ಬ್ಯುಸಿ ಜೀವನದಲ್ಲಿ ನಾವು ಬದುಕುತ್ತಿರುವುದರಿಂದ, ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಬರುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗಳಲ್ಲಿ ಒಂದು ಹಿಮೋಗ್ಲೋಬಿನ್ ಕೊರತೆ. ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಿದ್ದರೆ, ನೀವು ಹಲವು ಭಯಾನಕ ರೋಗಗಳಿಗೆ ಬಲಿಯಾಗಬಹುದು.
ದೇಹದಲ್ಲಿರುವ ಕೆಂಪು ರಕ್ತ ಕಣಗಳು ಇಡೀ ದೇಹಕ್ಕೆ ಆಮ್ಲಜನಕವನ್ನು ನೀಡುವ ಕೆಲಸ ಮಾಡುತ್ತವೆ. ದೇಹದಲ್ಲಿ ಇದರ ಕೊರತೆಯಾದಾಗ, ಆಯಾಸ, ದೌರ್ಬಲ್ಯ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ನಿಮ್ಮ ಹಿಮೋಗ್ಲೋಬಿನ್ ಮಟ್ಟವನ್ನು ನೈಸರ್ಗಿಕವಾಗಿ ಕಾಪಾಡಿಕೊಳ್ಳಲು ಸಹಾಯ ಮಾಡುವ ಆಹಾರಗಳ ಪಟ್ಟಿ ಇಲ್ಲಿದೆ.
ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಿಕೊಳ್ಳಲು ಕಬ್ಬಿಣಾಂಶವಿರುವ ಆಹಾರ ಸೇವಿಸಬೇಕಾಗುತ್ತದೆ. WHO ಪ್ರಕಾರ, ರೆಡ್ ಮೀಟ್, ಕೋಳಿ ಮಾಂಸ, ಮೀನು, ಕಾಳುಗಳು, ಧಾನ್ಯಗಳು ಮತ್ತು ಕಡು ಹಸಿರು ಎಲೆಗಳನ್ನು ಹೊಂದಿರುವ ತರಕಾರಿಗಳಂತಹ ಕಬ್ಬಿಣದ ಭರಿತ ಆಹಾರಗಳನ್ನು ಸೇವಿಸುವ ಮೂಲಕ ಹಿಮೋಗ್ಲೋಬಿನ್ ಮಟ್ಟವನ್ನು ನೈಸರ್ಗಿಕವಾಗಿ ಹೆಚ್ಚಿಸಬಹುದು.
ಬೀಟ್ರೂಟ್‌ನಲ್ಲಿ ಕಬ್ಬಿಣ, ಮೆಗ್ನೀಸಿಯಮ್ ಇದೆ. ಬೀಟ್ರೂಟ್ ಸೇವನೆ ಹಿಮೋಗ್ಲೋಬಿನ್ ಹೆಚ್ಚಿಸಿ ರಕ್ತ ಕಣಗಳನ್ನು ಉತ್ಪಾದಿಸುತ್ತದೆ. ನುಗ್ಗೆ ಸೊಪ್ಪಿನಲ್ಲಿ ಸತು, ಕಬ್ಬಿಣ ಇದೆ. ಇದು ಹಿಮೋಗ್ಲೋಬಿನ್ ಮತ್ತು ರಕ್ತ ಕಣಗಳಿಗೆ ಅವಶ್ಯಕವಾಗಿದೆ. ಇತರ ಸೊಪ್ಪುಗಳಲ್ಲಿ ಕಬ್ಬಿಣಾಂಶವಿದೆ. ಸೊಪ್ಪಿನಲ್ಲಿರುವ ಆಕ್ಸಲಿಕ್ ಆಮ್ಲ ಕಬ್ಬಿಣ ಹೀರಿಕೊಳ್ಳುವುದನ್ನು ತಡೆಯುತ್ತದೆ.
ವಿಟಮಿನ್ ಸಿ ಭರಿತ ಆಹಾರಗಳು ಕಬ್ಬಿಣನಂಶವನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹಿಮೋಗ್ಲೋಬಿನ್ ಸಮಸ್ಯೆಯಿಂದ ಬಳಲುತ್ತಿರೋರು ಚಹಾ, ಕಾಫಿ, ಕೋಕೋ, ಹೊಟ್ಟು-ಭರಿತ ಧಾನ್ಯಗಳು ಮತ್ತು ಕ್ಯಾಲ್ಸಿಯಂ ಅನ್ನು ಕಬ್ಬಿಣಾಂಶವಿರುವ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಅವು ಕಬ್ಬಿಣದಂಶ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತವೆ ಮತ್ತು ಹಿಮೋಗ್ಲೋಬಿನ್ ಉತ್ಪಾದನೆಯನ್ನು ತಡೆಯುತ್ತದೆ.
ಬ್ರೊಕೊಲಿಯಲ್ಲಿ ಕಬ್ಬಿಣ, ಫೋಲಿಕ್ ಆಮ್ಲ, ಮೆಗ್ನೀಸಿಯಮ್ ಇದೆ. ಇದನ್ನು ಬೇಯಿಸಿ ಅಥವಾ ಸಲಾಡ್ ರೂಪದಲ್ಲಿ ತಿನ್ನಬಹುದು. ದಾಳಿಂಬೆಯಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ ಇದೆ. ಇದು ಹಿಮೋಗ್ಲೋಬಿನ್ ಹೆಚ್ಚಿಸಿ ಆರೋಗ್ಯ ಕಾಪಾಡುತ್ತದೆ. ದಾಳಿಂಬೆಯಲ್ಲಿ ಕಬ್ಬಿಣಾಂಶ ಸಮೃದ್ಧವಾಗಿದೆ. ಇದರಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ಫೈಬರ್ ಕೂಡ ಇದೆ. ಈ ಹಣ್ಣನ್ನು ತಿಂದರೆ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ. ಆದ್ದರಿಂದ, ದೇಹದಲ್ಲಿ ರಕ್ತವನ್ನು ತುಂಬಲು, ಪ್ರತಿದಿನ ದಾಳಿಂಬೆ ಜ್ಯೂಸ್ ಕುಡಿಯಿರಿ.
ಖರ್ಜೂರದಲ್ಲಿ ಕಬ್ಬಿಣಾಂಶ ಸಮೃದ್ಧವಾಗಿದೆ. ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಅದಲ್ಲದೆ, ಇದರಲ್ಲಿ ತಾಮ್ರ, ಸೆಲೆನಿಯಮ್, ಮೆಗ್ನೀಸಿಯಮ್ ಮುಂತಾದ ಅನೇಕ ಪೋಷಕಾಂಶಗಳಿವೆ. ಅವು ರಕ್ತವನ್ನು ಹೆಚ್ಚಿಸುವುದಲ್ಲದೆ ಮೂಳೆಗಳನ್ನು ಬಲಪಡಿಸುತ್ತವೆ. ದೇಹದಲ್ಲಿ ರಕ್ತಹೀನತೆಯನ್ನು ಹೋಗಲಾಡಿಸಲು, ವಿಟಮಿನ್ ಸಿ ಸಮೃದ್ಧವಾಗಿರುವ ಪದಾರ್ಥಗಳನ್ನು ತಿನ್ನಬೇಕು. ಕಿತ್ತಳೆ ಹಣ್ಣು, ನಿಂಬೆ, ಕ್ಯಾಪ್ಸಿಕಂ, ಟೊಮೆಟೊ, ದ್ರಾಕ್ಷಿ, ಬೆರ್ರಿ ಮುಂತಾದವುಗಳನ್ನು ಆಹಾರದಲ್ಲಿ ಸೇರಿಸಿ.