Food for Diabetes: ಅದ್ಭುತ ಪ್ರಯೋಜನ ನೀಡುತ್ತೆ ಅಡುಗೆಯಲ್ಲಿ ಬಳಸುವ 2 ವಿಶೇಷ ವಸ್ತುಗಳು

First Published Nov 30, 2021, 5:24 PM IST

ಈಗೀಗ ಎಲ್ಲಾ ವಯಸ್ಸಿನ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. 30 ವರ್ಷ ವಯಸ್ಸಿನ ಯುವಕರು ಟೈಪ್ 2 ಮಧುಮೇಹದಿಂದ ಬಳಲುತ್ತಿದ್ದಾರೆ ಮತ್ತು 70 ವರ್ಷ ವಯಸ್ಸಿನವರು ಸಹ ಅನಿಯಂತ್ರಿತ ಮಧುಮೇಹದಿಂದ ಬಳಲುತ್ತಿದ್ದಾರೆ. ಮಧುಮೇಹವು ರೆಟಿನಾ ಸಮಸ್ಯೆ, ಹೃದಯಾಘಾತ (Heart attack), ಮೂತ್ರಪಿಂಡ ವೈಫಲ್ಯದಂತಹ ಗಂಭೀರ ಸಮಸ್ಯೆಗಳನ್ನು ಸಹ ತರುತ್ತದೆ. 

ಮಧುಮೇಹ(Diabetes) ಸಮಸ್ಯೆ ಇರುವಂತಹ ಪರಿಸ್ಥಿತಿಯಲ್ಲಿ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದು ಬಹಳ ಮುಖ್ಯ, ಇಲ್ಲದಿದ್ದರೆ ಜೀವನದ ಮೇಲೆ ಗಂಭೀರ ಪರಿಣಾಮ ಬೀಳಬಹುದು. ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಕೆಲವು ಮನೆಮದ್ದುಗಳು ಅತ್ಯಂತ ಪರಿಣಾಮಕಾರಿಯಾಗಿವೆ. ಅವುಗಳು ಯಾವುವೆಂದು ತಿಳಿದುಕೊಳ್ಳೋಣ. 


ಈ ವಿಷಯಗಳು ಬಹಳ ಉಪಯೋಗವಾಗಿವೆ 
ಮಧುಮೇಹವನ್ನು ನಿಯಂತ್ರಿಸಲು ಔಷಧಿ(Medicine)ಗಳನ್ನು ತೆಗೆದುಕೊಳ್ಳುವುದು ಮುಖ್ಯ ಆದರೆ ಅದೇ ಸಮಯದಲ್ಲಿ ಕೆಲವು ಗಿಡಮೂಲಿಕೆ ಔಷಧಿಗಳು ಅಥವಾ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ವಸ್ತುಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ಅಂದರೆ ಮನೆಯಲ್ಲಿಯೇ ದೊರೆಯುವ ಆಹಾರಗಳನ್ನು ಸೇವನೆ ಮಾಡುವುದು ಮುಖ್ಯ. 

Latest Videos



ಭಾರತೀಯ ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಕೆಲವು ವಸ್ತುಗಳು ಮಧುಮೇಹಕ್ಕೆ ಚಿಕಿತ್ಸೆ ನೀಡಲು ಅತ್ಯಂತ ಪರಿಣಾಮಕಾರಿಯಾಗಿವೆ. ಅವುಗಳು ಅರಿಶಿನ(Turmeric) ಮುಖ್ಯವಾದುದು. ಇದನ್ನು 2 ವಸ್ತುಗಳೊಂದಿಗೆ  ತಿಂದರೆ ಪವಾಡ ಸದೃಶ ಫಲಿತಾಂಶಗಳು ಉಂಟಾಗುತ್ತವೆ. ಕೆಲವೇ ದಿನಗಳಲ್ಲಿ ಮಧುಮೇಹ ರೋಗಿಯಲ್ಲಿ ರಕ್ತದಲ್ಲಿನ ಸಕ್ಕರೆಯ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ.  

ಅರಿಶಿನ ಮತ್ತು ನೆಲ್ಲಿಕಾಯಿ(Indian gooseberry) ಅರಿಶಿನದಲ್ಲಿ ಸಾಕಷ್ಟು ಫೈಬರ್ (fiber), ಕಬ್ಬಿಣ, ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಗಳಿವೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ದೇಹಕ್ಕೆ ಯಾವುದೇ ರೋಗ ಬರದಂತೆ ತಡೆಯುತ್ತದೆ. 

ನೆಲ್ಲಿಕಾಯಿ ವಿಟಮಿನ್ ಸಿಯ ಅತ್ಯಂತ ಸಮೃದ್ಧ ಮೂಲವಾಗಿದೆ. ಇದು ಕೊಲೆಸ್ಟ್ರಾಲ್ (cholesterol) ಅನ್ನು ಸಹ ನಿಯಂತ್ರಿಸುತ್ತದೆ. ಈ ಎರಡು ಸಂಯೋಜನೆಯು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಹಾಲಿನೊಂದಿಗೆ ಈ ವಸ್ತುಗಳನ್ನು ಸೇವಿಸಲು ಮರೆಯದಿರಿ. 

ಶುಂಠಿ ಮತ್ತು ಅರಿಶಿನ: ಶುಂಠಿ ಮತ್ತು ಅರಿಶಿನದ ಸಂಯೋಜನೆಯು ರಕ್ತದಲ್ಲಿನ ಸಕ್ಕರೆಯನ್ನು (blood sugar) ನಿಯಂತ್ರಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಪ್ರತಿದಿನ ಬೆಳಿಗ್ಗೆ ಒಂದು ಲೋಟ ಹಾಲಿನಲ್ಲಿ ಶುಂಠಿ-ಅರಿಶಿನವನ್ನು ಕುಡಿಯುವುದು ತುಂಬಾ ಪ್ರಯೋಜನಕಾರಿ. 

ದಾಲ್ಚಿನ್ನಿಯ ರಾಮಬಾಣ ಚಿಕಿತ್ಸೆ 
ದಾಲ್ಚಿನ್ನಿಯ ಸೇವನೆಯು ಮಧುಮೇಹಿಗಳಿಗೆ ರಾಮಬಾಣಕ್ಕಿಂತ ಕಡಿಮೆಯಿಲ್ಲ. ಗರಂ ಮಸಾಲಾವಾಗಿ ಬಳಸುವ ದಾಲ್ಚಿನ್ನಿ ಇನ್ಸುಲಿನ್ (insulin) ಚಟುವಟಿಕೆಯನ್ನು ಪ್ರಚೋದಿಸುತ್ತದೆ.  ಇದು ಮಧುಮೇಹ ರೋಗಿಗಳು ಆರೋಗ್ಯದಿಂದ ಇರುವಲ್ಲಿ ಸಹಾಯ ಮಾಡುತ್ತದೆ. 

 ಮಧುಮೇಹಿಗಳಿಗೆ ಪ್ರತಿದಿನ 250 ಮಿಗ್ರಾಂ ದಾಲ್ಚಿನ್ನಿ ತಿನ್ನಲು ಸಲಹೆ ನೀಡಲಾಗುತ್ತದೆ. ಇದನ್ನು ನೀರಿನೊಂದಿಗೆ ಅಥವಾ ಹಾಲಿನೊಂದಿಗೆ ಸೇವಿಸಬಹುದು. ಉತ್ತಮ ನಿದ್ರೆ ಪಡೆಯಲು ದಾಲ್ಚಿನ್ನಿ (cinnamon) ಕೂಡ ತುಂಬಾ ಸಹಕಾರಿ. ಆದುದರಿಂದ ಇದನ್ನು ನಿಯಮಿತವಾಗಿ ಸೇವಿಸಿ. 

click me!