ಇದನ್ನು ಕುಡಿಯಿರಿ, ವೈದ್ಯರಿಂದ ದೂರವಿರಿ: ಚೀನಿಯರ ಸೌಂದರ್ಯ, ಆರೋಗ್ಯ, ದೀರ್ಘಾಯಸ್ಸಿನ ಗುಟ್ಟು ರಟ್ಟು

Published : Dec 23, 2025, 04:26 PM IST

ಭಾರತೀಯರು ಆಯುರ್ವೇದವನ್ನು ಕಡೆಗಣಿಸುತ್ತಿದ್ದರೆ, ಚೀನಿಯರು ಆರೋಗ್ಯಕ್ಕಾಗಿ ವಿಶೇಷ ಕಷಾಯವನ್ನು ಅವಲಂಬಿಸಿದ್ದಾರೆ. ನಮ್ಮ ಅಡುಗೆಮನೆಯಲ್ಲಿಯೇ ಪದಾರ್ಥಗಳಿಂದ ಚೀನಿಯರು ವೈದ್ಯರಿಂದ ದೂರ ಇರುವುದು ಹೇಗೆ? ಇಲ್ಲಿದೆ ಅವರ ರೆಸಿಪಿ.

PREV
15
ಭಾರತದ ಆಯುರ್ವೇದ

ಭಾರತದ ಮೂಲದ ಆಯುರ್ವೇದ ಎಂದರೆ ಹಲವು ಭಾರತೀಯರಿಗೆ ಅಲರ್ಜಿ. ಅವರಿಗೆ ಏನಿದ್ದರೂ ಮಾತ್ರೆಗಳನ್ನು ತಿನ್ನುವುದೇ ಅಭ್ಯಾಸ. ಮಾತ್ರೆಗಳನ್ನು ತಿಂದೂ ತಿಂದೂ ಎಲ್ಲಾ ಅಂಗಾಂಗಗಳು ಡ್ಯಾಮೇಜ್​ ಆದರೂ ಪರವಾಗಿಲ್ಲ, ಗಿಡ ಮೂಲಿಕೆ ಎಂದರೆ ಮೂದಲಿಕೆ ಎನ್ನುವ ಸಂಸ್ಕೃತಿ ನಮ್ಮದು. ಆದರೆ ಇದೇ ಆಯುರ್ವೇದ ಪದ್ಧತಿಯಿಂದ ಚೀನಾ ಸೇರಿದಂತೆ ಹಲವು ದೇಶಗಳ ಜನರು ಆರೋಗ್ಯವನ್ನು ಕಾಪಿಟ್ಟುಕೊಳ್ಳುತ್ತಿದ್ದಾರೆ.

25
ಆರೋಗ್ಯದ ವಿಷ್ಯದಲ್ಲಿ ಫೇಮಸ್​

ಚೀನಿಯರು ಆರೋಗ್ಯದ ವಿಷಯದಲ್ಲಿ ಬಹಳ ಜಾಗರೂಕರಾಗಿದ್ದಾರೆ. ಇದೇ ಕಾರಣಕ್ಕೆ ಅಲ್ಲಿ ವೈವಿಧ್ಯಮಯ ಕಷಾಯಗಳು ಪ್ರಸಿದ್ಧವಾಗಿವೆ. ಸೌಂದರ್ಯ, ದೀರ್ಘಾಯಸ್ಸು, ಆರೋಗ್ಯ ಎಲ್ಲದರಲ್ಲಿಯೂ ಎತ್ತಿದ ಕೈ ಚೀನಿಯರದ್ದು ಎನ್ನಲಾಗುತ್ತದೆ. ಚೀನಿಯರು ವೈದ್ಯರಿಂದ ಬಹಳ ದೂರ ಇರುತ್ತಾರೆ ಎನ್ನುವ ಮಾತೂ ಇದೆ. ಅದಕ್ಕೆ ಒಂದು ಕಷಾಯವೂ ಕಾರಣ ಎಂದು ಹೇಳಲಾಗಿದೆ.

35
ಏನಿದು ಕಷಾಯ?

ಆ ಕಷಾಯವೇನು ಎಂದು ನೋಡುವುದಾದರೆ, ಇದಕ್ಕೆ ಬೇಕಿರುವುದು, ನಮ್ಮ ಅಡುಗೆ ಮನೆಯಲ್ಲಿಯೇ ಸುಲಭವಾಗಿ ಸಿಗುವ ಪದಾರ್ಥ ಇದಾಗಿದೆ. ಅದೇನೆಂದರೆ, ಲಿಂಬೆಹಣ್ಣು, ಈರುಳ್ಳಿ, ಶುಂಠಿ, ಆರೆಂಜ್​, ಬಳ್ಳುಳ್ಳಿ ಮತ್ತು ಚಕ್ಕೆ.

45
ದಿನಕ್ಕೆರಡು ಬಾರಿ

ಇವೆಲ್ಲವನ್ನೂ ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಕುದಿಸಿ ದಿನಕ್ಕೆ ಎರಡು ಬಾರಿ ಕುಡಿಯುತ್ತಾರೆ ಎನ್ನಲಾಗಿದೆ. ಮೇಲೆ ತಿಳಿಸಿದ ಸಾಮಗ್ರಿಗಳನ್ನು ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಂಡು ಅವುಗಳನ್ನು ಕಟ್​ ಮಾಡಿ ಪಾತ್ರೆಯಲ್ಲಿ ಹಾಕಿ ಕುದಿಸಲಾಗುತ್ತದೆ. ಇದನ್ನು ಒಂದು ಕಪ್​ನಂತೆ ದಿನಕ್ಕೆ ಎರಡು ಬಾರಿ ಅವರು ಸೇವನೆ ಮಾಡುತ್ತಾರೆ.

55
ಎಲ್ಲಾ ಸತ್ವಗಳು

ಲಿಂಬೆಹಣ್ಣು, ಈರುಳ್ಳಿ, ಶುಂಠಿ, ಆರೆಂಜ್​, ಬಳ್ಳುಳ್ಳಿ ಮತ್ತು ಚಕ್ಕೆ ಇವೆಲ್ಲವೂ ಆರೋಗ್ಯಕರವಾಗಿವೆ. ನಮ್ಮ ದೇಹಕ್ಕೆ ಬೇಕಾಗುವ ಎಲ್ಲಾ ಸತ್ವಗಳು, ಎಲ್ಲ ರೀತಿಯ ವಿಟಮಿನ್​, ಮಿನರಲ್ಸ್​ ಎಲ್ಲವೂ ಈ ಪದಾರ್ಥಗಳಲ್ಲಿ ಇವೆ. ಎಷ್ಟು ಸಿಂಪಲ್​ ಅಲ್ವಾ?

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories