ಫೋನ್ ಮಾಡೋದಕ್ಕೆ ಭಯ, ಮೆಸೇಜ್ ಓಕೆ… Gen-Zಗಳಲ್ಲಿ ಹೆಚ್ಚಾಗ್ತಿದೆ Telephobia!

Published : Jun 24, 2026, 09:35 PM IST

Telephobia: ಇಂದಿನ Gen-Z ಗಳು ಫೋನ್ ಕಾಲ್ ಮಾಡುವುದಕ್ಕಿಂತ ಮೆಸೇಜ್ ಕಳುಹಿಸುವುದನ್ನು ಇಷ್ಟಪಡುತ್ತಾರೆ. 'ಟೆಲಿಫೋಬಿಯಾ' ಕರೆಗಳ ಭಯ ಇದಕ್ಕೆ ಕಾರಣವೇ? ಕಾರಣಗಳು, ಲಕ್ಷಣಗಳು ಮತ್ತು ಅದನ್ನು ನಿವಾರಿಸಲು ಸರಳ ಮಾರ್ಗಗಳು ಯಾವುವು ಅನ್ನೋದನ್ನು ನೋಡೋಣ. 

PREV
17
Gen-Z ಗಳಲ್ಲಿ ಹೆಚ್ಚಾಗ್ತಿದೆ ಟೆಲಿಫೋಬಿಯಾ?

ಒಂದು ಕಾಲದಲ್ಲಿ ಯಾವುದೇ ಪ್ರಮುಖ ಕೆಲಸವನ್ನು ಮಾಡುವುದಕ್ಕೂ ಫೋನ್ ಕರೆ ಮಾಡುವುದನ್ನು ಸುಲಭವಾದ ಮಾರ್ಗವೆಂದು ಪರಿಗಣಿಸಲಾಗಿತ್ತು, ಆದರೆ ಇಂದಿನ Gen-Z ಕಾಲ್ ಮಾಡುವುದು ಅಥವಾ ಉತ್ತರಿಸುವುದನ್ನು ತಪ್ಪಿಸುತ್ತದೆ. ಫೋನ್‌ನಲ್ಲಿ ಮಾತನಾಡುವ ಬದಲು ಟೆಕ್ಸ್ಟ್ ಮೆಸೇಜ್ ಕಳುಹಿಸುವುದು, ವಾಟ್ಸಾಪ್, ಇನ್‌ಸ್ಟಾಗ್ರಾಮ್ ಡಿಎಂಗಳು ಅಥವಾ ಇಮೇಲ್ ಮೂಲಕ ಮಾತುಕತೆ ನಡೆಸುವುದು ಅವರಿಗೆ ಸುಲಭ ಮತ್ತು ಹೆಚ್ಚು ಆರಾಮದಾಯಕವಾಗಿದೆ. ಈ ಬದಲಾವಣೆಯು ಕೆಲವರಿಗೆ ವಿಚಿತ್ರವೆನಿಸಬಹುದು, ಆದರೆ ಇದರ ಹಿಂದೆ ಕೇವಲ ಅನುಕೂಲತೆ ಮಾತ್ರವಲ್ಲ; 'ಟೆಲಿಫೋಬಿಯಾ' ಎಂಬ ಮಾನಸಿಕ ಕಾರಣವೂ ಇದೆ.

27
ಟೆಲಿಫೋಬಿಯಾ ಎಂದರೇನು ?

ಟೆಲಿಫೋಬಿಯಾ ಎಂದರೆ ಫೋನ್‌ನಲ್ಲಿ ಮಾತನಾಡುವುದರೊಂದಿಗೆ ಸಂಬಂಧಿಸಿದ ಭಯ, ಆತಂಕ ಅಥವಾ ಅಸ್ವಸ್ಥತೆ. ಕೆಲವು ಜನರು ಅಪರಿಚಿತರೊಂದಿಗೆ ಮಾತನಾಡಲು ಹೆದರುತ್ತಾರೆ, ಆದರೆ ಇನ್ನೂ ಕೆಲವರು ಫೋನ್ ನಲ್ಲಿ ಮಾತನಾಡುತ್ತಿರುವ ವ್ಯಕ್ತಿ ತಾವು ಹೇಳುವುದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಬಗ್ಗೆ ಚಿಂತಿಸುತ್ತಾರೆ. ಅಂತಹ ವ್ಯಕ್ತಿಗಳು ಸಾಮಾನ್ಯವಾಗಿ ಫೋನ್ ಕರೆ ಮಾಡುವ ಬದಲು ಟೆಕ್ಸ್ಟ್ ಮೆಸೇಜ್ ಕಳುಹಿಸಲು ಬಯಸುತ್ತಾರೆ.

37
ಮಾನಸಿಕ ಆರೋಗ್ಯದ ಮೇಲೆ ಪರಿಣಾಮ

ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳು ಪ್ರಕಟಿಸಿದ ಸಂಶೋಧನೆಯ ಪ್ರಕಾರ, ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಈ ಭಯವು ತುಂಬಾ ಸಾಮಾನ್ಯವಾಗಿದೆ. ನಿರಂತರ ಒತ್ತಡ, ನಿದ್ರಾಹೀನತೆ ಮತ್ತು ಕೆಲಸದ ಒತ್ತಡವು ಫೋನ್ ರಿಂಗಣಿಸುವುದನ್ನು ಸಹ ಪ್ರಚೋದಿಸುತ್ತದೆ. ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

47
Gen-Z ಏಕೆ ಮೆಸೇಜ್ ಮಾಡಲು ಇಷ್ಟ ಪಡುತ್ತಾರೆ?

ಇಂದಿನ ಯುವ ಪೀಳಿಗೆ ಡಿಜಿಟಲ್ ಜಗತ್ತಿನಲ್ಲಿ ಬೆಳೆದಿದೆ. ಹಿಂದಿನ ತಲೆಮಾರುಗಳಿಗೆ ಫೋನ್‌ನಲ್ಲಿ ಮಾತನಾಡುವುದು ಸಾಮಾನ್ಯವಾದಂತೆಯೇ, ಇಂದಿನ Gen-Z ಗಳಿಗೆ ಚಾಟ್ ಮಾಡುವುದು ಸಾಮಾನ್ಯವಾಗಿದೆ. ಮೆಸೇಜ್ ಮಾಡುವುದರ ದೊಡ್ಡ ಪ್ರಯೋಜನವೆಂದರೆ ತಕ್ಷಣ ಪ್ರತಿಕ್ರಿಯಿಸುವ ಒತ್ತಡವಿಲ್ಲ. ಬಿಡುವಿನ ವೇಳೆಯಲ್ಲಿ ಯೋಚಿಸಲು ಮತ್ತು ಮೆಸೇಜ್ ಫಾರ್ಮ್ ಮಾಡಲು ಸಮಯ ತೆಗೆದುಕೊಳ್ಳಬಹುದು, ಆದರೆ ಫೋನ್ ಕರೆಗಳಿಗೆ ತ್ವರಿತ ಪ್ರತಿಕ್ರಿಯೆಯ ಅಗತ್ಯವಿರುತ್ತದೆ, ಇದು ಅನೇಕ ಜನರಿಗೆ ಒತ್ತಡವನ್ನುಂಟು ಮಾಡುತ್ತದೆ.

57
ಫೋನ್ ಕರೆಗಳು ಆತಂಕಕ್ಕೆ ಕಾರಣವಾಗುವುದೇಕೆ?

ತಜ್ಞರ ಪ್ರಕಾರ, ಫೋನ್‌ನಲ್ಲಿ ಮಾತನಾಡುವಾಗ, ನಾವು ಇನ್ನೊಬ್ಬ ವ್ಯಕ್ತಿಯ ಮುಖಭಾವಗಳನ್ನು ನೋಡಲು ಸಾಧ್ಯವಿಲ್ಲ. ಇದರಿಂದಾಗಿ ಇನ್ನೊಬ್ಬ ವ್ಯಕ್ತಿ ಏನು ಯೋಚಿಸುತ್ತಿದ್ದಾನೆಂದು ಅಳೆಯುವುದು ಕಷ್ಟ. ಅನೇಕ ಯುವಕರು ನಾನೇನಾದರು ತಪ್ಪು ಮಾತನಾಡಿದರೆ ಅಥವಾ ತಮ್ಮ ಮಾತುಗಳನ್ನು ಅವರು ತಪ್ಪಾಗಿ ಅರ್ಥೈಸಿಕೊಂಡರೆ ಎಂದು ಭಯಪಡುತ್ತಾರೆ. ಅನಿರೀಕ್ಷಿತ ಕರೆಗಳು ಸಹ ಅನೇಕ ಜನರನ್ನು ಅಶಾಂತಗೊಳಿಸುತ್ತವೆ ಏಕೆಂದರೆ ಅವರಿಗೆ ತಯಾರಿ ಮಾಡಲು ಸಮಯವಿರುವುದಿಲ್ಲ. ಅದಕ್ಕಾಗಿಯೇ ಅನೇಕ ಯುವಕರು ಕರೆಯನ್ನು ಡಿಸ್ ಕನೆಕ್ಟ್ ಮಾಡಿ, ಮೊದಲು ಮೆಸೇಜ್ ಮಾಡಿ, ಏನು ಎಂದು ಕೇಳುತ್ತಾರೆ.

67
ಸೋಶಿಯಲ್ ಮೀಡಿಯಾ ಈ ಅಭ್ಯಾಸವನ್ನು ಬದಲಿಸಿದೆ

ಸೋಶಿಯಲ್ ಮೀಡಿಯಾ ಮತ್ತು ಮೆಸೆಂಜಿಂಗ್ ಅಪ್ಲಿಕೇಶನ್‌ಗಳು ನಾವು ಸಂವಹನ ನಡೆಸುವ ವಿಧಾನವನ್ನು ಸಂಪೂರ್ಣವಾಗಿ ಪರಿವರ್ತಿಸಿವೆ. ಜನರು ಈಗ ತಮ್ಮ ಆಲೋಚನೆಗಳನ್ನು ಶಾರ್ಟ್ ಮೆಸೇಜ್, ವಾಯ್ಸ್ ಮೆಸೇಜ್, ಎಮೋಜಿಗಳು ಮತ್ತು ರಿಪ್ಲೈ ಮೂಲಕ ಸುಲಭವಾಗಿ ತಿಳಿಸುತ್ತಾರೆ. ಚಾಟಿಂಗ್ ಕ್ರಮೇಣ ಫೋನ್ ಕರೆಗಳನ್ನು ಬದಲಾಯಿಸಿದೆ. ಪರಿಣಾಮವಾಗಿ, ಅನೇಕ ಯುವಕರು ಫೋನ್‌ನಲ್ಲಿ ಮಾತನಾಡುವ ಅಭ್ಯಾಸವನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಕರೆ ಬರುವಾಗ ಒಂಥರಾ ಭಯ ಶುರುವಾಗುತ್ತದೆ.

77
ಈ ಭಯವನ್ನು ಅಂದ್ರೆ Telephobia ಹೇಗೆ ಕಡಿಮೆ ಮಾಡಬಹುದು?
  • ಸಣ್ಣ ಮತ್ತು ಸಿಂಪಲ್ ಕಾಲ್ ಗಳೊಂದಿಗೆ ಪ್ರಾರಂಭಿಸಿ.
  • ಪ್ರಮುಖ ಅಂಶಗಳನ್ನು ಮುಂಚಿತವಾಗಿ ಬರೆದಿಟ್ಟುಕೊಳ್ಳಿ.
  • ಕರೆ ಮಾಡುವ ಮೊದಲು ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ನಿಮ್ಮನ್ನು ಶಾಂತಗೊಳಿಸಿ.
  • ಕುಟುಂಬ ಅಥವಾ ಸ್ನೇಹಿತರೊಂದಿಗೆ ಫೋನ್‌ನಲ್ಲಿ ಮಾತನಾಡುವುದನ್ನು ಅಭ್ಯಾಸ ಮಾಡಿ.
  • ಪ್ರತಿಯೊಂದು ಕರೆಯನ್ನು ಪರ್ಫೆಕ್ಟ್ ಆಗಿರಬೇಕು ಎನ್ನುವ ಸ್ಟ್ರೆಸ್ ತೆಗೆದುಕೊಳ್ಳಬೇಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories