Spicy Food : ಖಾರವಾದ ಆಹಾರ ರುಚಿಯನ್ನು ಹೆಚ್ಚಿಸಿದರೂ, ಹೆಚ್ಚಿನ ಪ್ರಮಾಣದಲ್ಲಿ ಖಾರ ಸೇವಿಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇವುಗಳನ್ನ ಇಗ್ನೋರ್ ಮಾಡಿದ್ರೆ, ಮುಂದೆ ಸಿಕ್ಕಾಪಟ್ಟೆ ಸಮಸ್ಯೆ ಎದುರಿಸಬೇಕಾಗಬಹುದು ಎಚ್ಚರ.
ನಿಮಗೂ ತುಂಬಾ ಖಾರವಾದ ಆಹಾರ ತಿನ್ನುವುದು ಇಷ್ಟವೇ? ಕೆಂಪು ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ ಸೇರಿದಂತೆ ವಿವಿಧ ಮಸಾಲೆಗಳು ಆಹಾರದ ರುಚಿಯನ್ನು ಹೆಚ್ಚಿಸುತ್ತವೆ. ಕೆಲವರಿಗೆ ಊಟದಲ್ಲಿ ಹೆಚ್ಚು ಖಾರವಿಲ್ಲದಿದ್ದರೆ ಊಟ ಮಾಡಿದ ಅನುಭವವೇ ಆಗುವುದಿಲ್ಲ. ಆದರೆ ಪ್ರತಿದಿನ ಅತಿಯಾದ ಪ್ರಮಾಣದಲ್ಲಿ ಖಾರ ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ಕೆಲವು ತೊಂದರೆಗಳು ಕಾಣಿಸಿಕೊಳ್ಳಬಹುದು.
27
ಖಾರ ತಿಂದ್ರೆ ಏನೆಲ್ಲಾ ಸಮಸ್ಯೆ ಬರುತ್ತೆ?
ಪ್ರತಿಯೊಬ್ಬರ ದೇಹವೂ ಖಾರಕ್ಕೆ ಒಂದೇ ರೀತಿಯಲ್ಲಿ ಪ್ರತಿಕ್ರಿಯಿಸುವುದಿಲ್ಲ. ಕೆಲವರಿಗೆ ಸ್ವಲ್ಪ ಖಾರ ತಿಂದರೂ ಅಸ್ವಸ್ಥತೆ ಉಂಟಾಗಬಹುದು. ಇನ್ನು ಕೆಲವರು ಹೆಚ್ಚು ಖಾರವನ್ನು ಸಹಿಸಿಕೊಳ್ಳಬಲ್ಲರು. ಆದರೆ ನಿಮಗೆ ಖಾರ ತಿಂದ ನಂತರ ಪದೇಪದೇ ಅಸ್ವಸ್ಥತೆ ಅಥವಾ ಉರಿ ಕಾಣಿಸಿಕೊಳ್ಳುತ್ತಿದ್ದರೆ, ಅದರ ಪ್ರಮಾಣವನ್ನು ಕಡಿಮೆ ಮಾಡುವುದು ಸೂಕ್ತ. ಅತಿಯಾಗಿ ಖಾರ ತಿನ್ನುವುದರಿಂದ ಕಾಣಿಸಿಕೊಳ್ಳಬಹುದಾದ ಕೆಲವು ಸಮಸ್ಯೆಗಳು ಇಲ್ಲಿವೆ.
37
ಹೊಟ್ಟೆ ನೋವು ಮತ್ತು ಉರಿ
ಅತಿಯಾಗಿ ಖಾರವಾದ ಆಹಾರ ಸೇವಿಸಿದ ನಂತರ ಕೆಲವರಿಗೆ ಹೊಟ್ಟೆ ನೋವು, ಉರಿ ಅಥವಾ ಅಸ್ವಸ್ಥತೆ ಕಾಣಿಸಿಕೊಳ್ಳಬಹುದು. ಪ್ರತಿಬಾರಿ ಖಾರ ತಿಂದಾಗ ಇದೇ ರೀತಿಯ ಸಮಸ್ಯೆ ಎದುರಾದರೆ, ಖಾರದ ಪ್ರಮಾಣವನ್ನು ಕಡಿಮೆ ಮಾಡಿ.
ಹೆಚ್ಚು ಖಾರ ತಿನ್ನುವವರಿಗೆ ಎದೆಯುರಿ, ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಾದ ಅನುಭವ ಹಾಗೂ ಹುಳಿ ತೇಗು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವಿಶೇಷವಾಗಿ ಖಾರವಾದ ಆಹಾರ ಸೇವಿಸಿದ ನಂತರ ಪದೇಪದೇ ಎದೆಯುರಿ ಉಂಟಾದರೆ, ಆಹಾರದ ಪ್ರಮಾಣ ಮತ್ತು ಸಮಯದ ಬಗ್ಗೆ ಗಮನ ಕೊಡುವುದು ಮುಖ್ಯ.
57
ಮೂಲವ್ಯಾಧಿ ಇರುವವರಿಗೆ ತೊಂದರೆ ಹೆಚ್ಚು
ಈಗಾಗಲೇ ಮೂಲವ್ಯಾಧಿ ಅಥವಾ ಗುದದ್ವಾರ ಭಾಗದಲ್ಲಿ ಉರಿ ಇರುವವರಿಗೆ ತುಂಬಾ ಖಾರವಾದ ಆಹಾರ ಸೇವನೆಯಿಂದ ಉರಿ ಅಥವಾ ಅಸ್ವಸ್ಥತೆ ಹೆಚ್ಚಾಗಬಹುದು. ಖಾರವೇ ಮೂಲವ್ಯಾಧಿಗೆ ನೇರ ಕಾರಣ ಎಂದು ಹೇಳಲು ಸಾಧ್ಯವಿಲ್ಲ, ಆದರೆ ಕೆಲವರಲ್ಲಿ ಈಗಿರುವ ಲಕ್ಷಣಳು ಮತ್ತಷ್ಟು ಹೆಚ್ಚಾಗಬಹುದು.
67
ನಿದ್ರೆಗೆ ತೊಂದರೆ
ಪ್ರತಿದಿನ ಅಥವಾ ರಾತ್ರಿ ಸಮಯದಲ್ಲಿ ಅತಿಯಾಗಿ ಖಾರವಾದ ಆಹಾರ ಸೇವಿಸುವುದರಿಂದ ಕೆಲವರಿಗೆ ಎದೆಯುರಿ ಅಥವಾ ಜೀರ್ಣಕ್ರಿಯೆಯ ಅಸ್ವಸ್ಥತೆ ಉಂಟಾಗಿ ನಿದ್ರೆಗೆ ತೊಂದರೆಯಾಗಬಹುದು. ಆದ್ದರಿಂದ ರಾತ್ರಿ ಊಟದಲ್ಲಿ ಅತಿಯಾದ ಖಾರ ಮತ್ತು ಮಸಾಲೆ ಬಳಸುವುದನ್ನು ನಿಯಂತ್ರಿಸುವುದು ಉತ್ತಮ.
77
ಬಾಯಿಯಲ್ಲಿ ಉರಿ ಮತ್ತು ಅಸ್ವಸ್ಥತೆ
ತುಂಬಾ ಖಾರವಾದ ಮೆಣಸಿನಕಾಯಿ ಅಥವಾ ಮಸಾಲೆಯುಕ್ತ ಆಹಾರ ಸೇವಿಸಿದಾಗ ಬಾಯಿಯಲ್ಲಿ ಉರಿ, ಸುಡುವ ಅನುಭವ ಮತ್ತು ಅಸ್ವಸ್ಥತೆ ಉಂಟಾಗಬಹುದು. ಖಾರ ತಿಂದ ನಂತರ ಪದೇಪದೇ ಇಂತಹ ಸಮಸ್ಯೆ ಕಾಣಿಸಿಕೊಂಡರೆ, ಖಾರದ ಪ್ರಮಾಣವನ್ನು ಕಡಿಮೆ ಮಾಡುವುದು ಸೂಕ್ತ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.