Black coffee benefits: ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಶುಭಂ ವತ್ಸ್ಯ ಹೇಳುವ ಪ್ರಕಾರ, ಬ್ಲ್ಯಾಕ್ ಕಾಫಿ ಕುಡಿಯುವುದು ಕೇವಲ ಅಭ್ಯಾಸವಲ್ಲ ಅಥವಾ ಪಾನೀಯವಲ್ಲ. ನೀವು ಸಕ್ಕರೆ ಮತ್ತು ಹಾಲು ಇಲ್ಲದೆ ಕುಡಿದರೆ ಇದು ಯಕೃತ್ತಿಗೆ ಔಷಧಿಯಂತೆ.
ಯಾರೇ ಆದರೂ ಹಾಲು ಮತ್ತು ಸಕ್ಕರೆಯೊಂದಿಗೆ ಕಾಫಿ ಕುಡಿಯುವುದು ಸಹಜ. ಆದರೆ ಸಾಂದರ್ಭಿಕವಾಗಿ ನೀವು ಕಪ್ಪು ಕಾಫಿ ಅಥವಾ ಬ್ಲಾಕ್ ಕಾಫಿ ಕುಡಿಯಲು ಪ್ರಯತ್ನಿಸಿ. ಏಕೆಂದರೆ ಇದರಲ್ಲಿ ಮಾಮೂಲಿ ಕಾಫಿಗಿಂತ ಹೆಚ್ಚಿನ ಆರೋಗ್ಯ ಪ್ರಯೋಜನಗಳಿವೆ. ಅಷ್ಟೇ ಅಲ್ಲ, ಕಪ್ಪು ಕಾಫಿ ನಿಮ್ಮ ಯಕೃತ್ತಿಗೆ ಔಷಧಿಯಂತೆ. ಇದನ್ನು ಕೇವಲ 'ಶಕ್ತಿ ವರ್ಧಕ' ಎಂದು ಭಾವಿಸಬೇಡಿ. ಯಕೃತ್ತಿನ ಕೊಬ್ಬನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
27
ಯಾವುದೇ ಪ್ರಯೋಜನವಾಗಲ್ಲ
ಕಾಫಿಯಲ್ಲಿ ಹಲವಾರು ವಿಧಗಳಿದ್ದರೂ ಭಾರತದಲ್ಲಿ ಹಾಲು ಮತ್ತು ಸಕ್ಕರೆಯಿಂದ ತಯಾರಿಸಿದ ಕಾಫಿಯೇ ಹೆಚ್ಚು ಜನಪ್ರಿಯವಾಗಿರುವುದು. ಆದರೆ ನೀವು ಈ ರೀತಿ ಕಾಫಿ ಮಾಡಿ ಕುಡಿಯುವುದರಿಂದ ಯಾವುದೇ ಪ್ರಯೋಜವಾಗುವುದಿಲ್ಲ. ಬದಲಿಗೆ ಈ ಮೊದಲೇ ಹೇಳಿದ ಹಾಗೆ ಸಕ್ಕರೆ ಅಥವಾ ಹಾಲು ಇಲ್ಲದೆ ಕಪ್ಪು ಕಾಫಿ ಕುಡಿಯಬೇಕು.
37
ಕಪ್ಪು ಕಾಫಿ ಔಷಧಿಯಂತೆ
ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಶುಭಂ ವತ್ಸ್ಯ ಹೇಳುವ ಪ್ರಕಾರ, ಬ್ಲ್ಯಾಕ್ ಕಾಫಿ ಕುಡಿಯುವುದು ಕೇವಲ ಅಭ್ಯಾಸವಲ್ಲ ಅಥವಾ ಪಾನೀಯವಲ್ಲ. ನೀವು ಸಕ್ಕರೆ ಮತ್ತು ಹಾಲು ಇಲ್ಲದೆ ಕುಡಿದರೆ ಇದು ಯಕೃತ್ತಿಗೆ ಔಷಧಿಯಂತೆ. ಇದು ಯಕೃತ್ತು ಅಥವಾ ಲಿವರ್ ಕೊಬ್ಬನ್ನು ಕರಗಿಸುವ ಅಪರೂಪದ ನೈಸರ್ಗಿಕ ಪಾನೀಯವಾಗಿದೆ. ಇದು ಈ ಅಂಗವನ್ನು ದೀರ್ಘಕಾಲೀನ ಹಾನಿಯಿಂದ ರಕ್ಷಿಸುತ್ತದೆ.
ನೀವು ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಕೊಬ್ಬನ್ನು ಕರಗಿಸಬೇಕೆಂದು ಅಂದುಕೊಂಡಿದ್ದರೆ ನಿಮ್ಮ ಕಾಫಿಯಲ್ಲಿ ಹಾಲು ಅಥವಾ ಸಕ್ಕರೆ ಸೇರಿಸಬಾರದು. ಇಲ್ಲದಿದ್ದರೆ ಅದು ಯಾವ ಪರಿಣಾಮ ಬೀರುವುದಿಲ್ಲ.
57
ವಿಜ್ಞಾನ ಹೇಳುವುದೇನು?
ಸಕ್ಕರೆ ಅಥವಾ ಹಾಲು ಇಲ್ಲದೆ ಕಪ್ಪು ಕಾಫಿಯ ಪ್ರಯೋಜನಗಳನ್ನು ಬೆಂಬಲಿಸುವ ವೈಜ್ಞಾನಿಕ ಸಂಶೋಧನೆ ಅಥವಾ ವೈದ್ಯರು ಇದರಲ್ಲಿ ಅಪಾರ ಸಂಪತ್ತು ಇದೆ ಎಂದು ವಿವರಿಸುತ್ತಾರೆ. ಒಟ್ಟಾರೆ 3-4 ಕಪ್ ಕಪ್ಪು ಕಾಫಿ ಕುಡಿಯುವುದರಿಂದ ನಿಮ್ಮ ಯಕೃತ್ತಿನಲ್ಲಿರುವ ಎಲ್ಲಾ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
67
ಚಯಾಪಚಯ ಕ್ರಿಯೆಯೂ ವೃದ್ಧಿಯಾಗುತ್ತೆ
ಬ್ಲಾಕ್ ಕಾಫಿ ಯಕೃತ್ತಿಗೆ ಮಾತ್ರ ಒಳ್ಳೆಯದಲ್ಲ, ಇದು ಯಕೃತ್ತಿನ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಈ ವರ್ಧಿತ ಚಯಾಪಚಯ ಕ್ರಿಯೆಯು ದೇಹದಾದ್ಯಂತ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಹಾಗೆಯೇ ಕೊಬ್ಬಿನ ಅನಿಯಂತ್ರಿತ ಶೇಖರಣೆಯನ್ನು ತಡೆಯುತ್ತದೆ.
77
ಕೊಬ್ಬು ಹೆಚ್ಚಾದಾಗ ಕಂಡುಬರುವ ಲಕ್ಷಣಗಳು
ಮೆಡ್‌ಲೈನ್ ಪ್ರಕಾರ, ಈ ಸಮಸ್ಯೆ ಯಾವುದೇ ಲಕ್ಷಣಗಳಿಲ್ಲದೆ ಸಂಭವಿಸಬಹುದು. ಆದರೆ ಹೊಟ್ಟೆಯ ಬಲಭಾಗದಲ್ಲಿ ಆಯಾಸ ಮತ್ತು ಅಸ್ವಸ್ಥತೆ ಸಾಮಾನ್ಯವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.