'ನಿದ್ದೆಗೆಟ್ಟೆಯಾ ಬುದ್ದಿಗೆಟ್ಟೆಯಾ' ಅನ್ನೋ ಗಾದೆ ಗೊತ್ತಲ್ಲ!.. ನಿದ್ದೆ ಟೈಂನಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ!

Published : Sep 23, 2026, 01:55 PM IST

ರಾತ್ರಿ ಚೆನ್ನಾಗಿ ನಿದ್ದೆ ಮಾಡಿದರೆ ಮಾತ್ರ ಬೆಳಗ್ಗೆ ಎದ್ದಾಗ ನಮಗೆ ಒಳ್ಳೆಯ ಎನರ್ಜಿ ಸಿಗುತ್ತದೆ. ಆದರೆ ಮಲಗುವ ಮುನ್ನ ನಾವು ಮಾಡುವ ಕೆಲವು ತಪ್ಪುಗಳು ನಿದ್ದೆಯನ್ನು ಹಾಳು ಮಾಡುತ್ತವೆ. ಅಂಥ 5 ಅಭ್ಯಾಸಗಳನ್ನು ಇಂದೇ ಬಿಟ್ಟುಬಿಡಿ. ಅದೇನು ಅಂತ ಇಲ್ಲಿ ನೋಡಿ..

PREV
16

ಮಲಗುವಾಗ ಮೊಬೈಲ್ ಬಳಸುವುದರಿಂದ ಸರ್ಕಾಡಿಯನ್ ರಿಥಮ್ (ದೇಹದ ಗಡಿಯಾರ) ಏರುಪೇರಾಗುತ್ತದೆ. ಇದರಿಂದ ನಿದ್ದೆ ಬರುವುದು ತಡವಾಗುತ್ತದೆ. ಜೊತೆಗೆ, ಯಾವುದೇ ರೀತಿಯ ಕೆಫೇನ್ ಯುಕ್ತ ಪಾನೀಯ ಕುಡಿಯಬೇಡಿ.

26

ರಾತ್ರಿ ಕೆಫೀನ್ ಇರುವ ಪಾನೀಯಗಳನ್ನು ಕುಡಿದರೆ ನಿದ್ದೆ ಬರುವುದಿಲ್ಲ. ಕಾಫಿ ಕುಡಿದ ಮೇಲೆ ಮಲಗಲು ಕನಿಷ್ಠ 6 ಗಂಟೆಗಳ ಗ್ಯಾಪ್ ಇರಲೇಬೇಕು.

36

ರಾತ್ರಿ ತಡವಾಗಿ ಹೆಚ್ಚು ಕ್ಯಾಲೋರಿ ಇರುವ ಊಟ ಮಾಡಬೇಡಿ. ಇದು ನಿದ್ದೆ ಕೆಡಿಸುವುದರ ಜೊತೆಗೆ ದೇಹದ ತೂಕ ಹೆಚ್ಚಾಗಲು ಕಾರಣವಾಗುತ್ತದೆ.

46

ರಾತ್ರಿ ಮಲಗುವ ಮುನ್ನ ಹೆವಿ ವ್ಯಾಯಾಮ ಮಾಡಿದರೆ ನಿದ್ದೆ ಬರುವುದು ಕಷ್ಟವಾಗುತ್ತದೆ. ಹಾಗಾಗಿ ಈ ಅಭ್ಯಾಸವನ್ನು ಬಿಟ್ಟುಬಿಡಿ.

56

ರಾತ್ರಿ ಹೊತ್ತು ಮದ್ಯಪಾನ ಮಾಡುವುದರಿಂದ ನಿದ್ದೆ ಪದೇ ಪದೇ ಡಿಸ್ಟರ್ಬ್ ಆಗುತ್ತದೆ. ಇದರಿಂದ ನಿಮಗೆ ನೆಮ್ಮದಿಯ ನಿದ್ದೆ ಸಿಗುವುದಿಲ್ಲ.

66

ಮಲಗುವಾಗ ಮೊಬೈಲ್ ಬಳಸುವುದರಿಂದ ಸರ್ಕಾಡಿಯನ್ ರಿಥಮ್ (ದೇಹದ ಗಡಿಯಾರ) ಏರುಪೇರಾಗುತ್ತದೆ. ಇದರಿಂದ ನಿದ್ದೆ ಬರುವುದು ತಡವಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories