Muscle Cramps : ಚಳಿಗಾಲದಲ್ಲಿ ಕಾಡೋ ಸಮಸ್ಯೆಗಿದೆ ಮನೆಯಲ್ಲೇ ಟ್ರೀಟ್ಮೆಂಟ್!

First Published Nov 29, 2021, 5:48 PM IST

ಆಗಾಗ್ಗೆ ರಾತ್ರಿ ಕುಳಿತುಕೊಳ್ಳುವಾಗ ಅಥವಾ ಮಲಗುವಾಗ ಪಾದಗಳ ಸ್ನಾಯುಗಳು ಸೆಳೆತ (Muscle cramp) ಅಥವಾ ಸೆಟೆದುಕೊಂಡು ಕಾಲಿಗೆ ತೀವ್ರ ನೋವು ಉಂಟುಮಾಡುತ್ತವೆ. ಆದಾಗ್ಯೂ, ಸ್ನಾಯುಗಳನ್ನು ಸಡಿಲಗೊಳಿಸುವುದರಿಂದ ಕ್ರಮೇಣ ನೋವು ತಾನಾಗಿಯೇ ಕಡಿಮೆಯಾಗುತ್ತದೆ. ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚು ಹೆಚ್ಚಾಗುತ್ತದೆ. 

ಸ್ನಾಯುಗಳಲ್ಲಿನ ಸೆಳೆತವೆಂದರೆ ಒಂದಕ್ಕಿಂತ ಹೆಚ್ಚು ಸ್ನಾಯುಗಳು ಇದ್ದಕ್ಕಿದ್ದಂತೆ ಕುಗ್ಗಿದಾಗ ಮತ್ತು ಗಟ್ಟಿಯಾದಾಗ, ಸ್ನಾಯುಗಳಿಗೆ ಸೆಳೆತದ ಸಮಸ್ಯೆ ಉಂಟಾಗುತ್ತವೆ. ಸ್ನಾಯುಗಳು ಸೆಳೆತಕ್ಕೆ ಒಳಗಾದಾಗ, ಆ ಭಾಗವು ಗಟ್ಟಿಯಾಗುತ್ತದೆ ಮತ್ತು ತೀವ್ರ ನೋವು ಇರುತ್ತದೆ. ಕೆಲವೊಮ್ಮೆ ಎಷ್ಟೊಂದು ನೋವು ಇರುತ್ತದೆ ಎಂದರೆ ಕಾಲು ಅಲುಗಾಡಿಸಲು ಸಹ ಸಾಧ್ಯವಿರೋದಿಲ್ಲ. 

ಒಂದು ವೇಳೆ ನಿಮಗೆ ಕಾಲು ಸೆಳೆತ (leg cramp) ಉಂಟಾದರೆ, ಆ ಭಾಗವನ್ನು ಸ್ವಲ್ಪ ಸಮಯದವರೆಗೆ  ಕೈಯಿಂದ ಮಸಾಜ್ ಮಾಡಿದರೆ, ನೋವು ಮತ್ತು ಸೆಳೆತಗಳು ಕೆಲವೇ ನಿಮಿಷಗಳಲ್ಲಿ ಗುಣವಾಗುತ್ತದೆ. ಸ್ನಾಯುಗಳಲ್ಲಿ ಸೆಳೆತ ಏಕೆ ಉಂಟಾಗುತ್ತದೆ ಮತ್ತು ಅದನ್ನು ಮನೆಯಲ್ಲಿ ಹೇಗೆ ಚಿಕಿತ್ಸೆ ಮಾಡಲಾಗುತ್ತದೆ ಎಂಬುದನ್ನು ತಿಳಿಯಿರಿ. 

ಸ್ನಾಯುಗಳಲ್ಲಿ ಸೆಳೆತಕ್ಕೆ ಕಾರಣಗಳು:
ದೀರ್ಘಕಾಲದವರೆಗೆ ವ್ಯಾಯಾಮ (exercise for long time) ಮಾಡುವುದರಿಂದ ಸ್ನಾಯುಗಳಲ್ಲಿ ಸೆಳೆತ ಉಂಟಾಗಬಹುದು.
ಒಂದು ನಿರ್ದಿಷ್ಟ ಔಷಧದ ದೀರ್ಘಕಾಲದ ಸೇವನೆಯು ದೀರ್ಘಕಾಲದ ಸ್ನಾಯುಗಳ ಸೆಳೆತಕ್ಕೆ ಕಾರಣವಾಗಬಹುದು.
 

ದೀರ್ಘಕಾಲದ ಸ್ನಾಯು ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಸ್ನಾಯು ಸೆಳೆತಕ್ಕೂ ಕಾರಣವಾಗಬಹುದು.
ರಾತ್ರಿಯಲ್ಲಿ ನಿರಂತರವಾಗಿ ಒಂದೇ ಭಂಗಿಯಲ್ಲಿ ಮಲಗುವುದರಿಂದ, ದೇಹದಲ್ಲಿ ರಕ್ತ ಪರಿಚಲನೆ (blood circulation) ಸರಿಯಾಗಿ ಆಗದೆ ಬಳಿಕ ಸ್ನಾಯು ಸೆಳೆತವೂ ಉಂಟಾಗಬಹುದು.

ದೇಹದಲ್ಲಿ ನೀರಿನ ಕೊರತೆ, ರಕ್ತ ಸಂಚಾರ ಸರಾಗವಾಗಿ ಇಲ್ಲದಿರುವುದು,
ರಕ್ತನಾಳಗಳಲ್ಲಿ ಒತ್ತಡ ಅಥವಾ ಸಂಕೋಚನವನ್ನು ಹೊಂದಿರುವುದು,
ದೇಹದಲ್ಲಿ ಕ್ಯಾಲ್ಸಿಯಂ (calcium), ಮೆಗ್ನೀಶಿಯಂ, ಪೊಟ್ಯಾಶಿಯಂನಂತಹ ಅಗತ್ಯ ಖನಿಜಗಳ ಕೊರತೆಯು ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು.

ಸ್ನಾಯು ಸೆಳೆತವನ್ನು ತೆಗೆದುಹಾಕಲು ಕ್ರಮಗಳು
ಸ್ನಾಯುಗಳ ಸೆಳೆತ ಉಂಟಾದರೆ ಹೆಚ್ಚು ನೀರು ಸೇವಿಸಿ (drink water). ಚಳಿಗಾಲದ ಬೇಸಿಗೆಯಲ್ಲಿ ಕನಿಷ್ಠ 1-2 ಲೀಟರ್ ನೀರು ಕುಡಿಯಿರಿ. ಹೆಚ್ಚು ನೀರು ಕುಡಿಯುವುದರಿಂದ ದೇಹದ ಸ್ನಾಯು ಕೋಶಗಳು ತೇವಾಂಶದಿಂದ ಕೂಡಿರಲು ಸಾಧ್ಯ.

ರಾತ್ರಿ ಮಲಗುವಾಗ ಕಾಲು ಮತ್ತು ತೊಡೆಗಳಲ್ಲಿ ಸೆಳೆತವಿದ್ದರೆ ಮಲಗುವ ಮೊದಲು 15-20 ನಿಮಿಷಗಳ ಕಾಲ ಸ್ಟ್ರೆಚಿಂಗ್ (stretching) ವ್ಯಾಯಾಮಗಳನ್ನು ಮಾಡಿ. ಸ್ಟ್ರೆಚಿಂಗ್ ವ್ಯಾಯಾಮಗಳು ಸ್ನಾಯುಗಳನ್ನು ಬಲಪಡಿಸುತ್ತವೆ. ಪ್ರತಿದಿನ ವ್ಯಾಯಾಮ ಮಾಡುತ್ತಿದ್ದರೆ ಸ್ನಾಯುಸೆಳೆತ ಉಂಟಾಗುವ ಸಾಧ್ಯತೆ ಕಡಿಮೆ ಇದೆ. 

ಸೆಳೆತದ ನೋವು ನಿರಂತರವಾಗಿ ಕಾಡುತ್ತಿದ್ದರೆ, ಆ ಸ್ಥಳದಲ್ಲಿ ಐಸ್ ನಿಂದ ಮಸಾಜ್ (eyes cube massage) ಮಾಡಿ. ನೋವು ನಿವಾರಣೆಯಾಗುತ್ತದೆ. ಮಂಜುಗಡ್ಡೆ ಸ್ನಾಯುಗಳನ್ನು ಮರಗಟ್ಟಿಸುತ್ತದೆ ಮತ್ತು ಉರಿಯೂತವನ್ನು ನಿವಾರಿಸುತ್ತದೆ. ಮಂಜುಗಡ್ಡೆಯ ಜೊತೆಗೆ ಹಾಟ್ ಮಸಾಜ್ ಕೂಡ ಮಾಡಬಹುದು.

ಸೆಳೆತದ ನೋವಿನಿಂದ ಸ್ನಾಯುಗಳಿಗೆ ತೊಂದರೆಯಾದರೆ ಲವಂಗದ ಎಣ್ಣೆಯಿಂದ (clove oil) ಮಸಾಜ್ ಮಾಡಿ. ಈ ಎಣ್ಣೆಯಲ್ಲಿ ಇರುವ ಉರಿಯೂತ ನಿವಾರಕ ಗುಣ ಸೆಳೆತವನ್ನು ಕಡಿಮೆ ಮಾಡುತ್ತದೆ. ಬೆಚ್ಚಗಿನ ಲವಂಗದ ಎಣ್ಣೆ ಉಗುರು ಬೆಚ್ಚಗೆ ಮಾಡಿ ಮತ್ತು ಹಗುರವಾದ ಕೈಗಳಿಂದ ಮಸಾಜ್ ಮಾಡಿ.

click me!