ನಿಮ್ಮ ತಟ್ಟೆಯಲ್ಲಿ ಪನೀರ್, ಒಂದು ಹಿಡಿ ಬಾದಾಮಿ, ಒಂದು ಲೋಟ ಫ್ರುಟ್ ಜ್ಯೂಸ್, ಅಥವಾ ಒಂದು ಚಿಟಿಕೆ ತುಪ್ಪ ಇದ್ದರೆ ಅದು ಆರೋಗ್ಯಕ್ಕೆ ಉತ್ತಮ ಹೌದು. ಆದರೆ ಕೆಲವೊಮ್ಮೆ ನಾವು ಉತ್ತಮ ಎಂದು ಭಾವಿಸುವ ಆಹಾರವೇ ನಮ್ಮ ಆರೋಗ್ಯಕ್ಕೆ ಮುಳುವಾಗುತ್ತದೆ. ಅಂತಹ ಆಹಾರಗಳು ಯಾವುವು ನೋಡೋಣ.
ಪನೀರ್, ಬಾದಾಮಿ. ಫ್ರುಟ್ ಜ್ಯೂಸ್, ಎನರ್ಜಿ ಬಾರ್ ಎಲ್ಲವೂ ಆರೋಗ್ಯಕ್ಕೆ ಉತ್ತಮವಾದ ಆಹಾರಗಳು. ಆದರೆ ಈ ಆಹಾರಗಳನ್ನು ಸೇವಿಸುವಾಗ ನೀವು ಮಾಡುವ ತಪ್ಪಿನಿಂದಾಗಿ, ಆ ಆರೋಗ್ಯಕರ ಆಹಾರಗಳೇ ನಿಮ್ಮ ಆರೋಗ್ಯಕ್ಕೆ ಮುಳುವಾಗಬಹುದು. ಹಾಗಿದ್ರೆ ಯಾವ ರೀತಿಯ ಆಹಾರ ಸೇವಿಸಬಾರದು ಇಲ್ಲಿದೆ ಸಂಪೂರ್ಣ ಮಾಹಿತಿ.
27
ಪನೀರ್
ಸಸ್ಯಾಹಾರಿ ಆಹಾರಗಳಲ್ಲಿ ಪನೀರ್ ಪ್ರೋಟೀನ್ ಭರಿತ ಪ್ರಧಾನ ಆಹಾರವಾಗಿದೆ. ಇದು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ನಿಮ್ಮನ್ನು ಪೂರ್ಣವಾಗಿಡುತ್ತದೆ, ಆದರೆ ಹೆಚ್ಚು ತಿನ್ನುವುದರಿಂದ ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಹೆಚ್ಚಾಗುತ್ತದೆ ಮತ್ತು ತೂಕ ಹೆಚ್ಚಾಗುತ್ತದೆ. ಪನೀರ್ ಅನ್ನು ತರಕಾರಿಗಳು ಅಥವಾ ಧಾನ್ಯಗಳೊಂದಿಗೆ ಸೇರ್ಸಿ ತಿಂದರೆ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನ ಸಿಗುತ್ತದೆ.
37
ಬಾದಾಮಿ
ಬಾದಾಮಿ ಆರೋಗ್ಯಕರ ಕೊಬ್ಬುಗಳು, ಫೈಬರ್ ಮತ್ತು ವಿಟಮಿನ್‌ಗಳಿಂದ ತುಂಬಿರುತ್ತದೆ. ಅವುಗಳನ್ನು ಅತಿಯಾಗಿ ತಿನ್ನುವುದರಿಂದ ಮೂತ್ರದ ಆಕ್ಸಲೇಟ್ ಮಟ್ಟ ಹೆಚ್ಚಾಗಬಹುದು ಮತ್ತು ಕೆಲವು ಜನರಲ್ಲಿ ಮೂತ್ರಪಿಂಡದ ಕಲ್ಲುಗಳ ಅಪಾಯ ಹೆಚ್ಚಾಗುತ್ತದೆ. ಪ್ರತಿದಿನ ಒಂದು ಹಿಡಿ ತಿನ್ನುವುದರಿಂದ ನಿಮ್ಮ ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುತ್ತದೆ.
ಹಲವು ಪ್ಯಾಕ್ ಮಾಡಲಾದ ಫ್ರುಟ್ ಜ್ಯೂಸ್ ಹೆಚ್ಚುವರಿ ಸಕ್ಕರೆ ಹೊಂದಿರುತ್ತವೆ ಮತ್ತು ಫೈಬರ್ ಕೊರತೆಯನ್ನು ಹೊಂದಿರುತ್ತವೆ. ಇದನ್ನು ನಿಯಮಿತವಾಗಿ ಸೇವಿಸಿದರೆ ತೂಕ ಹೆಚ್ಚಾಗುವುದು ಮತ್ತು ಚಯಾಪಚಯ ಸಮಸ್ಯೆಗಳಿಗೆ ಕಾರಣವಾಗಬಹುದು. ನ್ಯಾಚುರಲ್ ಸಿಹಿಗಾಗಿ ಹಾಗೂ ಉತ್ತಮ ಆರೋಗ್ಯಕ್ಕಾಗಿ, ಫ್ರೆಶ್ ಆಗಿ ಮಾಡಿದ ಹಣ್ಣುಗಳ ಜ್ಯೂಸ್ ಕುಡಿಯಿರಿ ಅಥವಾ ಹಣ್ಣುಗಳನ್ನು ಸಂಪೂರ್ಣವಾಗಿ ಸೇವಿಸಿ.
57
ತುಪ್ಪ
ಭಾರತೀಯ ಅಡುಗೆ ಮನೆಯಲ್ಲಿ ತುಪ್ಪವು ಇದ್ದೆ ಇರುತ್ತದೆ, ಇದು ಅಡುಗೆಗೆ ರಿಚ್ ಪರಿಮಳವನ್ನು ನೀಡುತ್ತದೆ. ಆದರೆ, ಅತಿಯಾದ ತುಪ್ಪದ ಸೇವನೆ ಒಳ್ಳೆಯದಲ್ಲ. ತುಪ್ಪದಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಅಧಿಕವಾಗಿದ್ದು, ಇದು ಕೊಲೆಸ್ಟ್ರಾಲ್ ಮತ್ತು ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ತುಪ್ಪವನ್ನು ಮಿತವಾಗಿ ಬಳಸಿ ಮತ್ತು ಸುರಕ್ಷಿತ ಆಹಾರಕ್ಕಾಗಿ ಆಲಿವ್ ಅಥವಾ ಸಾಸಿವೆ ಎಣ್ಣೆಯಂತಹ ಇತರ ಆರೋಗ್ಯಕರ ಕೊಬ್ಬು ಬಳಸೋದು ಉತ್ತಮ.
67
ಮೊಸರು
ಮೊಸರು ಪ್ರೋಬಯಾಟಿಕ್‌ಗಳಿಂದ ತುಂಬಿದ್ದು, ಇದು ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯವನ್ನು ಬೆಂಬಲಿಸುತ್ತದೆ. ಆದರೆ ಫ್ಲೇವರ್ಡ್ ಮೊಸರುಗಳು ಹೆಚ್ಚಾಗಿ ಆಡೆಡ್ ಶುಗರ್ ಮತ್ತು ಕೃತಕ ಪದಾರ್ಥಗಳನ್ನು ಹೊಂದಿರುತ್ತವೆ. ಹಾಗಾಗಿಸ್ ಸಾಮಾನ್ಯ ಮೊಸರನ್ನು ಆರಿಸಿ ಮತ್ತು ಹೆಚ್ಚುವರಿ ಸಕ್ಕರೆ ಇಲ್ಲದೆ ಗರಿಷ್ಠ ಪ್ರಯೋಜನ ಪಡೆಯಲು ತಾಜಾ ಹಣ್ಣುಗಳು , ನ್ಯಾಚುರಲ್ ಸ್ವೀಟ್ ಆಡ್ ಮಾಡಿ.
77
ಎನರ್ಜಿ ಬಾರ್‌ಗಳು
ಎನರ್ಜಿ ಬಾರ್‌ಗಳನ್ನು ಆರೋಗ್ಯಕರ ತಿಂಡಿ ಎಂದು ಮಾರಾಟ ಮಾಡಲಾಗುತ್ತದೆ. ಆದರೆ ಹೆಚ್ಚಿನ ಎನರ್ಜಿ ಬಾರ್ ಗಳಲ್ಲಿ ಸಕ್ಕರೆ, ಅನಾರೋಗ್ಯಕರ ಫ್ಯಾಟ್ ಮತ್ತು ಪ್ರಿಸರ್ವೇಟೀವ್ ಇರುತ್ತದೆ. ಪದೆ ಪದೇ ಇದನ್ನು ಸೇವಿಸುವುದರಿಂದ ಕ್ಯಾಲೋರಿ ಹೆಚ್ಚಾಗುತ್ತದೆ ಮತ್ತು ಪೌಷ್ಟಿಕಾಂಶದ ಸಮತೋಲನ ಕಡಿಮೆಯಾಗುತ್ತದೆ. ನೈಸರ್ಗಿಕವಾಗಿ ಶಕ್ತಿ ಮತ್ತು ಪೋಷಣೆಯನ್ನು ಕಾಪಾಡಿಕೊಳ್ಳಲು ನಟ್ಸ್, ಸೀಡ್ಸ್ ಮತ್ತು ಹಣ್ಣುಗಳಂತಹ ಸಂಪೂರ್ಣ ಆಹಾರವನ್ನು ಸೇವಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.