Fitness Tips: ತೂಕವೇ ಇಳೀತಾ ಇಲ್ವಾ? ಅಷ್ಟಕ್ಕೂ ಎಷ್ಟು ವಾಕಿಂಗ್ ಬೇಕು ನಿಮ್ಮ ದೇಹಕ್ಕೆ?

 ಪ್ರತಿ ದಿನ ವಾಕಿಂಗ್ ಮಾಡೋರನ್ನು ನಾವು ನೋಡಿರ್ತೇವೆ. ಎಷ್ಟೇ ವಾಕ್ ಮಾಡಿದ್ರೂ ತೂಕ ಇಳಿದಿಲ್ಲ ಎನ್ನುತ್ತಿರುತ್ತಾರೆ. ಇದಕ್ಕೆ ಕಾರಣವಿದೆ. ತೂಕ ಇಳಿಯಬೇಕೆಂದ್ರೆ ಸಮತಟ್ಟಾದ ಜಾಗದಲ್ಲಿ ಸಾವಿರ ಹೆಜ್ಜೆ ನಡೆದ್ರೆ ಸಾಲದು.

How To Lose Weight By Just Walking, how much body required

ತೂಕ ಇಳಿದ್ರೆ ಸಾಕು, ಸದ್ಯ ಬಹುತೇಕರ ಬಾಯಿಂದ ಕೇಳಿ ಬರುವ ಮಾತಿದು. ಇತ್ತೀಚಿನ ಜೀವನ ಶೈಲಿ ಹಾಗೂ ಒತ್ತಡದ ಜೀವನದಿಂದಾಗಿ ದಿನದಿಂದ ದಿನಕ್ಕೆ  ತೂಕ ಹೆಚ್ಚಾಗುತ್ತದೆ. ಬೊಜ್ಜು ಹೆಚ್ಚಾಗ್ತಿದ್ದಂತೆ ಟೆನ್ಷನ್ ಮತ್ತಷ್ಟು ಹೆಚ್ಚಾಗುತ್ತದೆ. ಕೆಲಸದ ಬ್ಯುಸಿಯಲ್ಲಿ ವರ್ಕ್ ಔಟ್ ಮಾಡೋದು ಕಷ್ಟ ಎನ್ನುವವರಿದ್ದಾರೆ. ಇನ್ನು ಕೆಲವರಿಗೆ ಮೈ ದಣಿಸಲು ಬೇಸರ. ಅವರಿಗೆ ವಾಕಿಂಗ್ ಮಾಡಲು ಸಮಯವೇನೋ ಸಿಗುತ್ತೆ. ಆದ್ರೆ ವಾಕಿಂಗ್ ನಿಂದ ತೂಕ ಇಳಿಯೋದಿಲ್ಲ ಎಂಬುದು ಅವರ ನಂಬಿಕೆ. ಬೆಳಿಗ್ಗೆ ಅಥವಾ ಸಂಜೆ ವಾಕಿಂಗ್ ಮಾಡೋದ್ರಿಂದಲೂ ನೀವು ತೂಕ ಇಳಿಸಿಕೊಳ್ಳಬಹುದು. ಆದ್ರೆ ತೂಕ ಇಳಿಸಿಕೊಳ್ಳಲು ಯಾವ ರೀತಿ ವಾಕಿಂಗ್ ಮಾಡ್ಬೇಕು ಎಂಬುದು ನಿಮಗೆ ಗೊತ್ತಿರಬೇಕು. ಸರಿಯಾದ ರೀತಿಯಲ್ಲಿ ನೀವು ವಾಕಿಂಗ್ ಮಾಡಿದ್ದೆ ಆದ್ರೆ ನಿಮ್ಮ ತೂಕವನ್ನು ನೀವು ಇಳಿಸಿಕೊಳ್ಳಬಹುದು. ನಾವಿಂದು ವಾಕಿಂಗ್ ನಿಂದ ತೂಕ ಇಳಿಸಿಕೊಳ್ಳುವುದು ಹೇಗೆ ಎಂಬುದನ್ನು ಹೇಳ್ತೇವೆ.

ತೂಕ (Weight) ಇಳಿಸಿಕೊಳ್ಳಲು ವಾಕಿಂಗ್ (Walking) ಬೆಸ್ಟ್ :

ಎಷ್ಟು ದೂರ ನಡೆಯಬೇಕು ಗೊತ್ತಾ? (Distance of walking) : ವಾಕಿಂಗ್ ನಿಂದಲೂ ಬೊಜ್ಜು (Obesity) ಕಡಿಮೆಯಾಗುತ್ತೆ ಸರಿ, ಆದ್ರೆ ಎಷ್ಟು ದೂರ ನಡೆದ್ರೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಒಂದು 500 ಹೆಜ್ಜೆ ಇಟ್ಟರೆ ಸಾಕಾ? ಇಲ್ಲ 5 ಸಾವಿರ ಹೆಜ್ಜೆ ನಡೆಯಬೇಕಾ ಎಂದು ನೀವು ಕೇಳ್ಬಹುದು. ತಜ್ಞರ ಪ್ರಕಾರ, 500, 5000 ಹೆಜ್ಜೆಯಿಂದ ಏನೂ ಪ್ರಯೋಜನವಿಲ್ಲ. ನೀವು ಪ್ರತಿ ದಿನ 15 ಸಾವಿರ ಹೆಜ್ಜೆ ನಡೆಬೇಕು. ನೀವು ಹೆಜ್ಜೆಯನ್ನು ಲೆಕ್ಕ ಹಾಕೋದು ಈಗ ಕಷ್ಟವೇನಲ್ಲ. ಸ್ಮಾರ್ಟ್ ವಾಚ್, ಆಪ್ ಸಹಾಯದಿಂದ ನೀವು ಹೆಜ್ಜೆ ಲೆಕ್ಕ ಹಾಕ್ಬಹುದು. ಒಂದೇ ಬಾರಿ ಇಷ್ಟು ನಡೀಬೇಕಾ ಎನ್ಬೇಡಿ. ದಿನದಲ್ಲಿ ಇಷ್ಟು ಹೆಜ್ಜೆ ಇಟ್ಟರೆ ಸಾಕು. 

ಏರಿನ ಜಾಗದಲ್ಲಿ ನಡೆಯಿರಿ : ಸಮತಟ್ಟಾದ ಜಾಗ ಹಾಗೂ ಏರಿಳಿತವಿರುವ ಜಾಗ ಎರಡೂ ಬೇರೆ ಬೇರೆ. ನೀವು ತೂಕ ಇಳಿಸಿಕೊಳ್ಳಬೇಕೆಂದ್ರೆ ಏರಿರುವ ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಅದನ್ನು ಹತ್ತಿ. ಅಲ್ಲಿ ನಿಮ್ಮ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ಖರ್ಚಾಗುತ್ತದೆ. ಇದು ಚಯಾಪಚಯ ಸುಧಾರಿಸುವ ಕೆಲಸವನ್ನು ಕೂಡ ಮಾಡುತ್ತದೆ. ಹಾಗಾಗಿ ನೀವು ಸಮತಟ್ಟಾದ ಪಾರ್ಕ್ ನಲ್ಲಿ ವಾಕಿಂಗ್ ಮಾಡುವ ಬದಲು ಎತ್ತರವಿರುವ ಜಾಗವನ್ನು ಹತ್ತಿ. 

ಯೋಗ ಮತ್ತು ಪಿಲೆಟ್ಸ್ ಯಾವುದು ಒಳ್ಳೆಯ ರಿಸಲ್ಟ್ ಕೊಡುತ್ತೆ?

ಎಷ್ಟು ನಿಮಿಷ ವಾಕ್ ಮಾಡ್ಬೇಕು? (How many minutes to walk) : ದಿನದಲ್ಲಿ 15000 ಹೆಜ್ಜೆ ಇಡ್ಬೇಕು ಎಂಬುದು ಗೊತ್ತಾಗಿದೆ. ಒಂದೇ ಬಾರಿ ಇಷ್ಟು ದೂರ ನಡೆಯಲು ಸಾಧ್ಯವಿಲ್ಲ ಎನ್ನುವವರು ಒಂದೊಂದು ವಾಕ್ ಗೆ 20 ನಿಮಿಷ ಫಿಕ್ಸ್ ಮಾಡಿಕೊಳ್ಳಿ. 15 – 20 ನಿಮಿಷ ನಿರಂತರವಾಗಿ ನಡೆಯಿರಿ. ಹೀಗೆ ದಿನಕ್ಕೆ ಮೂರು ಬಾರಿ ನಡೆಯಿರಿ. ಒಟ್ಟಾರೆ ದಿನದಲ್ಲಿ 60 ನಿಮಿಷ ನೀವು ವಾಕಿಂಗ್ ಗೆ ಮೀಸಲಿಡಬೇಕಾಗುತ್ತದೆ. ಒಂದೇ ಬಾರಿ 60 ನಿಮಿಷ ವಾಕಿಂಗ್ ಸಾಧ್ಯವಿಲ್ಲ ಎನ್ನುವವರು ಹೀಗೆ ವಾಕಿಂಗ್ ಮಾಡಬಹುದು.

ನಡಿಗೆಗೆ ನೀವೇ ಅವಕಾಶ ಕಲ್ಪಿಸಿಕೊಳ್ಳಿ : ವಾಕಿಂಗ್, ವರ್ಕ್ ಔಟ್ ಗೆ ಸಮಯವಿಲ್ಲ ಎನ್ನುವವರು ಅವಕಾಶವನ್ನು ಕಲ್ಪಿಸಿಕೊಳ್ಳಬೇಕು. ಕಚೇರಿಯಿಂದ ಸ್ವಲ್ಪ ದೂರದಲ್ಲಿ ಕಾರನ್ನು ನಿಲ್ಲಿಸಿ. ಅಲ್ಲಿಂದ ಕಚೇರಿಗೆ ನಡೆದು ಹೋಗಿ. ಲಿಫ್ಟ್ ಬದಲು ಮೆಟ್ಟಿಲಿನ ಉಪಯೋಗ ಮಾಡಿ. ಕಚೇರಿಯಲ್ಲಿ ಕರೆ ಸ್ವೀಕರಿಸಿದಾಗ ಅಲ್ಲಿಯೇ ವಾಕ್ ಮಾಡ್ತಾ ಮಾತನಾಡಿ. ಹಾಲು, ತರಕಾರಿ ತರಲು ಸ್ಕೂಟರ್ ಬಳಸುವ ಬದಲು ನಡೆದು ಹೋಗಿ. 

ಆಲ್ಕೋಹಾಲು ಯುಕ್ತ ಪಾನೀಯ ಸೇವನೆಯಿಂದ ತೂಕ ಹೆಚ್ಚಾಗುತ್ತಾ?

ವಾಕ್ ಮೊದಲಿರಲಿ ಗ್ರೀನ್ ಟೀ (Green Tea) : ವಾಕಿಂಗ್ ಮಾಡುವ ಮೊದಲು ನೀವು ಗ್ರೀನ್ ಟೀ ಸೇವನೆ ಮಾಡ್ಬಹುದು. ಇದು ಕೊಬ್ಬನ್ನು ಕರಗಿಸುವ ಜೊತೆಗೆ ಚಯಾಪಚಯವನ್ನು ಹೆಚ್ಚಿಸುತ್ತದೆ. 
 

Latest Videos
Follow Us:
Download App:
  • android
  • ios