ಅಡುಗೆಮನೆಯಲ್ಲೇ ಇದ್ದಾರೆ ನಾಲ್ವರು ಸೂಪರ್ ಹೀರೋಗಳು.. ಖ್ಯಾತ ಹೃದ್ರೋಗ ತಜ್ಞರು ಹೇಳೋದನ್ನ ಕೇಳಿ

Published : Nov 04, 2025, 12:00 PM IST

Healthy Lifestyle: 40 ವರ್ಷಗಳ ಅನುಭವ ಹೊಂದಿರುವ ಪ್ರಸಿದ್ಧ ಹೃದ್ರೋಗ ತಜ್ಞ ಡಾ. ಅಲೋಕ್ ಚೋಪ್ರಾ, ನಮ್ಮ ಭಾರತೀಯ ಅಡುಗೆಮನೆಯಲ್ಲಿಯೇ ಸುಲಭವಾಗಿ ನಾಲ್ಕು ಅತ್ಯದ್ಭುತ ಆಹಾರಗಳು ಲಭ್ಯವಿದೆ ಎಂದು ಹೇಳಿದ್ದಾರೆ. ಅವು ಯಾವುವೆಂದು ನೋಡೋಣ..

PREV
17
ಅಡುಗೆಮನೆಯಲ್ಲಿಯೇ ಲಭ್ಯ

ಕೋವಿಡ್ ನಂತರ ಅನೇಕ ಜನರು ಫುಡ್‌ ಸಪ್ಲಿಮೆಂಟ್ (Food supplement) ಅಥವಾ ಪೂರಕಗಳ ಕಡೆ ಗಮನ ಕೊಡುತ್ತಿದ್ದಾರೆ. ಆದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಫುಡ್‌ ಸಪ್ಲಿಮೆಂಟ್‌ಗಳಲ್ಲಿ ಎಲ್ಲವು ಗುಣಮಟ್ಟದ್ದಾಗಿರಲ್ಲ. ಅಳೆದು ತೂಗಿ ನಾವು ಖರೀದಿಮಾಡಬೇಕಾಗುತ್ತದೆ. ಆದರೆ ಎಲ್ಲರೂ ಹೀಗೆ ದುಡ್ಡು ಖರ್ಚು ಮಾಡಿ ಸಪ್ಲಿಮೆಂಟ್ ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ 40 ವರ್ಷಗಳ ಅನುಭವ ಹೊಂದಿರುವ ಪ್ರಸಿದ್ಧ ಹೃದ್ರೋಗ ತಜ್ಞ ಡಾ. ಅಲೋಕ್ ಚೋಪ್ರಾ, ನಮ್ಮ ಭಾರತೀಯ ಅಡುಗೆಮನೆಯಲ್ಲಿಯೇ ಸುಲಭವಾಗಿ ನಾಲ್ಕು ಅತ್ಯದ್ಭುತ ಆಹಾರಗಳು ಲಭ್ಯವಿದೆ ಎಂದು ಹೇಳಿದ್ದಾರೆ. ಅವು ಯಾವುವೆಂದು ನೋಡೋಣ..

27
ಸಪ್ಲಿಮೆಂಟ್‌ಗಿಂತಲೂ ಹೆಚ್ಚು ಶಕ್ತಿಶಾಲಿ

ವೈದ್ಯರು ತಿಳಿಸಿರುವ ಈ ಆಹಾರಗಳು ಸಪ್ಲಿಮೆಂಟ್‌ಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿ ಕಾರ್ಯನಿರ್ವಹಿಸುತ್ತವೆ. ಅಷ್ಟೇ ಅಲ್ಲ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ. ಹಾಗಾದರೆ ಅಡುಗೆಮನೆಯಲ್ಲಿರುವ ಆ ನಾಲ್ಕು ಸೂಪರ್ ಹೀರೋಗಳು ಯಾರು ಮತ್ತು ಅವು ನಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನವನ್ನು ನೀಡುತ್ತವೆ ಎಂಬುದನ್ನು ಈಗ ತಿಳಿದುಕೊಳ್ಳೋಣ.

37
ರೋಗನಿರೋಧಕ ಶಕ್ತಿ, ಜೀರ್ಣಕ್ರಿಯೆ ಸುಧಾರಣೆ

ಖ್ಯಾತ ಹೃದ್ರೋಗ ತಜ್ಞ ಡಾ.ಅಲೋಕ್ ಚೋಪ್ರಾ ಅವರು ಒತ್ತಿ ಹೇಳುವ ಪ್ರಕಾರ, ನಮ್ಮ ಭಾರತೀಯ ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುವ ನಾಲ್ಕು ಪದಾರ್ಥಗಳು ಸಪ್ಲಿಮೆಂಟ್‌ಗಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಅವು ನಮ್ಮ ರೋಗನಿರೋಧಕ ಶಕ್ತಿ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ದೀರ್ಘಕಾಲೀನ ಶಕ್ತಿಯನ್ನು ಒದಗಿಸುತ್ತವೆ ಎಂದು ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ತಿಳಿಸಿದ್ದಾರೆ.

47
A2 ಹಸುವಿನ ತುಪ್ಪ

ಡಾ. ಚೋಪ್ರಾ ಇದನ್ನು ಜಗತ್ತಿಗೆ ಭಾರತದ ಕೊಡುಗೆ ಎಂದು ಕರೆಯುತ್ತಾರೆ. ಈ ತುಪ್ಪವನ್ನು A2 ಬೀಟಾ-ಕೇಸಿನ್ ಪ್ರೋಟೀನ್ ಉತ್ಪಾದಿಸುವ ಹಸುಗಳ ಹಾಲಿನಿಂದ ತಯಾರಿಸಲಾಗುತ್ತದೆ. ಅವರು ಇದನ್ನು 'ದೇಹ ಮತ್ತು ಮೆದುಳಿಗೆ ಶುದ್ಧ ಇಂಧನ' ಎಂದು ಬಣ್ಣಿಸುತ್ತಾರೆ.

57
ಡ್ರೈ ಫ್ರೂಟ್ಸ್

ಈ ಪದಾರ್ಥಗಳು ಆರೋಗ್ಯಕರ ಕೊಬ್ಬಿನಿಂದ ಕೂಡಿರುತ್ತವೆ. ಜೀವಕೋಶಗಳನ್ನು ಸರಿಪಡಿಸಲು ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಲು ಇವು ತುಂಬಾ ಉಪಯುಕ್ತವಾಗಿವೆ ಎಂದು ವೈದ್ಯರು ಹೇಳಿದ್ದಾರೆ.

67
ಗಿಡಮೂಲಿಕೆಗಳು ಮತ್ತು ಮಸಾಲೆಗಳು

ನಮ್ಮ ಪೂರ್ವಜರು ಆಹಾರವನ್ನು ರುಚಿ ಮತ್ತು ಬುದ್ಧಿವಂತಿಕೆ ಎರಡರಿಂದಲೂ ಸವಿಯುತ್ತಿದ್ದರು ಎಂದು ಡಾ. ಚೋಪ್ರಾ ಹೇಳುತ್ತಾರೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆ (NIH) ಪ್ರಕಾರ, ಮಸಾಲೆಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಅವು ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟ, ಕೊಬ್ಬು ಮತ್ತು ಉರಿಯೂತದಿಂದ ಉಂಟಾಗುವ ಅಂಗಾಂಶ ಹಾನಿಯನ್ನು ತಡೆಯಲು ಸಹಾಯ ಮಾಡುತ್ತವೆ.

77
ದ್ವಿದಳ ಧಾನ್ಯಗಳು

ಇವು ಅತ್ಯುತ್ತಮ ಸಸ್ಯಾಹಾರಿ ಪ್ರೋಟೀನ್ ಆಯ್ಕೆಗಳಾಗಿವೆ. ದೈನಂದಿನ ಶಕ್ತಿಯನ್ನು ಹೆಚ್ಚಿಸಲು ಮತ್ತು ಸ್ನಾಯುಗಳ ಆರೋಗ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತವೆ ಎಂದು ಹೃದ್ರೋಗ ತಜ್ಞರು ವಿವರಿಸುತ್ತಾರೆ.

ಕೊನೆಯ ಮಾತು
ನಿಜವಾದ ಆರೋಗ್ಯ ಯಾವಾಗಲೂ ಸಪ್ಲಿಮೆಂಟ್ ಅಥವಾ ಪೂರಕಗಳ ರೂಪದಲ್ಲಿ ಬರುವುದಿಲ್ಲ. ಕೆಲವೊಮ್ಮೆ ಅದು ನಿಮ್ಮ ಅಡುಗೆ ಮನೆಯಲ್ಲೇ ಇರುತ್ತದೆ ಎಂದು ಡಾ. ಚೋಪ್ರಾ ತಿಳಿಸಿದ್ದಾರೆ.

Read more Photos on
click me!

Recommended Stories