ಮೊಟ್ಟ ಮೊದಲ ಬಾರಿಗೆ ಚಹಾ ತಯಾರಾಗಿದ್ದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ

Published : Apr 15, 2025, 03:20 PM ISTUpdated : Apr 15, 2025, 03:33 PM IST

ಭಾರತೀಯರಾದ ನಾವು ದಿನವನ್ನು ಆರಂಭಿಸೋದೆ ಚಹಾ ಮೂಲಕ. ಆದರೆ ನಿಮಗೆ ಈ ಚಹಾ ಮೊಟ್ಟ ಮೊದಲ ಬಾರಿಗೆ ತಯಾರಾಗಿದ್ದು ಹೇಗೆ? ಇದನ್ನ ಎಲ್ಲಿ ತಯಾರಿಸಲಾಯಿತು ಅನ್ನೋದು ಗೊತ್ತ? ಇಲ್ಲಿದೆ ಆ ಕುರಿತು ಸಂಪೂರ್ಣ ಮಾಹಿತಿ.   

PREV
17
ಮೊಟ್ಟ ಮೊದಲ ಬಾರಿಗೆ ಚಹಾ ತಯಾರಾಗಿದ್ದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ

ಜಗತ್ತಿನಲ್ಲಿ ಚಹಾ ಪ್ರಿಯರಿಗೆ (tea lovers( ಕೊರತೆಯಿಲ್ಲ. ನೀರಿನ ನಂತರ ಚಹಾವು ಎರಡನೇ ಅತ್ಯಂತ ವ್ಯಾಪಕವಾಗಿ ಸೇವಿಸುವ ಪಾನೀಯವಾಗಿದೆ. ನಮ್ಮ ಭಾರತದಲ್ಲಿ ಜನರ ದಿನ ಆರಂಭವಾಗೋದೇ ಒಂದು ಕಪ್ ಚಹಾದಿಂದ. ಚಹಾ ಇಲ್ಲದಿದ್ದರೆ ದಿನವೇ ಸರಿಯಾಗಿರಲ್ಲ ಹಲವರಿಗೆ. 

27

ಆದ್ರೆ ನೀವು ಪ್ರತಿದಿನ ಕುಡಿಯುವಂತಹ ಚಹಾ ಯಾವಾಗ ತಯಾರಾಯಿತು ಅನ್ನೋದು ನಿಮಗೆ ಗೊತ್ತಾ? ಚಹಾದ ಮೂಲದ ಇತಿಹಾಸವು (History of tea) ತುಂಬಾ ಆಸಕ್ತಿದಾಯಕವಾಗಿದೆ. ಚಹಾವನ್ನು ಮೊದಲ ಬಾರಿಗೆ ಆಕಸ್ಮಿಕವಾಗಿ ತಯಾರಿಸಲಾಯಿತು ಅನ್ನೋದನ್ನು ತಿಳಿದ್ರೆ ನಿಮಗೆ ಅಚ್ಚರಿಯಾಗೋದು ಖಚಿತಾ. 

37

ಚಹಾದ ಮೂಲ ಚೀನಾ. ಅಂದರೆ ಚಹಾ ಎಲೆಗಳು (tea leaves) ಅಲ್ಲಿಯೇ ಬೆಳೆಯುತ್ತಿದ್ದವು.  ಪೂ 2732 ರಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಒಬ್ಬರು ಚಹಾ ಕುಡಿದರು. ಹೌದು, ಪೂ 2732 ರಲ್ಲಿ ಚೀನಾದ ಚಕ್ರವರ್ತಿ ಶೆನ್ ನಂಗ್ ಚಹಾವನ್ನು ಕಂಡುಹಿಡಿದನು.
 

47

ಒಂದು ದಿನ, ಆಕಸ್ಮಿಕವಾಗಿ, ಕೆಲವು ಎಲೆಗಳು ಹಾರಿಕೊಂಡು ಬಂದು ಅರಮನೆಯ ಅಡುಗೆ ಕೋಣೆಯಲ್ಲಿ ಕುದಿಯುತ್ತಿದ್ದ ನೀರಿನಲ್ಲಿ ಬಿದ್ದವು. ಚಕ್ರವರ್ತಿ ಶೆನ್ ನಂಗ್ ಅದರ ರುಚಿ ನೋಡಿದಾಗ, ಆತನಿಗೆ ತುಂಬಾನೆ ಖುಷಿಯಾಗಿತ್ತು. 

57

ಚಹಾದ ರುಚಿ ಮತ್ತು ಉಲ್ಲಾಸಕರ ಪರಿಣಾಮದಿಂದಾಗಿ ಚಕ್ರವರ್ತಿ ಶೆನ್ ನಂಗ್ ಅದನ್ನು ನಿಯಮಿತವಾಗಿ ಸೇವಿಸಲು ಪ್ರಾರಂಭಿಸಿದರು. ಚಕ್ರವರ್ತಿ ಶೆನ್ ನಂಗ್ ಈ ಕಷಾಯಕ್ಕೆ "ಚಾ" ಎಂದು ಹೆಸರಿಟ್ಟರು, ಅದು ನಂತರ ಚಹಾ ಹಾಗೂ ಟೀ ಎಂದು ಪ್ರಖ್ಯಾತಿ ಪಡೆಯಿತು..

67

1610 ರಲ್ಲಿ ಪೋರ್ಚುಗೀಸರು (portuguese) ಮತ್ತು ಡಚ್ಚರು ಮೊದಲು ಯುರೋಪಿಗೆ ಚಹಾವನ್ನು ಆಮದು ಮಾಡಿಕೊಂಡರು. 17 ನೇ ಶತಮಾನದ ಮಧ್ಯಭಾಗದವರೆಗೆ, ಚಹಾವು ಎಲೆಗಳ ರೂಪದಲ್ಲಿ ಮಾತ್ರ ಲಭ್ಯವಿತ್ತು. ಈಗ ಬೇರೆ ಬೇರೆ ವಿಧಾನದಲ್ಲಿ ಲಭ್ಯವಿದೆ. 

77

ವ್ಯಾಪಾರ ಬೆಳೆದಂತೆ, ಚಹಾ ಎಲೆಗಳನ್ನು ಸಂರಕ್ಷಿಸುವ ಒಂದು ವಿಧಾನವನ್ನು ಸಹ ಕಂಡುಹಿಡಿಯಲಾಯಿತು. ಭಾರತಕ್ಕೆ ಚಹಾವನ್ನು ಪರಿಚಯಿಸಿದವರು ಪೋರ್ಚುಗೀಸರು. ಆದರೆ ಈಗ ಚಹಾ ನಮ್ಮಲ್ಲೇ ಹುಟ್ಟಿಕೊಂಡಿತು ಎನ್ನುವಂತೆ ಭಾರತೀಯರು ಸಿಕ್ಕಾಪಟ್ಟೆ ಚಹಾ ಕುಡಿಯುತ್ತಾರೆ. 
 

Read more Photos on
click me!

Recommended Stories