ಮೆದುಳು ಶಾರ್ಪ್ ಆಗಿರ್ಬೇಕು ಅಂದ್ರೆ ಪ್ರತಿದಿನ ಈ ಕೆಲಸಗಳನ್ನು ಮಾಡಿ

Published : May 06, 2025, 07:43 PM ISTUpdated : May 07, 2025, 10:02 AM IST

ನಿಮ್ಮ ಮೆದುಳು ಚೆನ್ನಾಗಿ ವರ್ಕ್ ಮಾಡಬೇಕೇ? ಹಾಗಿದ್ರೆ ನೀವು ಒಂದಿಷ್ಟು ವಿಷಯಗಳನ್ನು ಫಾಲೋ ಮಾಡಬೇಕು. ಆ ಮೂಲಕ ನಿಮ್ಮ ಮೆದುಳು ಚುರುಕಾಗಿರುವಂತೆ ನೋಡಿಕೊಳ್ಳಬೇಕು.   

PREV
111
ಮೆದುಳು ಶಾರ್ಪ್ ಆಗಿರ್ಬೇಕು ಅಂದ್ರೆ ಪ್ರತಿದಿನ ಈ ಕೆಲಸಗಳನ್ನು ಮಾಡಿ

ನಮ್ಮ ಆಯಸ್ಸು ಹೆಚ್ಚಾದಂತೆ, ನಮ್ಮ ಮೆದುಳು ಕಾರ್ಯನಿರ್ವಹಿಸುವ ವಿಧಾನ ಬದಲಾಗುತ್ತೆ, ಅಂದ್ರೆ, ನಮ್ಮ ಮೆಮೊರಿ ಪವರ್ ವೀಕ್ ಆಗುತ್ತಾ ಹೋಗುತ್ತೆ. ಇತ್ತೀಚಿನ ದಿನಗಳಲ್ಲಂತೂ ಅರಿವಿನ ದುರ್ಬಲತೆಯ (memory power) ಅಪಾಯ ಹೆಚ್ಚುತ್ತಿದೆ.  ಮೆಮೊರಿ ಪವರ್ ವೀಕ್ ಆಗೋದನ್ನು ನಾವು ಹೇಗೆ ದೂರ ಮಾಡಬಹುದು ಅನ್ನೋದನ್ನು ನೋಡೋಣ. 

211

ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ನೀವು ನಿಮ್ಮ ಆರೋಗ್ಯದ ಕಡೆಗೆ ಗಮನ ಹರಿಸಿದ್ರೆ, ಅದರಿಂದ ಮೆದುಳಿನ ಆರೋಗ್ಯ ಸಹ ಉತ್ತಮವಾಗುತ್ತೆ. ಹಾಗಾಗಿ ದೈಹಿಕ ಆರೋಗ್ಯ (physical health) ಉತ್ತಮವಾಗಿರುವಂತೆ ನೋಡಿಕೊಳ್ಳಿ.

311

ಧೂಮಪಾನ ಮದ್ಯಪಾನ ಬೇಡ
ಧೂಮಪಾನದಿಂದ (smoking) ಹಾಗೂ ಮದ್ಯಪಾನದಿಂದ ಮೆದುಳಿಗೆ ಹೆಚ್ಚು  ಹಾನಿಯಾಗುತ್ತೆ. ಹಾಗಾಗಿ ಸಾಧ್ಯವಾದಷ್ಟು ಇವುಗಳನ್ನು ಅವಾಯ್ಡ್ ಮಾಡಿ. 

411

ವಾರಕ್ಕೆ ಮೂರು ಬಾರಿ ವ್ಯಾಯಾಮ ಮಾಡಿ
ದೈಹಿಕ ಚಟುವಟಿಕೆ (physical activity) ಮತ್ತು ಮೆದುಳಿನ ಆರೋಗ್ಯದ ನಡುವೆ ಸಂಬಂಧವಿದೆ, ಹಾಗಾಗಿ ನೀವು ವಾರದಲ್ಲಿ ಮೂರು ದಿನ ವ್ಯಾಯಾಮ ಮಾಡುವ ಮೂಲಕ ದೈಹಿಕವಾಗಿ ಸದೃಢವಾಗಿರಿ. 
 

511

ಒಂದು ಕಾಲಿನ ಮೇಲೆ ನಿಂತುಕೊಳ್ಳಿ
ನೀವು ನಿಮ್ಮ ದಿನಚರಿಯಲ್ಲಿ ಒಂದು ಕಾಲಿನ ವ್ಯಾಯಾಮವನ್ನು ಸೇರಿಸಿಕೊಳ್ಳಬೇಕು. ಏಕೆಂದರೆ ನಡಿಗೆ ಒಂದು ಕಾಲಿನ ಸಮತೋಲನವನ್ನು ಹೆಚ್ಚು ಅವಲಂಬಿಸಿದೆ ಮತ್ತು ನಾವು ವಯಸ್ಸಾದಂತೆ ಇದನ್ನು ಕಾಪಾಡಿಕೊಳ್ಳುವುದು ನಿರ್ಣಾಯಕವಾಗುತ್ತದೆ. ಒಂದು ಕಾಲಿನ ಮೇಲೆ ನಿಂತುಕೊಳ್ಳೋದರಿಂದ ಮೆದುಳು ಅಲರ್ಟ್ ಆಗುತ್ತೆ. 

611

ಕಾಫಿ ಅಲ್ಲ, ನೀರು ಕುಡಿಯಿರಿ
ಪ್ರತಿದಿನ ಸಾಕಷ್ಟು ನೀರು ಕುಡಿಯೋದನ್ನು ಅಭ್ಯಾಸ ಮಾಡಿಕೊಳ್ಳಿ. ಕಾಫಿ ಟೀ ಕುಡಿಯೋದನ್ನು ಕಡಿಮೆ ಮಾಡಿ. 

711

ಚೆನ್ನಾಗಿ ನಿದ್ರೆ ಮಾಡಿ. 
ರಾತ್ರಿಯಲ್ಲಿ ಚೆನ್ನಾಗಿ ನಿದ್ರೆ ಬರದ ಕಾರಣ ಒತ್ತಡಕ್ಕೊಳಗಾಗುವ ಬದಲು, ನಿದ್ರೆಗೆ ಸಮಯ  (sleeping schedule) ಮೀಸಲಿಡಿ. ಪ್ರತಿದಿನ ಸರಿಸುಮಾರು ಒಂದೇ ಸಮಯದಲ್ಲಿ ಎದ್ದೇಳುವ ಮೂಲಕ ನಿಮ್ಮ ಬೆಳಿಗ್ಗೆಯನ್ನು ಸ್ಥಿರಗೊಳಿಸಿ. ವಾರಾಂತ್ಯದಲ್ಲಿ ನಿಮಗೆ ಹೆಚ್ಚು ನಿದ್ರೆ ಬೇಕಾದರೆ, 60 ರಿಂದ 90 ನಿಮಿಷಗಳು ಅಥವಾ ಹೆಚ್ಚುವರಿಯಾಗಿ ನಿದ್ರೆ, ಮಾಡಿ. ಇದರಿಂದ ಮೆದುಳು ಚುರುಕಾಗುತ್ತೆ. 
 

811

ಸೋಶಿಯಲೈಸ್ ಆಗಿ
ಸೋಶಿಯಲೈಜ್ ಆಗೋದು ಅಂದ್ರೆ, ಕೇವಲ ಸೋಶಿಯಲ್ ಮೀಡಿಯಾದಲ್ಲಿ ಇರೋದು ಅಲ್ಲ, ಬದಲಾಗಿ ನೀವು ಹೊರಗಿನ್ ಜಗತ್ತಿನ ಜೊತೆಗೆ ನಿಮ್ಮನ್ನು ಕನೆಕ್ಟ್ ಮಾಡಬೇಕು. 

911

ಫೋನ್ ಬೌಂಡರಿಗಳನ್ನು ಸ್ಥಾಪಿಸಿ
ಇಡೀ ದಿನ ಫೋನ್ ಬಳಕೆ ಮಾಡಬೇಡಿ. ಫೋನ್ ಗಳಿಗೂ ಬ್ರೇಕ್ ಕೊಡಿ. ಯಾಕಂದ್ರೆ ಫೋನ್ ಗೆ ಅಡಿಕ್ಟ್ ಆದ್ರೆ, ಅದರಿಂದ ಹೊರ ಬರೋದು ತುಂಬಾನೆ ಕಷ್ಟ ಇದೆ. ಇದು ಮೆದುಳಿಗೆ ಹಾನಿಯನ್ನುಂಟು ಮಾಡುತ್ತೆ. ಹಾಗಾಗಿ ಎಷ್ಟು ಬೇಕೋ ಅಷ್ಟೇ ಬಳಕೆ ಮಾಡಿ. 

1011

ಆಲಿವ್ ಎಣ್ಣೆಯನ್ನು ಆರಿಸಿ
ಬೇರೆಲ್ಲಾ ಎಣ್ಣೆ, ಬೆಣ್ಣೆಯನ್ನು ಬಿಟ್ಟು ನಿಮ್ಮ ಅಡುಗೆಯಲ್ಲಿ ಆಲಿವ್ ಎಣ್ಣೆಯನ್ನು (Olive oil) ಸೇರಿಸಿ. ಇದರಿಂದ ನಿಮ್ಮ ಆರೋಗ್ಯ, ಮೆದುಳಿನ ಆರೋಗ್ಯ ಚೆನ್ನಾಗಿರುತ್ತೆ. 

1111

ಹೊಸ ಹವ್ಯಾಸ ರೂಢಿಸಿ, ಹೊಸ ಜನರನ್ನು ಭೇಟಿ ಮಾಡಿ
“ಮೆದುಳು ಮತ್ತು ಮನಸ್ಸಿನ ಆರೋಗ್ಯವು ನಿಮ್ಮ ಚಟುವಟಿಕೆ ಮೇಲೆ ಸಹ ಪರಿಣಾಮ ಬೀರುತ್ತೆ. ಹಾಗಾಗಿ ಸಾಧ್ಯವಾದಷ್ಟು ಹೊಸ ಹವ್ಯಾಸಗಳನ್ನು ರೂಢಿ ಮಾಡಿ, ಹೊಸ ಜನರನ್ನು ಭೇಟಿ ಮಾಡಿ. 

Read more Photos on
click me!

Recommended Stories