂಡರೂ ಸಹ, ಮೆದುಳಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ, ಹಾಗೆ ನಿಗದಿತ ಸಮಯಕ್ಕಿಂತ ಹೆಚ್ಚು ಮಲಗಿದರೂ ಸಹ, ಅದು ಮೆದುಳಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಇದರಿಂದ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ ತಿಳಿಯಿರಿ.
212
ಹೆಚ್ಚು ನಿದ್ರೆ ಮಾಡೋದ್ರಿಂದ ಉಂಟಾಗುವ ಒಂದು ಅಸ್ವಸ್ಥತೆ ಹೈಪರ್ಸೋಮ್ನಿಯಾ(Hypersomnia). ಇದರಲ್ಲಿ, ವ್ಯಕ್ತಿಯು ಎಲ್ಲಾ ಸಮಯದಲ್ಲೂ, ವಿಶೇಷವಾಗಿ ಹಗಲಿನ ಸಮಯದಲ್ಲಿ ನಿದ್ರೆ ಮಾಡುತ್ತಾನೆ. ರಾತ್ರಿಯಲ್ಲಿ ಪೂರ್ಣ ನಿದ್ರೆ ಮಾಡಿದ ನಂತರವೂ, ಹಗಲಿನಲ್ಲಿ ನಿದ್ರೆಯ ಒತ್ತಡವು ಎಷ್ಟು ಪ್ರಬಲವಾಗಿರುತ್ತೆ ಅಂದ್ರೆ, ನಿದ್ರೆ ಮಾಡುತ್ತಲೇ ಇರಬೇಕು ಎಂದೆನಿಸುತ್ತೆ.
312
ಇನ್ನು ಈ ಸಮಸ್ಯೆ ಕಾಡಿದರೆ ನಿದ್ರೆಯಿಲ್ಲದೆ ಉಳಿಯೋದಿಲ್ಲ ಎಂಬ ಭಾವನೆ ಮೂಡುತ್ತದೆ ಮತ್ತು ಕೆಲವು ನಿಮಿಷಗಳ ಸಣ್ಣ ನಿದ್ರೆಯಿಂದ ಕೆಲವು ಗಂಟೆಗಳ(Hours) ನಿದ್ರೆಯವರೆಗೆ, ಹಗಲಿನಲ್ಲಿ ನಿದ್ರೆ ಮಾಡೋದು ಅಗತ್ಯವಾಗುತ್ತೆ. ಈ ಟೈಮ್ ವಿಭಿನ್ನ ವ್ಯಕ್ತಿಗಳಿಗೆ ವಿಭಿನ್ನವಾಗಿರಬಹುದು.
412
ಹೈಪರ್ಸೋಮ್ನಿಯಾದ ಲಕ್ಷಣಗಳು ಯಾವುವು?
ಹೈಪರ್ಸೋಮ್ನಿಯಾದಲ್ಲಿ, ವ್ಯಕ್ತಿಯು ದಿನವಿಡೀ ಮಲಗಬೇಕೆಂದು ಭಾವಿಸುತ್ತಾನೆ.
ದೇಹ ಭಾರವೆನಿಸುತ್ತೆ ಮತ್ತು ಇದು ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತೆ, ಇದು ವೃತ್ತಿಪರ(Professional) ಮತ್ತು ವೈಯಕ್ತಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ.
512
ಮಲಗಿದ ನಂತರವೂ, ನಿಮಗೆ ಇರಬೇಕಾದ ಫ್ರೆಶ್ನೆಸ್(Freshness) ನೀವು ಅನುಭವಿಸೋದಿಲ್ಲ. ಬದಲಾಗಿ, ದೇಹದಲ್ಲಿ ಶಕ್ತಿಯ ಕೊರತೆ ಮತ್ತು ತಲೆ ಭಾರವೆನಿಸುತ್ತೆ.
ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಮಾಡಿದ ನಂತರವೂ, ಬೆಳಿಗ್ಗೆ ಎದ್ದೇಳಲು, ದೇಹವನ್ನು ಹಾಸಿಗೆ ಮೇಲಿಂದ ಏಳಿಸಲು ಸಮಸ್ಯೆ ಆಗುತ್ತೆ.
612
ಎಚ್ಚರವಾದ ನಂತರ ಮೆದುಳಿನಲ್ಲಿ ಒಂದು ರೀತಿಯ ಗೊಂದಲ ಮೂಡುತ್ತದೆ, ಅಲ್ಲದೇ ಯಾವುದೇ ರೀತಿಯ ಸ್ಪಷ್ಟತೆ ಮತ್ತು ಶಕ್ತಿ(Power) ಅನುಭವಿಸಲಾಗೋದಿಲ್ಲ.
ವಿವಿಧ ಆರೋಗ್ಯ ಸಂಶೋಧನೆಗಳ ಆಧಾರದ ಮೇಲೆ, ವಿಶ್ವದ ಸುಮಾರು 5 ಪ್ರತಿಶತದಷ್ಟು ಜನರು ಹೈಪರ್ಸೋಮ್ನಿಯಾದಿಂದ ಬಳಲುತ್ತಿದ್ದಾರೆ.
712
ಈ ಸಮಸ್ಯೆಯು ಸಾಮಾನ್ಯವಾಗಿ ಹದಿಹರೆಯದಲ್ಲಿ(Youngster) ಮತ್ತು ಯೌವನದಲ್ಲಿ ಹೆಚ್ಚು ಸಾಮಾನ್ಯವಾಗಿದೆ, ಆದ್ದರಿಂದ ಹೆಚ್ಚಿನ ಜನರು ಈ ವಯಸ್ಸಿನಲ್ಲಿ ಇದನ್ನು ಹೊಂದಿರುತ್ತಾರೆ. ಈ ಸಮಸ್ಯೆ ಬಗ್ಗೆ ನೀವು ಹೆಚ್ಚು ಜಾಗರೂಕರಾಗಿರೋದು ಮುಖ್ಯ. ಇಲ್ಲವಾದರೆ ಮೆದುಳಿಗೆ ಎಫೆಕ್ಟ್ ಆಗೋದು ಖಚಿತ.
812
ಹೈಪರ್ಸೋಮ್ನಿಯಾ ಏಕೆ ಸಂಭವಿಸುತ್ತೆ?
ಹೈಪರ್ಸೋಮ್ನಿಯಾದ ಕಾರಣ ಇನ್ನೂ ತಿಳಿದಿಲ್ಲ, ಆದರೆ ಸಂಶೋಧಕರು ಟೆಸ್ಟ್ ಸಮಯದಲ್ಲಿ ಕೆಲವು ಜೀನ್ಸ್ ಗಳು(Genes) ಈ ಸಮಸ್ಯೆಗೆ ಕಾರಣವಾಗಿದೆಯೇ ಎಂದು ಕಂಡು ಹಿಡಿಯುತ್ತಿದ್ದಾರೆ, ಅದು ಈ ಅಸ್ವಸ್ಥತೆಯಿಂದ ಬಳಲುತ್ತಿರುವ ಜನರಲ್ಲಿ ಇತರರಿಗಿಂತ ಭಿನ್ನವಾಗಿರಬಹುದು.
912
ಹೈಪರ್ಸೋಮಿನಿಯಾದ ಸಮಸ್ಯೆಯನ್ನು ಉಲ್ಬಣಗೊಳಿಸುವ ಕೆಲವು ಅಪಾಯದ ಅಂಶಗಳಿವೆ. ಅದು ಯಾವುದಂದ್ರೆ ಹೆಚ್ಚು ಆಲ್ಕೋಹಾಲ್(Alcohol) ಸೇವಿಸೋದು.
ಮನೋವೈದ್ಯರಿಂದ ಸರಿಯಾಗಿ ಚಿಕಿತ್ಸೆ ಪಡೆಯದ ಬಾಲ್ಯದ ಆಘಾತದಿಂದಲೂ ಉಂಟಾಗಬಹುದು.
1012
ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಉಳಿಯುವ ಯಾವುದೇ ವೈರಲ್ ಸೋಂಕು(Viral infection), ಇದು ಹೈಪರ್ಸೋಮ್ನಿಯಾದ ಅಪಾಯ ಹೆಚ್ಚಿಸುತ್ತೆ.
ಆನುವಂಶಿಕವಾಗಿ, ಈ ಸಮಸ್ಯೆ ಕಾಡುತ್ತದೆ. ಇದರಿಂದ ಹೆಚ್ಚು ತೊಂದರೆ ಉಂಟಾಗಬಹುದು.
1112
ಮಾನಸಿಕ ಅಸ್ವಸ್ಥತೆ(Mental Disorder) ಅಥವಾ ಖಿನ್ನತೆ, ಆತಂಕ, ಬೈಪೋಲಾರ್ ಅಸ್ವಸ್ಥತೆ, ಅಲ್ಝೈಮರ್ಸ್ ಮುಂತಾದ ಕಾಯಿಲೆಗಳನ್ನು ಹೊಂದಿರುವ ಜನರು ಹೈಪರ್ಸೋಮ್ನಿಯಾದ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
1212
ಹೈಪಸೋಮ್ನಿಯಾಕ್ಕೆ ಚಿಕಿತ್ಸೆ ಏನು?
ಈ ಅಸ್ವಸ್ಥತೆಗೆ ನೀವು ಉತ್ತಮ ಮನೋವೈದ್ಯರಿಂದ (Consult doctor) ಸರಿಯಾದ ಚಿಕಿತ್ಸೆ ಪಡೆಯಬೇಕು. ನೀವು ನಿಮ್ಮ ಆಹಾರದ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಧ್ಯಾನ ಮಾಡಬೇಕು. ಏಕೆಂದರೆ ಇಂತಹ ಸಮಸ್ಯೆಗಳಲ್ಲಿ, ಬಲವಾದ ವಿಲ್ ಪವರ್ ಹೊಂದಿರೋದು ಬಹಳ ಮುಖ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.