ನಿಮಗೆ ಹಸಿವಾದಾಗ ನೀವು ಚಹಾ ಅಥವಾ ಕಾಫಿ ಕುಡಿಯುತ್ತೀರಾ? ಅಥವಾ ಸಮೋಸಾ (Samosa)ಅಥವಾ ಚಿಪ್ಸ್ ತಿಂತೀರಾ? ಇವುಗಳಲ್ಲಿ ಒಂದು ನಿಮ್ಮ ಆಯ್ಕೆಯಾಗಿದ್ರೆ, ಇವು ನಿಮ್ಮ ವೆಯಿಟ್ ಲಾಸ್ ಜರ್ನಿಗೆ ಅಡ್ಡಿಪಡಿಸುತ್ತೆ. ಹಾಗಾಗಿ ಹಸಿವನ್ನು ಹೇಗೆ ತಪ್ಪಿಸೋದು ಮತ್ತು ಮಂಚಿಂಗ್ ಸ್ನ್ಯಾಕ್ಸ್ ಆಗಿ ಆರೋಗ್ಯಕರ ಆಯ್ಕೆ ಯಾವುದು ಅನ್ನೋದನ್ನು ತಿಳಿಯಿರಿ.
ಬಾಳೆಹಣ್ಣಿನ ಚಿಪ್ಸ್ (Banana Chips)
ಬಾಳೆಹಣ್ಣು ಆರೋಗ್ಯಕ್ಕೆ ರಾಮಬಾಣ. ಮಾಗಿದ ಬಾಳೆಹಣ್ಣು ದೇಹಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತೆ, ಜೊತೆಗೆ ಉತ್ತಮ ಆರೋಗ್ಯಕ್ಕೂ ಇದು ಸಹಕಾರಿ. ಕಚ್ಚಾ ಬಾಳೆಹಣ್ಣು ಸಹ ದೇಹಕ್ಕೆ ತುಂಬಾನೆ ಉತ್ತಮ ಹಣ್ಣು ಎಂದು ಪರಿಗಣಿಸಲಾಗುತ್ತೆ.
ಬಾಳೆಹಣ್ಣಿನಲ್ಲಿ ನಾರಿನಂಶ, ಪೊಟ್ಯಾಸಿಯಮ್, ವಿಟಮಿನ್, ಬಿ6, ವಿಟಮಿನ್ ಸಿ(Vitamin C), ಆಂಟಿ ಒಕ್ಸಿಡಾಂಟ್ಸ್ ಮತ್ತು ಫೈಟೋನ್ಯೂಟ್ರಿಯೆಂಟ್ ಸಮೃದ್ಧವಾಗಿವೆ. ನೀವು ಬಾಳೆಹಣ್ಣಿನ ಚಿಪ್ಸ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿದರೆ, ಅದು ನಿಮ್ಮನ್ನು ದೀರ್ಘಕಾಲದವರೆಗೆ ಶಕ್ತಿಯುತವಾಗಿರಿಸುತ್ತೆ. ಇದರಿಂದ ತೂಕದ ಮೇಲೆ ಹೆಚ್ಚಿನ ಪರಿಣಾಮ ಕೂಡ ಉಂಟಾಗೋದಿಲ್ಲ.
ಮಖಾನ (Makhana)
ನೀವು ಯಾವಾಗ ಬೇಕಾದರೂ ಮಖಾನಾವನ್ನುಮಂಚಿಂಗ್ ಸ್ನಾಕ್ಸ್ ಆಗಿ ಸೇವಿಸಬಹುದು. ನೀವು ಅದಕ್ಕೆ ನಿಮಗೆ ಬೇಕೆನಿಸಿದ ರುಚಿಯನ್ನು ಸೇರಿಸಿ, ಸ್ನಾಕ್ಸ್ ತಯಾರಿಸಬಹುದು. ಇದು ಖಂಡಿತವಾಗಿಯೂ ನಿಮಗೆ ಇಷ್ಟವಾಗುತ್ತೆ.
ನೀವು ಪುದೀನಾ (Mint) ಸ್ಮೆಲ್ ಇಷ್ಟ ಪಡೋದಾದರೆ, ಮಖಾನ ಹುರಿಯುವಾಗ ಪುದೀನಾ ಎಲೆ ಅದರ ಮೇಲೆ ಹಾಕಿ. ಇದನ್ನು ತಿನ್ನೋದ್ರಿಂದ ಶಕ್ತಿ ಸಿಗುತ್ತೆ. ಈ ಸೀಸನ್ ನಲ್ಲಿ ನೀವು ಅನಾರೋಗ್ಯಕರ ಆಹಾರದ ಬದಲಾಗಿ, ಒಂದು ಹಿಡಿ ಒಣ ಹುರಿದ ಮಖಾನಾ ತಿನ್ನಬಹುದು.
ಪಾಪ್ ಕಾರ್ನ್ (Popcorn)
ನೀವು ವೈಟ್ ಲಾಸ್ ಮಾಡೋದರ ಜೊತೆಗೆ ಆರೋಗ್ಯಕರ ಸ್ನಾಕ್ಸ್ ಸೇವಿಸಲು ಬಯಸಿದರೆ, ನೀವು ಸಾಲ್ಟ್ ಹಾಕಿ ಹುರಿದ ಪಾಪ್ ಕಾರ್ನ್ ಸೇವಿಸಬಹುದು. ಹಾಟ್ ಪಾಪ್ ಕಾರ್ನ್ ಹಸಿವನ್ನು ನಿವಾರಿಸುತ್ತೆ ಮತ್ತು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವನೆ ನೀಡುತ್ತೆ .
ನೀವು ಪಾಪ್ ಕಾರ್ನ್ ನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸಹ ಸೇರಿಸಬಹುದು. ಇದು ಉತ್ತಮ ಡಯಟ್(Diet) ಆಗಿದೆ. ನೀವು ಹೊರಗೆ ಹೋದಾಗಲೆಲ್ಲಾ, ಅದನ್ನು ಸಹ ಪ್ಯಾಕ್ ಮಾಡಿ ತೊಗೊಂಡು ಹೋಗ್ಬಹುದು. ಅನಾರೋಗ್ಯಕರ ಆಹಾರದ ಬದಲು ಇದನ್ನು ಸೇವಿಸೋದು ಬೆಸ್ಟ್.
ಬಾದಾಮಿ(Almond)
ರುಚಿಕರವಾದ ತಿಂಡಿಗೆ ಬಾದಾಮಿ ಉತ್ತಮ ಆಯ್ಕೆಯಾಗಿದೆ. ರಾತ್ರಿ 5-6 ಬಾದಾಮಿ ನೆನಸಿ ಬೆಳಗ್ಗೆ ತಿನ್ನಿ. ಇದು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿದೆ. ಇದು ತೂಕ ಕಡಿಮೆ ಮಾಡಲು ಸಹ ಸಹಕಾರಿಯಾಗಿದೆ. ಬೇಕಿದ್ರೆ ನೀವೂ ಟ್ರೈ ಮಾಡಿ ನೋಡಿ.
ಬಾದಾಮಿ ಫೈಬರ್ (Fibre), ಉತ್ತಮ ಕೊಬ್ಬು, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಸಹ ಹೊಂದಿದೆ. ಇದರಲ್ಲಿರುವ ವಿಟಮಿನ್ ಇ ಆಂಟಿ-ಎಂಗೇಜಿಂಗ್ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ, ಇದು ಚರ್ಮಕ್ಕೆ ಒಳ್ಳೆಯದು. ಪ್ರತಿದಿನ ಇದನ್ನು ಸೇವಿಸಿ ನೋಡಿ.
ಹುರಿದ ಕಡಲೆ
ತೂಕ ಇಳಿಸುವ ಸ್ನಾಕ್ಸ್ ಗಳಲ್ಲಿ (Snacks) ಕಡಲೆಗೆ ಹೆಚ್ಚು ಆದ್ಯತೆ ನೀಡಲಾಗುತ್ತೆ . ಹುರಿದ ಕಡಲೆ ಪ್ರೋಟೀನ್ ಮತ್ತು ಫೈಬರ್ ಹೊಂದಿರುತ್ತೆ. ಹುರಿದ ಕಡಲೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತೆ. ಕಡಲೆ ತಿಂದರೆ ನೀವು ದೀರ್ಘಕಾಲದವರೆಗೆ ಹಸಿವು ಅನುಭವಿಸೋದಿಲ್ಲ, ಇದರಿಂದ ನೀವು ಮತ್ತೆ ಮತ್ತೆ ತಿನ್ನೋದನ್ನು ತಪ್ಪಿಸಬಹುದು.