ರಾತ್ರಿ ವೇಳೆ ಹೀಗೆಲ್ಲಾ ಆದ್ರೆ ನಿರ್ಲಕ್ಷಿಸ್ಬೇಡಿ, ಇದು ಬ್ರೈನ್ ಟ್ಯೂಮರ್ ಲಕ್ಷಣವಾಗಿರಬಹುದು

Published : Nov 22, 2025, 05:09 PM IST

Early signs of brain tumour: ಬ್ರೈನ್ ಟ್ಯೂಮರ್.. ತುಂಬಾ ಗಂಭೀರವಾದ ಕಾಯಿಲೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ರೋಗಿ ಸಾಯಬಹುದು. ಬ್ರೈನ್ ಟ್ಯೂಮರ್‌ ಆದಾಗ ರಾತ್ರಿ ಮಲಗಿರುವಾಗ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ನಿರ್ಲಕ್ಷಿಸಬಾರದು ಎಂದು ತಜ್ಞರು ಹೇಳುತ್ತಾರೆ. 

PREV
16
ಗಂಭೀರವಾದ ಕಾಯಿಲೆ

ಬ್ರೈನ್ ಟ್ಯೂಮರ್ ಬಹಳ ಗಂಭೀರವಾದ ಕಾಯಿಲೆ. ಚಿಕಿತ್ಸೆ ತೆಗೆದುಕೊಳ್ಳಲು ಸ್ವಲ್ಪ ವಿಳಂಬವಾದರೂ ಸಾವಿಗೆ ಕಾರಣವಾಗಬಹುದು. ಬ್ರೈನ್ ಟ್ಯೂಮರ್ ಉಂಟಾದಾಗ ರಾತ್ರಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ತಜ್ಞರು ಹೇಳುತ್ತಾರೆ. ಈ ಲಕ್ಷಣಗಳನ್ನು ನಿರ್ಲಕ್ಷಿಸುವುದರಿಂದ ಮುಂದೆ ದೊಡ್ಡ ಪರಿಣಾಮ ಎದುರಿಸಬೇಕಾಗಬಹುದು. ಆದ್ದರಿಂದ ಈ ಬಗ್ಗೆ ಜಾಗೃತರಾಗಿರಬೇಕು.

26
ಚಿಕಿತ್ಸೆಯ ಮೇಲೆ ಅವಲಂಬಿತವಾಗಿರುತ್ತೆ

ಮೆದುಳಿನಲ್ಲಿ ಜೀವಕೋಶಗಳು ಇದ್ದಕ್ಕಿದ್ದಂತೆ ಬೆಳೆಯಲು ಪ್ರಾರಂಭಿಸಿದಾಗ ಅದನ್ನು ಬ್ರೈನ್ ಟ್ಯೂಮರ್ ಎಂದು ಕರೆಯಲಾಗುತ್ತದೆ. ಸೌಮ್ಯವಾದ ಗೆಡ್ಡೆಗಳು ಕ್ಯಾನ್ಸರ್ ಅಲ್ಲ. ಇವು ನಿಧಾನವಾಗಿ ಬೆಳೆಯುತ್ತವೆ. ಮತ್ತೊಂದೆಡೆ ಗಂಭೀರವಾದ ಗೆಡ್ಡೆಗಳು ವೇಗವಾಗಿ ಬೆಳೆಯುತ್ತವೆ. ಈ ಸಂದರ್ಭದಲ್ಲಿ ಅವು ಮಾರಕವೂ ಆಗಿರಬಹುದು. ಆದರೆ ಈ ಗೆಡ್ಡೆಗಳ ಲಕ್ಷಣಗಳು, ಅವು ಎಲ್ಲಿವೆ, ಅವು ಎಷ್ಟು ದೊಡ್ಡದಾಗಿವೆ..? ಅವು ಕ್ಯಾನ್ಸರ್ ಆಗಿದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಚಿಕಿತ್ಸೆಯು ಅವಲಂಬಿತವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

36
ವೈದ್ಯರ ಸಹಾಯ ಪಡೆಯಿರಿ

ನಿದ್ರೆಯ ಸಮಯದಲ್ಲಿ ಹಠಾತ್ ಈ ಲಕ್ಷಣ ಕಂಡಬಂದರೆ ಅದು ಬ್ರೈನ್ ಟ್ಯೂಮರ್ ಲಕ್ಷಣವಾಗಿದೆ. ಅವುಗಳನ್ನು ಕಡಿಮೆ ಅಂದಾಜು ಮಾಡಬೇಡಿ. ತುಂಬಾ ಗಂಭೀರವಾಗಬಹುದು. ಪ್ರಜ್ಞೆ ಕಳೆದುಕೊಳ್ಳಲು ಸಹ ಕಾರಣವಾಗಬಹುದು. ನೀವು ಆಗಾಗ್ಗೆ ಈ ಕೆಳಕಂಡ ಲಕ್ಷಣ ಅನುಭವಿಸುತ್ತಿದ್ದರೆ ತಕ್ಷಣ ವೈದ್ಯರ ಸಹಾಯವನ್ನು ಪಡೆಯಿರಿ.

46
ತೀವ್ರ ತಲೆನೋವು -ರಾತ್ರಿ ಮಲಗಿದಾಗ ವಾಂತಿ

ತೀವ್ರ ತಲೆನೋವಿನ ಜೊತೆಗೆ ರಾತ್ರಿ ಮಲಗಿದಾಗ ವಾಂತಿ ಮಾಡುವುದು ಸಹ ಬ್ರೈನ್ ಟ್ಯೂಮರ್ ಸಂಕೇತವಾಗಿರಬಹುದು. ಬೆಳಿಗ್ಗೆ ಎದ್ದ ತಕ್ಷಣ ವಾಂತಿ ಮಾಡುವುದು ಸಹ ಬ್ರೈನ್ ಟ್ಯೂಮರ್ ಸಂಕೇತವಾಗಿರಬಹುದು. ವಾಸ್ತವವಾಗಿ ಗೆಡ್ಡೆ ಮೆದುಳಿನ ಮೇಲೆ ಬೀರುವ ಒತ್ತಡವು ವಾಂತಿಗೆ ಕಾರಣವಾಗಬಹುದು.

56
ನಿದ್ರಾ ಭಂಗ

ಆಗಾಗ್ಗೆ ನಿದ್ರಾ ಭಂಗವು ಬ್ರೈನ್ ಟ್ಯೂಮರ್ ಲಕ್ಷಣವಾಗಿರಬಹುದು. ಆಗಾಗ್ಗೆ ನಿದ್ರಾ ಭಂಗ, ಕೆಲವರಲ್ಲಿ ಅತಿಯಾದ ನಿದ್ರಾಹೀನತೆ ಮತ್ತು ದಿನವಿಡೀ ತೂಕಡಿಕೆಯ ಭಾವನೆ ಬ್ರೈನ್ ಟ್ಯೂಮರ್ ಲಕ್ಷಣಗಳಾಗಿರಬಹುದು. ವಿವರಿಸಲಾಗದ ನಿದ್ರೆಯ ಅಡಚಣೆಗಳು ಬ್ರೈನ್ ಟ್ಯೂಮರ್ ಲಕ್ಷಣವಾಗಿರಬಹುದು ಎಂದು ತಜ್ಞರು ಹೇಳುತ್ತಾರೆ.

66
ವೈದ್ಯರನ್ನು ಸಂಪರ್ಕಿಸಿ

ಇವುಗಳ ಜೊತೆಗೆ ಆಗಾಗ್ಗೆ ತೀವ್ರ ತಲೆನೋವು, ದೃಷ್ಟಿ ಮಂದವಾಗುವುದು ಮತ್ತು ನಡವಳಿಕೆಯಲ್ಲಿನ ಬದಲಾವಣೆಗಳಂತಹ ಲಕ್ಷಣಗಳು ಕಂಡುಬಂದರೆ, ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಮುಖ್ಯ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

Read more Photos on
click me!

Recommended Stories