IVF: ಮಗು ಪಡೆಯಲು ಹಂಬಲಿಸಿ IVF ಹೆಚ್ಚುವರಿಗೆ ಚಿಕಿತ್ಸೆಯಿಂದ ಮಗು ಪಡೆಯುವ ಸಾಧ್ಯತೆ ಹೆಚ್ಚುತ್ತದೆಯೇ?

Published : Jun 25, 2026, 01:29 PM IST

ಐವಿಎಫ್‌ (IVF) ಚಿಕಿತ್ಸೆ ವೇಳೆ ವೈದ್ಯರು ಸಾಮಾನ್ಯವಾಗಿ ಹೇಳುವ ಹೆಚ್ಚುವರಿ ಚಿಕಿತ್ಸೆಗಳು (ಆಡ್-ಆನ್‌ಗಳು) ಮಗುವನ್ನು ಪಡೆಯುವ ಸಾಧ್ಯತೆಯನ್ನು ಹೆಚ್ಚಿಸುವುದಿಲ್ಲ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಈ ಕುರಿತು ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ವರದಿ ಪ್ರಕಟವಾಗಿದೆ. 

PREV
17
IVF: ದುಬಾರಿ ‘ಆಡ್-ಆನ್‌ಗಳು’ ನಿಜವಾಗಿಯೂ ಮಗುವಿನ ಸಾಧ್ಯತೆ ಹೆಚ್ಚಿಸುತ್ತಾ?

ನವದೆಹಲಿ: ಐವಿಎಫ್‌ (IVF) ಚಿಕಿತ್ಸೆ ವೇಳೆ ವೈದ್ಯರು ಸಾಮಾನ್ಯವಾಗಿ ಹೇಳುವ ಹೆಚ್ಚುವರಿ ಚಿಕಿತ್ಸೆಗಳು (ಆಡ್-ಆನ್‌ಗಳು) ಮಗುವನ್ನು ಪಡೆಯುವ ಸಾಧ್ಯತೆಯನ್ನು ಹೆಚ್ಚಿಸುವುದಿಲ್ಲ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಈ ಕುರಿತು ಆಸ್ಟ್ರೇಲಿಯಾ ಮತ್ತು ಯುರೋಪ್‌ನ ಸಂಶೋಧಕರು ನಡೆಸಿದ ಪುರಾವೆಗಳ ಪರಿಶೀಲನೆ ವರದಿ ಮಂಗಳವಾರ ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.

27
IVF ಎಂದರೇನು?

ಐವಿಎಫ್‌ ಒಂದು ಫಲವತ್ತತೆ ಚಿಕಿತ್ಸೆ(Fertility treatment)ಯಾಗಿದ್ದು, ಮಹಿಳೆಯ ಅಂಡಾಣು ಮತ್ತು ಪುರುಷನ ವೀರ್ಯವನ್ನು ಪ್ರಯೋಗಾಲಯದಲ್ಲಿ ಸೇರಿಸಿ ಭ್ರೂಣವನ್ನು ಸೃಷ್ಟಿಸಲಾಗುತ್ತದೆ. ಬಳಿಕ ಆ ಭ್ರೂಣವನ್ನು ಮಹಿಳೆಯ ಗರ್ಭಾಶಯದಲ್ಲಿ ಇರಿಸಲಾಗುತ್ತದೆ.

37
IVF: 10 ಜನಪ್ರಿಯ ಆಡ್-ಆನ್‌ಗಳ ಪರಿಶೀಲನೆ

ಸಂಶೋಧಕರು ಐವಿಎಫ್‌ ಚಿಕಿತ್ಸೆಯೊಂದಿಗೆ ನೀಡಲಾಗುವ 10 ಸಾಮಾನ್ಯ ಆಡ್-ಆನ್‌ಗಳನ್ನು ಪರಿಶೀಲಿಸಿದ್ದಾರೆ. ಇವು ಹೆಚ್ಚುವರಿ ಔಷಧಿಗಳು, ವೈದ್ಯಕೀಯ ವಿಧಾನಗಳು ಅಥವಾ ಪ್ರಯೋಗಾಲಯ ತಂತ್ರಜ್ಞಾನಗಳಾಗಿದ್ದು, ಗರ್ಭಧಾರಣೆ ಅಥವಾ ಮಗುವಿನ ಜನನದ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂಬ ನಿರೀಕ್ಷೆಯಿಂದ ಹೆಚ್ಚುವರಿ ಶುಲ್ಕದೊಂದಿಗೆ ನೀಡಲಾಗುತ್ತದೆ.

47
IVF: ಐವಿಎಫ್‌ ಯಶಸ್ಸಿನ ಪ್ರಮಾಣ ಎಷ್ಟು?

ಐವಿಎಫ್‌ ಚಿಕಿತ್ಸೆ ಎಲ್ಲ ಸಂದರ್ಭಗಳಲ್ಲೂ ಯಶಸ್ವಿಯಾಗುವುದಿಲ್ಲ. ಸರಾಸರಿಯಾಗಿ 30ರಿಂದ 40 ಶೇಕಡಾ ಚಿಕಿತ್ಸಾ ಚಕ್ರಗಳು ಮಾತ್ರ ಗರ್ಭಧಾರಣೆಗೆ ಕಾರಣವಾಗುತ್ತವೆ. ಮಹಿಳೆಯ ವಯಸ್ಸು ಹೆಚ್ಚಿದಂತೆ ಯಶಸ್ಸಿನ ಸಾಧ್ಯತೆ ಮತ್ತಷ್ಟು ಕಡಿಮೆಯಾಗುತ್ತದೆ ಎಂದು ವರದಿ ತಿಳಿಸಿದೆ.

57
IVF: ಹೆಚ್ಚಿನ ದಂಪತಿಗಳು ಹೆಚ್ಚುವರಿ ಚಿಕಿತ್ಸೆಗಳತ್ತ ಒಲವು ಏಕೆ?

ಐವಿಎಫ್‌ ಯಶಸ್ಸಿನ ಪ್ರಮಾಣ ಸೀಮಿತವಾಗಿರುವುದರಿಂದ, ಅನೇಕ ದಂಪತಿಗಳು ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸಬಹುದು ಎಂಬ ಭರವಸೆಯಲ್ಲಿ ದುಬಾರಿ ಆಡ್-ಆನ್‌ಗಳಿಗೆ ಹೆಚ್ಚುವರಿ ಹಣ ಪಾವತಿಸುತ್ತಾರೆ. ಆದರೆ ಹೊಸ ಅಧ್ಯಯನದ ಪ್ರಕಾರ, ಇಂತಹ ಹೆಚ್ಚಿನ ಆಡ್-ಆನ್‌ಗಳಿಂದ ನಿರೀಕ್ಷಿತ ಪ್ರಯೋಜನ ಸಿಗುವುದಿಲ್ಲ

67
ಐವಎಫ್ ಉದ್ಯಮ ಮಾರುಕಟ್ಟೆ ವಿಸ್ತರಣೆ

ಭಾರತದ ಫಲವತ್ತತೆ ಉದ್ಯಮವೂ ವೇಗವಾಗಿ ವಿಸ್ತರಿಸುತ್ತಿದೆ. 2024 ರಲ್ಲಿ ಐವಿಎಫ್ ಮಾರುಕಟ್ಟೆಯ ಮೌಲ್ಯ ಸುಮಾರು $961 ಮಿಲಿಯನ್ ಆಗಿದ್ದು, 2030 ರ ವೇಳೆಗೆ ಸುಮಾರು $1.5 ಬಿಲಿಯನ್ ತಲುಪುವ ನಿರೀಕ್ಷೆಯಿದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಟೆಕ್‌ಸೈ ರಿಸರ್ಚ್ ತಿಳಿಸಿದೆ. 

77
ಬಂಜೆತನ

ವಿಶ್ವಸಂಸ್ಥೆಯ 2025 ರ ವಿಶ್ವ ಜನಸಂಖ್ಯಾ ವರದಿಯ ಪ್ರಕಾರ ಭಾರತದಲ್ಲಿ ಸುಮಾರು 27.5 ಮಿಲಿಯನ್ ದಂಪತಿಗಳು ಬಂಜೆತನ ಅನುಭವಿಸುತ್ತಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories