ಹಾಲು ಕುಡಿದ ತಕ್ಷಣ ಮಗು ವಾಂತಿ ಮಾಡುತ್ತಿದೆಯಾ? ಇದು ಜೀರ್ಣ ಸಮಸ್ಯೆಯ ಮುನ್ಸೂಚನೆ

First Published Jul 12, 2022, 6:44 PM IST

ವಾಂತಿಗೆ ಅನೇಕ ಕಾರಣಗಳಿರಬಹುದು. ಇವುಗಳಲ್ಲಿ ಶಾಖ, ಆರೋಗ್ಯ ಹದಗೆಡೋದು, ಹಸಿವಿಗಿಂತ ಹೆಚ್ಚು ತಿನ್ನುವುದು, ಕೆಟ್ಟ ಅಥವಾ ಹಳಸಿದ ಆಹಾರ ಸೇವಿಸೋದು, ಯಾವುದೇ ರೀತಿಯ ಸೋಂಕು ಅಥವಾ ಹೊಟ್ಟೆಯುಬ್ಬರಿಕೆ ಪ್ರಮುಖವಾದವು.

ಈ ಎಲ್ಲಾ ಸಮಸ್ಯೆಗಳು ಸಾಮಾನ್ಯವಾಗಿ ಹಿರಿಯರ ವಿಷಯಗಳು, ಆದರೆ ನೀವು ಮಗುವಿನ ಬಗ್ಗೆ ಮಾತನಾಡಿದರೆ, ಮಗು(Child) ಹಾಲು ಕುಡಿದ ತಕ್ಷಣ ವಾಂತಿ ಮಾಡುವುದನ್ನು ನೀವು ಅನೇಕ ಬಾರಿ ನೋಡಿರಬಹುದು. ಇದರ ಬಗ್ಗೆ ಪೋಷಕರು ಆಗಾಗ್ಗೆ ಚಿಂತಿತರಾಗುತ್ತಾರೆ. ಆದರೆ  ನೀವು ಗಾಬರಿಪಡಬೇಕಾಗಿಲ್ಲ.

ಹಾಲು ಕುಡಿದ ನಂತರ ಮಕ್ಕಳು ವಾಂತಿ(Vomit) ಮಾಡೋದು ಸಾಮಾನ್ಯ. ಹಾಗಾದಾಗ ಭಯಭೀತರಾಗುವ ಬದಲು, ಪೋಷಕರು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ಆಹಾರದಲ್ಲಿ ಬದಲಾವಣೆ ಅಥವಾ ದಿನಚರಿಯಲ್ಲಿ ಬದಲಾವಣೆ ಕಂಡುಬಂದರೆ ಮಕ್ಕಳು ವಾಂತಿ  ಅನೇಕ ಬಾರಿ ಮಾಡೋದು ಸಾಮಾನ್ಯ. ಇದು ಹೊಟ್ಟೆಯ ಪ್ರಾಬ್ಲಮ್ನ  ಸಂಕೇತವಲ್ಲ, ಬದಲಿಗೆ ವಾಂತಿಯು ಮಗುವಿನ ಜೀರ್ಣಕ್ರಿಯೆ ವ್ಯವಸ್ಥೆ ಉತ್ತಮವಾಗಿದೆ ಎಂದು ಸೂಚಿಸುತ್ತೆ. ಹಾಗಾಗಿ ವಾಂತಿಯ ನಂತರ ಮಕ್ಕಳು ಉತ್ತಮ ನಿದ್ರೆ ಪಡೆಯುತ್ತಾರೆ.

ಮಕ್ಕಳಲ್ಲಿ ವಾಂತಿಗೆ ಕಾರಣಗಳು
ಮಗುವಿಗೆ ನೀಡುವ ಹಾಲು ಸ್ನಾಯುವಿನ ಕೊಳವೆಯ ಮೂಲಕ ಅಂದರೆ ಅನ್ನನಾಳದ ಮೂಲಕ ಅದರ ಹೊಟ್ಟೆ (Stomach) ತಲುಪುತ್ತೆ. ಅನ್ನನಾಳ ಮತ್ತು ಜಠರದ ನಡುವೆ ಸ್ನಾಯುವಿನ ರಿಂಗ್ ಇದೆ, ಅದು ಹಾಲು ಕುಡಿದ ನಂತರ ಮುಚ್ಚುತ್ತೆ. ಈ ಕಾರಣದಿಂದಾಗಿ ಹಾಲು ಅನ್ನನಾಳಕ್ಕೆ ಹಿಂತಿರುಗುತ್ತೆ ಮತ್ತು ವಾಂತಿಗೆ ಕಾರಣವಾಗುತ್ತೆ.

ಮಕ್ಕಳ ಹೊಟ್ಟೆಯು ತುಂಬಾ ಚಿಕ್ಕದಾಗಿದೆ, ಆದ್ದರಿಂದ ಅವರಿಗೆ ಸ್ವಲ್ಪ ಪ್ರಮಾಣದ ಹಾಲು(Milk) ಮಾತ್ರ ಸಾಕಾಗುತ್ತೆ. ಅನೇಕ ಬಾರಿ, ಅತಿಯಾಗಿ ತಿನ್ನೋದು ಸಹ ವಾಂತಿ ಮಾಡಲು ಕಾರಣವಾಗಬಹುದು.

ಅನೇಕ ಬಾರಿ ಮಕ್ಕಳಿಗೆ ಮಲಬದ್ಧತೆಯ(Constipation) ಸಮಸ್ಯೆ ಇರುತ್ತೆ, ಇದರಿಂದಾಗಿ ಜೀರ್ಣಕ್ರಿಯೆ ಸರಿಯಾಗಿ ನಡೆಯೋದಿಲ್ಲ, ಇದರಿಂದಾಗಿ ವಾಂತಿ ಉಂಟಾಗಬಹುದು.
 

ಮಕ್ಕಳಲ್ಲಿ ವಾಂತಿ ಕೆಲವೊಮ್ಮೆ ಶೀತ, ಜ್ವರ(Fever), ಶಾಖ ಮತ್ತು ಸೋಂಕುಗಳಿಂದ ಉಂಟಾಗಬಹುದು. ಹಾಗಾಗಿ ನೀವು ತಕ್ಷಣವೇ ವೈದ್ಯರ ಸಲಹೆ ಪಡೆಯಬೇಕು.
 

ಹಾಲು ಕುಡಿದ ನಂತರ ಮಕ್ಕಳು ವಾಂತಿ ಮಾಡುವುದನ್ನು ತಪ್ಪಿಸೋದು ಹೀಗೆ
– ವಾಂತಿ ತಡೆಗಟ್ಟುವ ಕ್ರಮ ಅದರ ಕಾರಣವನ್ನು ಅವಲಂಬಿಸಿರಬಹುದು.

– ಮಗುವಿಗೆ ನೀಡುವ ಹಾಲಿನ ಪ್ರಮಾಣವನ್ನು ಕಡಿಮೆ ಇರಿಸಿ.
– ಮಗುವಿಗೆ ಹಾಲುಣಿಸುವಾಗ(Feeding milk) ಆತುರಪಡಬೇಡಿ, ಮಗುವಿಗೆ ಆರಾಮವಾಗಿ ಹಾಲನ್ನು ನೀಡಿ.

– ಹಾಲುಣಿಸಿದ ನಂತರ ಮಗುವಿಗೆ ತೇಗು ಬರೋವರ್ಗು ಸ್ಟ್ರೈಟ್ (Straight)ಆಗಿ ಹಿಡಿಯೋದನ್ನು ಮರೀಬೇಡಿ.
-ಮಗುವಿಗೆ ಹಾಲುಣಿಸುವಾಗ ಅದರ ತಲೆ ಮತ್ತು ಎದೆ ನೇವರಿಸೋದು ಒಳ್ಳೆಯದು.

– ಮಗು ಹಾಲು ಕುಡಿದ ತಕ್ಷಣ ಆಟ ಆಡದಂತೆ ಎಚ್ಚರಿಕೆ ವಹಿಸಬೇಕು.
- ನೀವು ಮಗುವಿಗೆ ಹಾಲಿನ ಬಾಟಲಿಯಿಂದ(Milk bottle) ಹಾಲುಣಿಸಿದರೆ, ಆ ಬಾಟಲಿಯಲ್ಲಿನ ಹೋಲ್ ಚಿಕ್ಕದಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಇಲ್ಲವಾದರೆ ಹೆಚ್ಚಿನ ಪ್ರಮಾಣದ ಹಾಲು ಕುಡಿದು, ಮಕ್ಕಳಿಗೆ ವಾಂತಿ ಬರಬಹುದು.
 

click me!