ನಿಮ್ಮನ್ನು ಕಾಡುತ್ತಿರುವ ತಲೆನೋವಿಗೆ ಹೈ ಬಿಪಿನೇ ಕಾರಣನಾ? ತಿಳಿಯುವುದು ಹೇಗೆ

Published : May 06, 2025, 01:04 PM ISTUpdated : May 06, 2025, 02:28 PM IST

ಅಧಿಕ ರಕ್ತದೊತ್ತಡವಿದ್ದ ಸಮಯದಲ್ಲೂ ಕೆಲವರಿಗೆ ಅತೀಯಾಗಿ ತಲೆನೋವು ಆಗುತ್ತದೆ. ಹಾಗಿದ್ದರೆ ಈ ಅಧಿಕ ರಕ್ತದೊತ್ತಡದ ಕಾರಣಕ್ಕೇ ನಿಮಗೆ ತಲೆನೋವಾಗುತ್ತಿದೆ ಎಂದಾದರೆ ಅದನ್ನು ತಿಳಿಯುವುದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ

PREV
16
ನಿಮ್ಮನ್ನು ಕಾಡುತ್ತಿರುವ ತಲೆನೋವಿಗೆ ಹೈ ಬಿಪಿನೇ ಕಾರಣನಾ? ತಿಳಿಯುವುದು ಹೇಗೆ

ತಲೆನೋವು ಅನೇಕರನ್ನು ಹೆಚ್ಚಾಗಿ ಕಾಡುವ ಸಾಮಾನ್ಯ ಸಮಸ್ಯೆ, ಒಬ್ಬೊಬ್ಬರಿಗೆ ಮೈಗ್ರೇನ್‌ ಕಾರಣಕ್ಕೆ ತಲೆನೋವು ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಇನ್ನೂ ಬೇರೆ ಆರೋಗ್ಯ ಸಮಸ್ಯೆಗಳ ಕಾರಣಕ್ಕೆ ತಲೆ ನೋವು ಬರಬಹುದು. ಆದರೆ ಅಧಿಕ ರಕ್ತದೊತ್ತಡವಿದ್ದ ಸಮಯದಲ್ಲೂ ಕೆಲವರಿಗೆ ಅತೀಯಾಗಿ ತಲೆನೋವು ಆಗುತ್ತದೆ. ಹಾಗಿದ್ದರೆ ಈ ಅಧಿಕ ರಕ್ತದೊತ್ತಡದ ಕಾರಣಕ್ಕೆ ನಿಮಗೆ ತಲೆನೋವಾಗುತ್ತಿದೆ ಎಂದಾದರೆ ಅದನ್ನು ತಿಳಿಯುವುದು ಹೇಗೆ ಎಂಬುದನ್ನು ಈಗ ತಿಳಿದುಕೊಳ್ಳೋಣ.

26

ಅಧಿಕ ರಕ್ತದೊತ್ತಡದಿಂದ ಬರುವ ತಲೆನೋವು ಸಾಮಾನ್ಯವಾಗಿ ತಲೆಯ ಎರಡೂ ಬದಿಗಳಲ್ಲಿ ಮಿಡಿಯುವ ನೋವನ್ನು ಉಂಟುಮಾಡುತ್ತದೆ ಇದು ಸಾಮಾನ್ಯ ಒತ್ತಡದ ಕಾರಣಕ್ಕೆ ಬರುವ ತಲೆನೋವಿಗಿಂತ ಭಿನ್ನವಾಗಿರುತ್ತದೆ. ಬಿಪಿಯಿಂದ ಬರುವ ತಲೆನೋವು ಸಾಮಾನ್ಯವಾಗಿ ಇದ್ದಕ್ಕಿದ್ದಂತೆ ಪ್ರಾರಂಭವಾಗುತ್ತದೆ. ಹೆಚ್ಚಾಗಿ ಬೆಳಗ್ಗೆ, ಮತ್ತು ದಿನ ಮುಂದುವರೆದಂತೆ ತಲೆನೋವು ಹೆಚ್ಚಾಗಬಹುದು.ಬಿಪಿಯಿಂದ ಬರುವ ತಲೆನೋವು ತುಂಬಾ ತೀವ್ರವಾಗಿರಬಹುದು ಮತ್ತು ರಕ್ತದೊತ್ತಡದ ಔಷಧಿಯನ್ನು ತೆಗೆದುಕೊಳ್ಳದೇ ಇದ್ದರೆ ಹಲವು ಗಂಟೆಗಳ ಕಾಲ ಅಥವಾ ಇಡೀ ದಿನ ನಿಮ್ಮನ್ನು ಈ ತಲೆನೋವು ಕಾಡಬಹುದು. 

36

ಬಿಪಿ ಹೆಚ್ಚಾದಾಗ ಕಂಡು ಬರುವ ಇತರ ಲಕ್ಷಣಗಳು: ಅಧಿಕ ರಕ್ತದೊತ್ತಡವು ತಲೆತಿರುಗುವಿಕೆ, ವಾಕರಿಕೆ, ದೃಷ್ಟಿ ಮಂದವಾಗುವುದು ಅಥವಾ ಗೊಂದಲದಂತಹ ಇತರ ದೈಹಿಕ ಮಾನಸಿಕ ಅಸ್ವಸ್ಥತೆಗಳಿಗೂ ಕಾರಣವಾಗಬಹುದು.ಸಾಮಾನ್ಯವಾಗಿ ಅಧಿಕ ರಕ್ತದೊತ್ತಡದಿಂದಾಗಿ ತಲೆನೋವು ಉಂಟಾಗುತ್ತದೆ, ಸಾಮಾನ್ಯವಾಗಿ ನಿಮ್ಮ ಬಿಪಿ ಅಪಾಯಕಾರಿಯಾಗಿ ಹೆಚ್ಚಾದಾಗ ಅಂದರೆ 180/120 mm Hg ಗಿಂತಲೂ ಹೆಚ್ಚಾದಾಗ ತಲೆನೋವು ಕಾಣಿಸಿಕೊಳ್ಳುತ್ತದೆ. 

46

ನೀವು ತೆಗೆದುಕೊಳ್ಳುವ ನೋವು ನಿವಾರಕ ಮಾತ್ರೆಗಳು ಈ ತಲೆನೋವಿನಿಂದ ನಿಮಗೆ ಮುಕ್ತಿ ನೀಡದು. ಹಾಗೆಯೇ ಮೂಗಿನಿಂದ ರಕ್ತಸ್ರಾವ, ಎದೆ ನೋವು, ಉಸಿರಾಟದ ತೊಂದರೆ ಅಥವಾ ದೇಹದ ಮರಗಟ್ಟುವಿಕೆ ಮುಂತಾದ ಇತರ ಲಕ್ಷಣಗಳು ಸಾಮಾನ್ಯವಾಗಿ ನಿಮ್ಮ ಬಿಪಿ ಮಿತಿ ಮೀರಿ ಹೋಗಿದೆ ಎಂಬುದನ್ನು ಸೂಚಿಸುತ್ತವೆ.

ಕುಟುಂಬದ ಹಿನ್ನೆಲೆ: ಇದರ ಜೊತೆಗೆನಿಮ್ಮ ಕುಟುಂಬದಲ್ಲಿ ಅಧಿಕ ರಕ್ತದೊತ್ತಡ (ಬಿಪಿ) ಸಮಸ್ಯೆ ರಕ್ತಗತವಾಗಿ ಬಂದಿದ್ದರೆ ಮತ್ತು ಹೊಸ ಅಥವಾ ಹದಗೆಡುತ್ತಿರುವ ತಲೆನೋವುಗಳನ್ನು  ನೀವು ಅನುಭವಿಸಿದರೆ, ಇದು ನಿಮಗೆ ಅಧಿಕ ರಕ್ತದೊತ್ತಡ ಇದೆ ಎಂಬುದನ್ನು ಸೂಚಿಸುತ್ತದೆ. 

56

ದೃಷ್ಟಿಯಲ್ಲಿ ವ್ಯತ್ಯಾಸ: ತಲೆನೋವಿನೊಂದಿಗೆ ಮಸುಕಾದ ದೃಷ್ಟಿ ಅಥವಾ ಎರಡೆರಡು  ಕಾಣಿಸಿಕೊಳ್ಳುವುದು, ಅಧಿಕ ರಕ್ತದೊತ್ತಡದಿಂದ ತಲೆಬುರುಡೆಯೊಳಗೆ ಉಂಟಾಗುವ ಹೆಚ್ಚಾದ ಒತ್ತಡವೂ ಕೂಡ ಇದನ್ನೂ ಸೂಚಿಸುತ್ತದೆ.
 

66

ವೈದ್ಯಕೀಯ ತುರ್ತು: ಅಧಿಕ ರಕ್ತದೊತ್ತಡದ ಲಕ್ಷಣಗಳೊಂದಿಗೆ ಹಠಾತ್, ತೀವ್ರ ತಲೆನೋವು ವೈದ್ಯಕೀಯ ತುರ್ತುಸ್ಥಿತಿಯಾಗಿದೆ ಹಾಗಾಗಿ ಸಾಧ್ಯವಾದಷ್ಟು ಬೇಗ ವೈದ್ಯರ ಬಳಿ ಹೋಗಿ ತುರ್ತು ಆರೈಕೆಯನ್ನು ಪಡೆಯಿರಿ.

Read more Photos on
click me!

Recommended Stories