ಸ್ಕ್ವಾಟ್ಸ್ (squats)
ಶಕ್ತಿ ತರಬೇತಿಯಲ್ಲಿ, ಸ್ಕ್ವಾಟ್ ಒಂದು ಪೂರ್ಣ ದೇಹದ ವ್ಯಾಯಾಮವಾಗಿದ್ದು, ಇದು ಮುಖ್ಯವಾಗಿ ತೊಡೆಗಳು, ಸೊಂಟ ಮತ್ತು ಪೃಷ್ಠಗಳ ಸ್ನಾಯುಗಳಿಗೆ ತರಬೇತಿ ನೀಡುತ್ತದೆ. ಕಾಲುಗಳು ಮತ್ತು ಪೃಷ್ಠಗಳ ಶಕ್ತಿ ಮತ್ತು ಗಾತ್ರವನ್ನು ಹೆಚ್ಚಿಸಲು ಮತ್ತು ಕೋರ್ ಶಕ್ತಿ, ಕೆಳ ಬೆನ್ನು, ಮೇಲಿನ ಬೆನ್ನು, ಕಿಬ್ಬೊಟ್ಟೆಗಳನ್ನು ಅಭಿವೃದ್ಧಿಪಡಿಸಲು ಸ್ಕ್ವಾಟ್ಸ್ ಅನ್ನು ಒಂದು ಪ್ರಮುಖ ವ್ಯಾಯಾಮವೆಂದು ಪರಿಗಣಿಸಲಾಗುತ್ತದೆ.