ಈ ಸಸ್ಯಗಳನ್ನು ಮನೆಯಲ್ಲಿ ನೆಟ್ಟು ನೋಡಿ, ಸೊಳ್ಳೆಗಳೇ ಇರೋದಿಲ್ಲ

First Published Sep 14, 2022, 3:55 PM IST

ಕಾಲ ಯಾವುದಾದರೂ ಸೊಳ್ಳೆಗಳ ಕಾಟ ಮಾತ್ರ ತಪ್ಪಿದ್ದಲ್ಲ. ಅದರಲ್ಲೂ ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ತಪ್ಪಿಸೋದೆ ಕಷ್ಟದ ಕೆಲಸ. ಮಳೆಗಾಲದಲ್ಲಿ ಸೊಳ್ಳೆಗಳಿಂದಲೇ ಮಲೇರಿಯಾ, ಡೆಂಗ್ಯೂ (Dengue), ಚಿಕನ್ ಗುನ್ಯಾ ಮೊದಲಾದ ಮಾರಣಾಂತಿಕ ಕಾಯಿಲೆಗಳು (Deadly Disease) ಸಹ ಕಾಡುತ್ತವೆ. ಮಳೆಗಾಲದಲ್ಲಿ (Rainy Season) ಸೊಳ್ಳೆಗಳನ್ನು ತಪ್ಪಿಸಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ, ಅವುಗಳಲ್ಲಿ ಅತ್ಯಂತ ಸುಲಭವೆಂದರೆ ಮನೆಯನ್ನು ಸುಂದರವಾಗಿಸುವ ಮತ್ತು ಸೊಳ್ಳೆಗಳಿಂದ ರಕ್ಷಿಸಬಹುದಾದ ಸಸ್ಯಗಳನ್ನು ಮನೆಗಳಲ್ಲಿ ನೆಡುವುದು. ಆ ಸಸ್ಯಗಳ ಬಗ್ಗೆ ತಿಳಿಯೋಣ.

ಮಳೆಗಾಲದಲ್ಲಿ ಮನೆಗಳ ಸುತ್ತಲೂ ಸೊಳ್ಳೆಗಳು ಹೆಚ್ಚುತ್ತವೆ, ಇದು ಎಲ್ಲಾ ಮಕ್ಕಳಿಂದ ಹಿಡಿದು ವಯಸ್ಕರಿಗೆ ಎಲ್ಲರಿಗೂ ಅಪಾಯಕಾರಿ. ಮಳೆಗಾಲದಲ್ಲಿ, ಡೆಂಗ್ಯೂ ಮತ್ತು ಮಲೇರಿಯಾದಂತಹ (Malaria) ಸೊಳ್ಳೆಗಳಿಂದ ಅನೇಕ ರೋಗಗಳು ಹೆಚ್ಚುತ್ತವೆ, ಇದರಿಂದಾಗಿ ನೀವು ಅನೇಕ ಗಂಭೀರ ಸಮಸ್ಯೆ ಹೊಂದಬಹುದು, ಆದ್ದರಿಂದ ಮಳೆಗಾಲದಲ್ಲಿ ಸೊಳ್ಳೆಗಳಿಂದ ರಕ್ಷಿಸುವುದು ಬಹಳ ಮುಖ್ಯ. 
 

ಸೊಳ್ಳೆಗಳಿಂದ ರಕ್ಷಿಸಲು, ಹೆಚ್ಚಿನ ಜನರು ತಮ್ಮ ಮನೆಗಳನ್ನು ಸ್ವಚ್ಛವಾಗಿಡುತ್ತಾರೆ ಮತ್ತು ಮಾರುಕಟ್ಟೆಯಲ್ಲಿ ಸಿಗುವ ವಿವಿಧ ರೀತಿಯ ಸೊಳ್ಳೆ ಬತ್ತಿಗಳನ್ನು ಬಳಸುತ್ತಾರೆ, ಆದರೆ ನಿಮಗೆ ತಿಳಿದಿದೆಯೇ? ನಿಮ್ಮ ಮನೆಗಳಲ್ಲಿ ಕೆಲವು ಸಸ್ಯಗಳನ್ನು ನೆಡುವ ಮೂಲಕ ನೀವು ಸೊಳ್ಳೆಗಳನ್ನು ಓಡಿಸಬಹುದು. ಸೊಳ್ಳೆಗಳನ್ನು ಓಡಿಸಲು ಸಸ್ಯಗಳು ಹೇಗೆ ಸಹಾಯ ಮಾಡುತ್ತವೆ ಎಂದು ತಿಳಿಯೋಣ.

ಸೊಳ್ಳೆಗಳನ್ನು ಮನೆಯಿಂದ ಓಡಿಸಲು ಮನೆಯಲ್ಲಿ ಈ ಸಸ್ಯಗಳನ್ನು ನೆಡಿ:

ಲೆಮನ್ ಗ್ರಾಸ್ 
ಲೆಮನ್ ಗ್ರಾಸ್ (Lemon Grass) ಸಸ್ಯವು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ, ಇದನ್ನು ಚಹಾದಲ್ಲಿ ಬಳಸುವ ಮೂಲಕ ಅನೇಕ ಆರೋಗ್ಯ ಪ್ರಯೋಜನ ಪಡೆಯಬಹುದು. ನಿಂಬೆ ಹುಲ್ಲು ಆರೋಗ್ಯಕ್ಕೆ ಪ್ರಯೋಜನಕಾರಿ ಮತ್ತು ಸೊಳ್ಳೆಗಳನ್ನು ಮನೆಯಿಂದ ಓಡಿಸಲು ಕೆಲಸ ಮಾಡುತ್ತದೆ. ನಿಂಬೆ ಹುಲ್ಲನ್ನು ಮನೆಯಲ್ಲಿ ನೆಡಲು ಮತ್ತು ನೋಡಿಕೊಳ್ಳಲು ತುಂಬಾ ಸುಲಭ. ಸೊಳ್ಳೆಗಳನ್ನು ತಪ್ಪಿಸಲು ನೀವು ಅದನ್ನು ಮನೆಯ ಹಾಲ್ ನಲ್ಲಿ ಇಡಬಹುದು.

ಬೆಳ್ಳುಳ್ಳಿ

ಮಳೆಗಾಲದಲ್ಲಿ ಬೆಳ್ಳುಳ್ಳಿಯನ್ನು (garlic) ಸೇವಿಸುವುದು ಒಳ್ಳೆಯದು, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ. ಇನ್ನು ಮನೆಯಲ್ಲಿ ಬೆಳ್ಳುಳ್ಳಿ ಸಸ್ಯ ಬೆಳೆಸಬೇಕು ಏಕೆಂದರೆ ಬೆಳ್ಳುಳ್ಳಿ ಸೊಳ್ಳೆಗಳ ಹರಡುವಿಕೆಯನ್ನು ಕಡಿಮೆ ಮಾಡುತ್ತದೆ. ಸೊಳ್ಳೆಗಳು ಬೆಳ್ಳುಳ್ಳಿ ಸಸ್ಯದ ಸುವಾಸನೆಯಿಂದ ದೂರವಿರುತ್ತವೆ.

ಲ್ಯಾವೆಂಡರ್

ಲ್ಯಾವೆಂಡರ್ (Lavender) ಸಸ್ಯವು ಹೂವುಗಳಿಂದಾಗಿ ಸುಂದರವಾಗಿ ಕಾಣುತ್ತದೆ ಮತ್ತು ಸೊಳ್ಳೆಗಳನ್ನು ಮನೆಗಳಿಂದ ಓಡಿಸಲು ಸಹ ಇವು ಸಹಾಯ ಮಾಡುತ್ತದೆ. ಮನೆಯನ್ನು ಅಲಂಕರಿಸಲು ಮತ್ತು ಸುರಕ್ಷಿತವಾಗಿಡಲು ಲ್ಯಾವೆಂಡರ್ ಸಸ್ಯವನ್ನು ನೆಡಬಹುದು. ಇದರ ಪರಿಮಳಕ್ಕೆ ಸೊಳ್ಳೆಗಳು ದೂರ ಓಡುತ್ತವೆ.

ತುಳಸಿ

ತುಳಸಿ ಸಸ್ಯವನ್ನು (Tulsi Plant) ಸಾಮಾನ್ಯ ಜ್ವರ ಅಥವಾ ಶೀತದಂತಹ ಅನೇಕ ರೋಗಗಳಲ್ಲಿ ಬಳಸಲಾಗುತ್ತದೆ. ತುಳಸಿ ಸಸ್ಯವು ಬ್ಯಾಕ್ಟೀರಿಯಾ ವಿರೋಧಿಯಾಗುವುದರ ಜೊತೆಗೆ ಸೊಳ್ಳೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ತುಳಸಿ ಸಸ್ಯವನ್ನು ಮನೆಗಳಲ್ಲಿ ನೆಡಬೇಕು, ಮಳೆಗಾಲದಲ್ಲಿ ನೆಡುವುದು ತುಂಬಾ ಸುಲಭ.

click me!