ಕೆಲವೊಂದು ಲಕ್ಷಣಗಳು ಕಂಡಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಸಣ್ಣಮಟ್ಟದ ಅನಾರೋಗ್ಯದ ಲಕ್ಷಣಗಳ ನಿರ್ಲಕ್ಷ್ಯ ಭವಿಷ್ಯದಲ್ಲಿ ಆರೋಗ್ಯಕ್ಕೆ ದೊಡ್ಡಮಟ್ಟದಲ್ಲಿ ಅಪಾಯವನ್ನುಂಟು ಮಾಡುತ್ತವೆ. ಸಾಮಾನ್ಯವಾಗಿ ಪುರುಷರು ಆರೋಗ್ಯದ ಬಗ್ಗೆ ಹೆಚ್ಚಾಗಿ ಅಸಡ್ಡೆ ಮನೋಭಾವವನ್ನು ಹೊಂದಿರುತ್ತಾರೆ. ಈ ಅಸಡ್ಡೆ ಅಪಾಯಕಾರಿ ರೋಗಗಳಿಗೆ ಕಾರಣವಾಗುತ್ತದೆ.
25
ಮೂತ್ರ ವಿಸರ್ಜನೆಯಲ್ಲಿ ತೊಂದರೆ
ಮೂತ್ರ ವಿಸರ್ಜನೆಯಲ್ಲಿ ಸಮಸ್ಯೆಯುಂಟಾಗುತ್ತಿದ್ರೆ ನಿರ್ಲಕ್ಷ್ಯ ಮಾಡದೇ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ಮೂತ್ರ ವಿಸರ್ಜಿಸುವಾಗ ನೋವು ಅಥವಾ ಅಸ್ವಸ್ಥತೆ, ಮೂತ್ರದ ಬಣ್ಣದಲ್ಲಿ ಬದಲಾವಣೆ, ರಕ್ತ ಬರುತ್ತಿದ್ರೆ ಗಂಭೀರವಾಗಿ ಪರಿಗಣಿಸಬೇಕು. ಈ ಲಕ್ಷಣಗಳು ಮೂತ್ರಪಿಂಡದ ಕಲ್ಲುಗಳಿಂದ ಹಿಡಿದು ಪ್ರಾಸ್ಟೇಟ್ ಕ್ಯಾನ್ಸರ್ ಇರಬಹುದು. ಹಾಗಾಗಿ ವೈದ್ಯರನ್ನು ಸಂಪರ್ಕಿಸಬೇಕು.
35
ಎದೆ ನೋವು ಅಥವಾ ಉಸಿರಾಟದ ತೊಂದರೆ
ಎದೆನೋವು ಅಥವಾ ಎದೆ ಭಾಗದಲ್ಲಿ ನೋವು ಸೆಳೆತೆ, ಎದೆಭಾರ ಅನ್ನಿಸಿದ್ರೆ ತಪ್ಪದೇ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಬೆನ್ನು ನೋವು, ಉಸಿರಾಟದ ಸಮಸ್ಯೆಯಂತಹ ತೊಂದರೆಗಳು ಹಲವು ಕಾಯಿಲೆಗಳ ಆರಂಭಿಕ ಲಕ್ಷಣಗಳಾಗಿರುತ್ತವೆ. ಈ ಲಕ್ಷಣಗಳಿದ್ರೆ ಆರೋಗ್ಯದ ಕಾಳಜಿಗೆ ಪ್ರಮುಖ ಆದ್ಯತೆಯನ್ನು ನೀಡಬೇಕು.
ಪುರುಷರು ಕಾಲ ಕಾಲಕ್ಕೆ ಜನಾಂಗಗಳನ್ನು ಪರಿಶೀಲಿಸಿಕೊಳ್ಳಬೇಕು ಮತ್ತು ಈ ಭಾಗವನ್ನು ಶುಚಿಯಾಗಿಟ್ಟುಕೊಳ್ಬೇಕು. ಈ ಭಾಗದಲ್ಲಿ ಗಡ್ಡೆ/ಮಚ್ಚೆ/ ಹುಣ್ಣುಗಳು ಗಮನಿಸಿದ್ರೆ ವೈದ್ಯರನ್ನು ಸಂಪರ್ಕಿಸಿ. ಇಂದಿನ ಯುವ ಪೀಳಿಗೆಯ ಯುವಕರಲ್ಲಿ ವೃಷಣ ಕ್ಯಾನ್ಸರ್ ಸಾಮಾನ್ಯವಾಗುತ್ತಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ಹಾಗಾಗಿ ಈ ಬಗ್ಗೆಯೂ ಪುರುಷರು ಎಚ್ಚರಿಕೆಯಿಂದಿರಬೇಕು.
ಕೆಲವರಿಗೆ ತುಂಬಾ ಬಾಯಾರಿಕೆಯಾಗುತ್ತಿರುತ್ತವೆ. ಕೆಲವೊಮ್ಮೆ ಬಾಯಾರಿಕೆ ಹವಾಮಾನ ಬದಲಾವಣೆಗೆ ಸಂಬಂಧಿಸಿದ್ದಾಗಿರುತ್ತದೆ. ಆದ್ರೆ ಎಲ್ಲಾ ಸಮಯದಲ್ಲಿಯೂ ನಿಮಗೆ ಅತಿಹೆಚ್ಚು ಬಾಯಾರಿಕೆ ಆಗ್ತಿದ್ರೆ ಅದು ಮಧುಮೇಹದ ಲಕ್ಷಣವಾಗಿರಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.