ಬೆಳಗ್ಗೆ, ಮಧ್ಯಾಹ್ನ, ಸಂಜೆ ಬಾಳೆಹಣ್ಣು ತಿಂದ್ರೆ ಏನಾಗುತ್ತೆ? ತಜ್ಞರ ಸಲಹೆ ಹೀಗಿದೆ

Published : Sep 09, 2025, 03:28 PM IST

ದಿನವಿಡೀ ಬಾಳೆಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯಿರಿ. ಜೀರ್ಣಕ್ರಿಯೆ ಸುಧಾರಣೆ, ಶಕ್ತಿ ವರ್ಧನೆ, ಹೃದಯದ ಆರೋಗ್ಯ ಸೇರಿದಂತೆ ಹಲವು ಉಪಯೋಗಗಳನ್ನು ಬಾಳೆಹಣ್ಣು ಹೊಂದಿದೆ. ಬಾಳೆಹಣ್ಣು ಯಾವ ಸಮಯದಲ್ಲಿ ತಿಂದರೆ ಯಾವ ಪ್ರಯೋಜನ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

PREV
17

ಊಟ ಮಾಡಿದ್ಮೇಲೆ ಬಾಳೆಹಣ್ಣು ತಿನ್ನುವ ಅಭ್ಯಾಸ ದಕ್ಷಿಣ ಭಾರತೀಯರಲ್ಲಿದೆ. ಕಡಿಮೆ ಬೆಲೆಗೆ ಮತ್ತು ಹೆಚ್ಚು ಆರೋಗ್ಯಕರ ಹಣ್ಣು ಅಂದ್ರೆ ಬಾಳೆಹಣ್ಣು. ಬಹುತೇಕರು ಇದನ್ನು ಸಾಮಾನ್ಯ ಹಣ್ಣು ಎಂದು ತಿಳಿದುಕೊಂಡಿರುತ್ತಾರೆ. ವಾಸ್ತವವಾಗಿ ಬಾಳೆಹಣ್ಣು ಶಕ್ತಿ, ಪೋಷಣೆ ಮತ್ತು ಆರೋಗ್ಯ ಪ್ರಯೋಜನಗಳಿಂದ ತುಂಬಿರುವ ಹಣ್ಣು ಆಗಿದೆ.

27

ಸರಿಯಾದ ಸಮಯದಲ್ಲಿ ಬಾಳೆಹಣ್ಣು ಸೇವಿಸದರೆ ಇದರ ಆರೋಗ್ಯಕರ ಪ್ರಯೋಜನಗಳು ದುಪ್ಪಟ್ಟು ಆಗುತ್ತದೆ. ಬಾಳೆಹಣ್ಣಿನಲ್ಲಿರುವ ಅಂಶಗಳು ದೇಹವನ್ನು ರೋಗಗಳಿಂದ ರಕ್ಷಣೆ ಮಾಡುವ ಕೆಲಸ ಮಾಡುತ್ತದೆ. ಬಾಳೆಹಣ್ಣು ಆರೋಗ್ಯ ಶಕ್ತಿಯ ಕೇಂದ್ರಬಿಂದು ಎಂದು ವೈದ್ಯರು ಹೇಳುತ್ತಾರೆ.

37

1.ಬೆಳಗ್ಗೆ ಬಾಳೆಹಣ್ಣು ಸೇವನೆ

  • ಬೆಳಗ್ಗೆ ಬಾಳೆಹಣ್ಣು ಸೇವನೆ ದೇಹಕ್ಕೆ ತಕ್ಷಣ ಶಕ್ತಿ ಸಿಗುತ್ತದೆ.
  • ಬಾಳೆಹಣ್ಣಿನಲ್ಲಿರೋ ವಿಟಮಿನ್ ಬಿ6 ಮತ್ತು ಪೊಟ್ಯಾಸಿಯಮ್ ರಕ್ತಪರಿಚಲನೆ ಸುಧಾರಿಸುತ್ತೆ
  • ಜೀರ್ಣಕ್ರಿಯೆಯನ್ನು ಸುಧಾರಿಸುತ್ತೆ ಮತ್ತು ಮಲಬದ್ಧತೆಯಂತಹ ಸಮಸ್ಯೆ ಕಡಿಮೆಯಾಗುತ್ತೆ.
47

2.ವ್ಯಾಯಾಮಕ್ಕೂ ಮುನ್ನ ಬಾಳೆಹಣ್ಣು ಸೇವನೆ

  • ಜಿಮ್‌/ಯೋಗ ಮಾಡೋರಿಗೆ ಬಾಳೆಹಣ್ಣು ಉತ್ತಮವಾದ ಆಯ್ಕೆ
  • ಬಾಳೆಹಣ್ಣಿನಲ್ಲಿರುವ ಕಾರ್ಬೋಹೈಡ್ರೇಟ್‌ಗಳು ಮತ್ತು ನೈಸರ್ಗಿಕ ಸಕ್ಕರೆಯು ತ್ವರಿತ ಶಕ್ತಿ ಹೆಚ್ಚಿಸುತ್ತೆ
  • ಪೊಟ್ಯಾಸಿಯಮ್ ಸ್ನಾಯು ಸಾಮರ್ಥ್ಯ, ಸೆಳೆತ ನಿಯಂತ್ರಿಸುತ್ತೆ
  • ಇಡೀ ದಿನ ನಿಮ್ಮನ್ನು ಆಕ್ಟಿವ್ ಆಗಿರುಸುತ್ತೆ
57

3.ಮಧ್ಯಾಹ್ನ ಬಾಳೆಹಣ್ಣು ಸೇವನೆ

  • ಮಧ್ಯಾಹ್ನ ಊಟದ ನಂತರ ಬಾಳೆಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
  • ಫೈಬರ್‌ನಿಂದ ಜೀರ್ಣಕ್ರಿಯೆ ಸುಧಾರಣೆ, ಕರುಳಿನ ಆರೋಗ್ಯಕ್ಕೆ ಬಾಳೆಹಣ್ಣು ಉತ್ತಮ ಆಯ್ಕೆ
  • ದೇಹದಲ್ಲಿರುವ ವಿಷ ಹೊರಹಾಕುತ್ತೆ. ಹೊಟ್ಟೆಯ ಕಿರಿಕಿರಿ ಮತ್ತು ಆಮ್ಲೀಯತೆ ಸಮಸ್ಯೆಗೆ ಪರಿಹಾರ
67

4.ಸಂಜೆ ಬಾಳೆಹಣ್ಣು ಸೇವನೆ

ಸಂಜೆ ಹಸಿವಾದಾಗ ಜನರು ಜಂಕ್‌ ಫುಡ್ ತಿಂತಾರೆ. ಅದರ ಬದಲಾಗಿ ಬಾಳೆಹಣ್ಣು ತಿಂದ್ರೆ ಇದು ಸೌಮ್ಯವಾದ ಶಕ್ತಿಯನ್ನು ಒದಗಿಸುತ್ತದೆ. ಸಂಜೆಯ ಚಹಾದೊಂದಿಗೆ ಬಾಳೆಹಣ್ಣು ಕೂಡ ಉತ್ತಮ ಆರೋಗ್ಯಕರ ಸಂಯೋಜನೆಯಾಗಿದೆ.

77

ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸುವ ಮೂಲಕ ಹೃದಯವನ್ನು ಆರೋಗ್ಯವಾಗಿರುಸುತ್ತದೆ. ಇದರಲ್ಲಿರುವ ಫೈಬರ್ ಹಸಿವು ಆಗದಂತೆ ನೋಡಿಕೊಳ್ಳುತ್ತವೆ. ಬಾಳೆಹಣ್ಣಿನಲ್ಲಿರೋ ಟಮಿನ್ ಸಿ ಮತ್ತು ಬಿ6 ಚರ್ಮಕ್ಕೆ ಹೊಳಪು ನೀಡಿ, ಕೂದಲು ಆರೈಕೆಗೆ ಸಹಾಯ ಮಾಡುತ್ತದೆ. ಬಾಳೆಹಣ್ಣಿನಲ್ಲಿರೋ ಟ್ರಿಪ್ಟೊಫಾನ್ ಮೆದುಳಿನಲ್ಲಿ ಸಿರೊಟೋನಿನ್ ಉತ್ಪಾದಿಸಲು ಸಹಾಯ ಮಾಡುತ್ತದೆ. ಯಾವ ಸಮಯದಲ್ಲಾದ್ರೂ ಬಾಳೆಹಣ್ಣು ಸೇವಿಸಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories