ಆಹಾರದಲ್ಲಿ ಒಂದೇ ಒಂದು ಬದಲಾವಣೆ.. 6 ತಿಂಗಳಲ್ಲಿ 30 ಕೆಜಿ ತೂಕ ಇಳಿಸಿಕೊಂಡ ದಂತ ವೈದ್ಯೆ

Published : Oct 01, 2025, 05:04 PM IST

Dentist weight loss: ಸೋಶಿಯಲ್ ಮೀಡಿಯಾದಲ್ಲಿ ಡಾ. ಫಿಟ್ ಫೈಲ್ಸ್ ಹೆಸರಿನ ದಂತವೈದ್ಯೆಯೊಬ್ಬರು ಮೊದಲು 97 ಕೆಜಿ ಇದ್ದರು.  ಆದರೆ ಆಹಾರ ಪದ್ಧತಿಯಲ್ಲಿ ಮಾಡಿಕೊಂಡ ಒಂದೇ ಒಂದು ಬದಲಾವಣೆಯಿಂದ ಬರೋಬ್ಬರಿ 30 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಈ ಕುರಿತು  ಮಾಹಿತಿ ಇಲ್ಲಿದೆ ನೋಡಿ.   

PREV
15
ಆರು ತಿಂಗಳಲ್ಲಿ 30 ಕೆಜಿ ತೂಕ ಇಳಿಕೆ

ನೀವು ಸಹ ತೂಕ ಇಳಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದು, ಅದನ್ನು ಹೇಗೆ ಪ್ರಾರಂಭಿಸಬೇಕೆಂದು ಗೊತ್ತಾಗದಿದ್ದರೆ ಆರು ತಿಂಗಳಲ್ಲಿ 30 ಕೆಜಿ ತೂಕ ಇಳಿಸಿಕೊಳ್ಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ ದಂತವೈದ್ಯರ ಕಥೆ ಇಲ್ಲಿದೆ. ಸೆಪ್ಟೆಂಬರ್ 2 ರಂದು ಫಿಟ್‌ನೆಸ್ ಇನ್‌ಫ್ಲುಯೆನ್ಸರ್ ಮತ್ತು ಇನ್‌ಸ್ಟಾಗ್ರಾಂನಲ್ಲಿ  ಡಾ. ಫಿಟ್ ಫೈಲ್ಸ್ ಹೆಸರಿನ ದಂತವೈದ್ಯೆ  97 ಕೆಜಿಯಿಂದ 67 ಕೆಜಿಗೆ ಇಳಿಸಿಕೊಂಡಿದ್ದು ಹೇಗೆ ಎಂಬುದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಈ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

25
ವಿಡಿಯೋದಲ್ಲಿ ಮಾಹಿತಿ

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ದಂತವೈದ್ಯೆ 30 ಕೆಜಿ ತೂಕ ಇಳಿಸಿಕೊಳ್ಳಲು ಹೇಗೆ ಸಾಧ್ಯವಾಯಿತು ಎಂಬುದನ್ನು ಹಂಚಿಕೊಂಡಿದ್ದು, ವಿಡಿಯೋ ಜೊತೆಗೆ "ನನ್ನ ಜೀವನದ ಅತ್ಯಂತ ಕಠಿಣ ಪರಿವರ್ತನೆ, ಆದರೆ ಅದು ಅತ್ಯಂತ ಅಗತ್ಯವಾಗಿತ್ತು." ಎಂದು ಬರೆದುಕೊಂಡಿದ್ದಾರೆ.

35
ಎಲ್ಲಾ ಸಮಸ್ಯೆಗಳಿಂದ ಮುಕ್ತ

ಈ ವಿಡಿಯೋದಲ್ಲಿ ತೂಕ ಇಳಿಕೆಯ ಮೊದಲು ಮತ್ತು ನಂತರದ ಫೋಟೋ ನೋಡಬಹುದು. ಅಲ್ಲಿ ಸಕ್ಕರೆಯನ್ನು ತ್ಯಜಿಸುವ ಮೊದಲು ಆಕೆಗೆ ಡಬಲ್ ಚಿನ್‌, ಅಕಾಂತೋಸಿಸ್ ನಿಗ್ರಿಕನ್ಸ್ (ಕತ್ತಿನ ಹಿಂಭಾಗದಲ್ಲಿ ಕಪ್ಪು ಗುರುತುಗಳು ಮತ್ತು ಪಟ್ಟೆಗಳು ಕಾಣಿಸಿಕೊಳ್ಳುವ ಸ್ಥಿತಿ) ಮತ್ತು ಮುಖದ ಮೇಲೆ ಪಿಗ್ಮೆಂಟೇಶನ್ ಸಮಸ್ಯೆಗಳಿದ್ದವು. ಆದರೆ ಸಕ್ಕರೆಯನ್ನು ತ್ಯಜಿಸಿದ ನಂತರ ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಯಿತು ಮತ್ತು ಈ ಎಲ್ಲಾ ಸಮಸ್ಯೆಗಳಿಂದ ಮುಕ್ತರಾದರು.

45
ಅಕಾಂತೋಸಿಸ್ ನಿಗ್ರಿಕನ್ಸ್

ಜುಲೈ 16 ರ ಮತ್ತೊಂದು ವಿಡಿಯೋ ಕ್ಲಿಪ್‌ನಲ್ಲಿ ದಂತವೈದ್ಯರು ಅಕಾಂತೋಸಿಸ್ ನಿಗ್ರಿಕನ್ಸ್ ಅನ್ನು ನಿಭಾಯಿಸಿದ್ದು ಹೇಗೆಂದು ಮಾತನಾಡಿದ್ದು, ಪಿಗ್ಮೆಂಟೇಶನ್ ತೊಡೆದುಹಾಕಲು ಯಾವುದೇ ಕ್ರೀಮ್ ಬಳಸಲಿಲ್ಲ ಎಂದು ಹೇಳಿದ್ದಾರೆ. "ಕಪ್ಪು ಕುತ್ತಿಗೆ ಕೇವಲ ಚರ್ಮದ ಸಮಸ್ಯೆಯಲ್ಲ. ಇದರರ್ಥ ನಿಮ್ಮ ದೇಹವು ನಿಮಗೆ ಏನನ್ನಾದರೂ ಹೇಳಲು ಪ್ರಯತ್ನಿಸುತ್ತಿದೆ, ಅದನ್ನು ನೀವು ಅರ್ಥಮಾಡಿಕೊಳ್ಳಬೇಕು." ಎಂದು ತಿಳಿಸಿದ್ದಾರೆ.

55
ತೂಕ ಇಳಿಕೆಯಲ್ಲಿ ಸಹಕಾರಿಯಾದದ್ದು ಯಾವ್ದು?

ಇನ್ನು ಅಕಾಂತೋಸಿಸ್ ನಿಗ್ರಿಕನ್ಸ್  ಬಗ್ಗೆ ಹೇಳುವುದಾದರೆ  ಇದು ಒಂದು ಲಕ್ಷಣ, ಸಮಸ್ಯೆಯಲ್ಲ. ಸಾಮಾನ್ಯವಾಗಿ ಬೊಜ್ಜು, ಇನ್ಸುಲಿನ್ ಪ್ರತಿರೋಧ, ಹಾರ್ಮೋನುಗಳ ಅಸಮತೋಲನ, ಮಧುಮೇಹ ಮತ್ತು ಜೆನೆಟಿಕ್ಸ್‌ನಿಂದ ಉಂಟಾಗುತ್ತದೆ. ನನ್ನ ವಿಷಯದಲ್ಲಿ, ಇದು ಬೊಜ್ಜು ಮತ್ತು ಇನ್ಸುಲಿನ್ ಪ್ರತಿರೋಧದಿಂದಾಗಿದೆ. ನಾನು ಯಾವುದೇ ಕ್ರೀಮ್‌ಗಳನ್ನು ಬಳಸಲಿಲ್ಲ ಎಂದು ತಿಳಿಸಿದ್ದಾರೆ ವೈದ್ಯೆ. 

"ಸಕ್ಕರೆಯನ್ನು ತ್ಯಜಿಸಿ ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಹೆಚ್ಚಿನ ಪ್ರೋಟೀನ್ ಆಹಾರವನ್ನು ಅಳವಡಿಸಿಕೊಂಡೆ. ಇದು ತೂಕ ಇಳಿಸುವಲ್ಲಿ ನನಗೆ ಬಹಳಷ್ಟು ಸಹಾಯ ಮಾಡಿತು" ಎಂದು ಸಹ ಹೇಳಿರುವುದನ್ನು ನೀವಿಲ್ಲಿ ವಿಡಿಯೋದಲ್ಲಿ ನೋಡಬಹುದು. 

(Disclaimer: ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ)

Read more Photos on
click me!

Recommended Stories