ಪ್ರತಿದಿನ ಈ ವ್ಯಾಯಾಮ ಮಾಡಿ, ಕ್ಯಾನ್ಸರ್ ಅಪಾಯ ಕಡಿಮೆ ಆಗುತ್ತೆ ನೋಡಿ!

First Published Sep 14, 2022, 4:09 PM IST

ಕ್ಯಾನ್ಸರ್ ಒಂದು ಭಯ ಹುಟ್ಟಿಸುವಂತಹ ರೋಗ. ಅಲ್ಲದೇ ಕ್ಯಾನ್ಸರ್ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ (World Health Organisation) ಪ್ರಕಾರ, ಪ್ರತಿ ವರ್ಷ 10 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ಸಂಭವಿಸುತ್ತಿದೆ. ಭಾರತದಲ್ಲಿ, ಪ್ರತಿ ಹತ್ತರಲ್ಲಿ ಒಬ್ಬರಿಗೆ ಕ್ಯಾನ್ಸರ್ ಇರೋದು ಪತ್ತೆಯಾಗುವ ಸಾಧ್ಯತೆಯಿದೆ. ತಜ್ಞರ ಪ್ರಕಾರ, ವಿಟಮಿನ್ ಬಿ 17 ಕೊರತೆಯಿಂದ ಕ್ಯಾನ್ಸರ್ ರೋಗವು ಉಂಟಾಗುತ್ತೆ. ಇದಲ್ಲದೆ, ಕ್ಯಾನ್ಸರ್ ರೋಗ ಹೊಂದಲು ಇನ್ನೂ ಅನೇಕ ಕಾರಣಗಳಿವೆ.ಅವುಗಳ ಬಗ್ಗೆ ಮತ್ತು ಸಮಸ್ಯೆ ದೂರ ಮಾಡುವ ವಿಧಾನಗಳ ಬಗ್ಗೆ ತಿಳಿಯೋಣ. 
 

ಕ್ಯಾನ್ಸರ್ ಇದ್ದಕ್ಕಿದ್ದಂತೆ ಮತ್ತು ಅಸಹಜವಾಗಿ ನಮಗೆ ಗೊತ್ತಾಗದ ಹಾಗೆ ದೇಹದಲ್ಲಿ ಕೋಶಗಳನ್ನು(Cells) ಹೆಚ್ಚಿಸುತ್ತೆ. ಸಾಮಾನ್ಯವಾಗಿ 13 ವಿಧದ ಕ್ಯಾನ್ಸರ್‌ಗಳಿವೆ. ಇವುಗಳಲ್ಲಿ ಸ್ತನ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್, ಚರ್ಮದ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ (Lung Cancer), ಕರುಳಿನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಲಿಂಫೋಮಾ ಸೇರಿವೆ. 

ಕ್ಯಾನ್ಸರ್‌ಗೆ ಚಿಕಿತ್ಸೆ ಸಾಧ್ಯವಿದೆ. ಕ್ಯಾನ್ಸರ್ ಗೆ ಪ್ರಾಥಮಿಕ ಹಂತದಲ್ಲಿಯೇ (Primary Stage) ಚಿಕಿತ್ಸೆ ನೀಡಬಹುದು. ಕ್ಯಾನ್ಸರ್ ಲಕ್ಷಣಗಳು ಕಾಣಿಸಿಕೊಂಡರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ (Consult doctor) ಚಿಕಿತ್ಸೆ ಪಡೆಯೋದು ಒಳ್ಳೆಯದು. ಆರಂಭಿಕ ಹಂತದಲ್ಲಿ ಅದನ್ನು ಇಗ್ನೋರ್ ಮಾಡಿದ್ರೆ ಮತ್ತೆ ಸಮಸ್ಯೆಗಳು ಹೆಚ್ಚುವ ಸಾಧ್ಯತೆ ಇದೆ. ಇದು ನಿಮ್ಮನ್ನು ಸಾವಿನ ಮನೆಯವರೆಗೆ ಕರೆದುಕೊಂಡು ಹೋಗಬಹುದು. 

ನೀವು ಕ್ಯಾನ್ಸರ್(Cancer) ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಿದ್ರೆ ಈ ರೋಗ ಮಾರಣಾಂತಿಕವಾಗಿಸಬಹುದು. ಆದುದರಿಂದ ಅದನ್ನು ನಿಯಂತ್ರಿಸಲು ಸರಿಯಾದ ಕ್ರಮ ತೆಗೆದುಕೊಳ್ಳೋದು ತುಂಬಾ ಮುಖ್ಯ. ನಿಮಗೆ ಗೊತ್ತಾ ವ್ಯಾಯಾಮದ ಮೂಲಕ ಕ್ಯಾನ್ಸರ್ ಅಪಾಯ ಕಡಿಮೆ ಮಾಡಬಹುದು. ಇದಕ್ಕಾಗಿ, ಈ ವ್ಯಾಯಾಮ ಪ್ರತಿದಿನ ಮಾಡಿ. ಅವು ಯಾವವೆಂದು ತಿಳಿದುಕೊಳ್ಳೋಣ -

ಆರೋಗ್ಯ ತಜ್ಞರ ಪ್ರಕಾರ, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಪ್ರತಿದಿನ 1 ಗಂಟೆ ವ್ಯಾಯಾಮ (Exercise) ಮಾಡಿ. ಪ್ರತಿದಿನ 1 ಗಂಟೆ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೆ, 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ. ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತೆ. ಪ್ರತಿದಿನ ವ್ಯಾಯಾಮ ಮಾಡೋದ್ರಿಂದ ಎಲ್ಲಾ ರೀತಿಯ ಸಮಸ್ಯೆಗಳು ಸಹ ದೂರವಾಗುವ ಸಾಧ್ಯತೆ ಇದೆ.

ದೈಹಿಕವಾಗಿ ಸಮರ್ಥರಾಗಿಲ್ಲದಿದ್ದರೆ, ನೀವು ವೈದ್ಯರನ್ನು ಸಂಪರ್ಕಿಸಬಹುದು ಮತ್ತು ದೇಹಕ್ಕೆ ಅನುಗುಣವಾಗಿ ವ್ಯಾಯಾಮ ಮಾಡಬಹುದು. ವೈದ್ಯರು (Doctor) ನೀವು ಯಾವೆಲ್ಲಾ ವ್ಯಾಯಾಮಗಳನ್ನು ಮಾಡಬಹುದು ಎನ್ನುವ ಬಗ್ಗೆ ಮಾಹಿತಿ ನೀಡುತ್ತಾರೆ. ಅದರ ಪ್ರಕಾರ ವ್ಯಾಯಾಮ ಮಾಡಿದ್ರೆ ಕ್ಯಾನ್ಸರ್ ವಿರುದ್ಧ ಹೋರಾಡಬಹುದು. 

ಯಾವ ವ್ಯಾಯಾಮಗಳನ್ನು ಮಾಡಬೇಕು?

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು, ನೀವು ಚುರುಕಾದ ನಡಿಗೆ (Walking), ಈಜು, ನಿಧಾನಗತಿಯ ಸೈಕ್ಲಿಂಗ್(Cycling) ಮತ್ತು ಯೋಗವನ್ನು ಮಾಡಬಹುದು. ಇದಲ್ಲದೆ, ನೀವು ಫುಟ್ಬಾಲ್ (Football), ಸ್ಕ್ವಾಷ್ (Squash), ನೆಟ್ಬಾಲ್, ಬಾಸ್ಕೆಟ್ಬಾಲ್ (Basketball) ಮುಂತಾದ ಆಟಗಳನ್ನು ಸಹ ಆಡಬಹುದು.

ಚುರುಕಾದ ನಡಿಗೆ (ಬ್ರಿಸ್ಕ್ ವಾಕ್)

ಓಡುವುದು ಮತ್ತು ನಡೆಯುವುದರ ನಡುವಿನ ಭಂಗಿಯನ್ನು ಚುರುಕಾದ ನಡಿಗೆ (Brisk walk) ಎಂದು ಕರೆಯಲಾಗುತ್ತೆ. ಇದರಲ್ಲಿ, ವ್ಯಕ್ತಿಯು ನಿಧಾನವಾಗಿ ನಡೆಯಬೇಕಾಗಿಲ್ಲ ಅಥವಾ ಓಡಬೇಕಾಗಿಲ್ಲ. ಬದಲಾಗಿ ವೇಗವಾಗಿ ನಡೆಯಬೇಕು. ವೇಗವಾಗಿ ನಡೆಯುವುದರಿಂದ ದೇಹದಲ್ಲಿನ ಪ್ರತಿ ಅಂಗಗಳು ಚುರುಕಾಗುತ್ತವೆ. 

ನೀವು ಪಾರ್ಕ್ನಲ್ಲಿ (Park) ಅಥವಾ ಗ್ರೌಂಡಿನಲ್ಲಿ ಬ್ರಿಸ್ಕ್ ವಾಕ್  ಮಾಡಬಹುದು. ಬ್ರಿಸ್ಕ್ ವಾಕ್ ನಲ್ಲಿ ನಾವು ವೇಗವಾಗಿ ನಡೆಯಬೇಕು, ಇದು ದೇಹದ ಎಲ್ಲಾ ಅಂಗಗಳಲ್ಲಿ ಹಿಗ್ಗುವಿಕೆಯನ್ನು ಸೃಷ್ಟಿಸುತ್ತೆ. ಅಲ್ಲದೆ, ಸೈಕ್ಲಿಂಗ್ ಕ್ಯಾನ್ಸರ್ ಅಪಾಯವನ್ನು ಸಹ ಕಡಿಮೆ ಮಾಡುತ್ತೆ. ಪ್ರತಿದಿನ ನಿಧಾನಗತಿಯ ಸೈಕ್ಲಿಂಗ್ ಮಾಡಿ ನೋಡಿ.

click me!