Methi seeds water: ಮೆಂತ್ಯೆ ಕಾಳನ್ನು ನೀರಿನಲ್ಲಿ ನೆನೆಸಿ ಅಥವಾ ಕುದಿಸಿ ಹೇಗೆ ತಿನ್ಬೇಕು?

Published : Sep 17, 2025, 06:04 PM IST

Fenugreek Water for Health: ಕೆಲವರಿಗೆ ಮೆಂತ್ಯೆ ಕಾಳನ್ನು ನೀರಿನಲ್ಲಿ ನೆನೆಸಿ ತಿನ್ನಬೇಕೋ ಅಥವಾ ಕುದಿಸಿ ತಿನ್ನಬೇಕೋ ಎಂಬುದೇ ದೊಡ್ಡ ಚಿಂತೆ. ಆದರೆ ತಜ್ಞರು ಈ ಬಗ್ಗೆ ಏನ್ ಹೇಳ್ತಾರೆ ನೋಡೋಣ.

PREV
15
ಔಷಧೀಯ ಗುಣಗಳಿವೆ

ಪ್ರತಿ ದಿನ ಮೆಂತ್ಯೆ ಕಾಳು ಸೇವಿಸುವ ಮಂದಿ ನಮ್ಮ ಮಧ್ಯೆ ಇದ್ದಾರೆ. ಆದರೆ ಕೆಲವರಿಗೆ ಇದನ್ನು ನೀರಿನಲ್ಲಿ ನೆನೆಸಿ ತಿನ್ನಬೇಕೋ ಅಥವಾ ಕುದಿಸಿ ತಿನ್ನಬೇಕೋ ಎಂಬುದೇ ದೊಡ್ಡ ಚಿಂತೆ. ಆದರೆ ತಜ್ಞರು ಈ ಬಗ್ಗೆ ಏನ್ ಹೇಳ್ತಾರೆ ನೋಡೋಣ. ನಮ್ಮ ಅಡುಗೆಮನೆಯಲ್ಲಿ ಆರೋಗ್ಯಕ್ಕೆ ವರದಾನವಾಗಿರುವ ಅನೇಕ ಪದಾರ್ಥಗಳು ಇವೆ. ಈ ಪೈಕಿ ಮೆಂತ್ಯೆ ಕಾಳು ಒಂದಾಗಿದ್ದು, ಇದು ಸಾಕಷ್ಟು ಔಷಧೀಯ ಗುಣಗಳನ್ನು ಒಳಗೊಂಡಿದೆ. ಇದನ್ನು ಸರಿಯಾಗಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ನಿಯಂತ್ರಣ, ಜೀರ್ಣ ಕ್ರಿಯೆ, ಹೃದಯದ ಆರೋಗ್ಯ ಮತ್ತು ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ.

25
ಮೆಂತ್ಯೆ ಬೀಜಗಳಲ್ಲಿ ಏನೆಲ್ಲಾ ಇದೆ?

ಮೆಂತ್ಯೆ ಬೀಜಗಳನ್ನು ನೀರಿನಲ್ಲಿ ನೆನೆಸಿ ಅಥವಾ ಕುದಿಸಿ ಸೇವಿಸುವುದರಿಂದ ಅವುಗಳಲ್ಲಿ ಕರಗುವ ಫೈಬರ್, ಉತ್ಕರ್ಷಣ ನಿರೋಧಕಗಳು, ಕಬ್ಬಿಣ, ಸಪೋನಿನ್‌ಗಳು ಮತ್ತು ಫ್ಲೇವನಾಯ್ಡ್‌ಗಳಂತಹ ಜೈವಿಕವಾಗಿ ಸಕ್ರಿಯವಾಗಿರುವ ಸಂಯುಕ್ತಗಳನ್ನು ಹೊಂದಿರುತ್ತವೆ. ಅವು ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ದೇಹವು ಜೀರ್ಣ ಕ್ರಿಯೆಯನ್ನು ಸುಧಾರಿಸಲು ಹಾಗೂ ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.

35
ನೆನೆಸಿದ ಮೆಂತ್ಯೆ ನೀರಿನ ಪ್ರಯೋಜನಗಳು

1 ಚಮಚ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ನೀವು ಆ ನೀರನ್ನು ಕುಡಿಯಬಹದು ಮತ್ತು ಬೀಜಗಳನ್ನು ತಿನ್ನಬಹುದು. ಮೆಂತ್ಯ ಬೀಜಗಳನ್ನು ನೆನೆಸಿದ ನಂತರ ನೀರು ತಿಳಿ ಕಂದು ಬಣ್ಣಕ್ಕೆ ತಿರುಗುತ್ತದೆ. ಏಕೆಂದರೆ ಅದು ಬೀಜಗಳಿಂದ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. ಈ ನೀರನ್ನು ಕುಡಿಯುವುದರಿಂದ ಚಯಾಪಚಯ ಕ್ರಿಯೆ ವೇಗವಾಗುತ್ತದೆ. ಚರ್ಮ ಮತ್ತು ಕೂದಲನ್ನು ಬಲಪಡಿಸುತ್ತದೆ. ಆದರೆ ನೀರಿನ ರುಚಿ ಸ್ವಲ್ಪ ಕಹಿಯಾಗಿರುತ್ತದೆ.

45
ಕುದಿಸಿದ ಮೆಂತ್ಯ ನೀರಿನ ಪ್ರಯೋಜನಗಳು

ಈ ಮೆಂತ್ಯ ನೀರನ್ನು ತಯಾರಿಸಲು ಮೆಂತ್ಯ ಬೀಜಗಳನ್ನು ನೀರಿನಲ್ಲಿ ಕೆಲವು ನಿಮಿಷಗಳ ಕಾಲ ಕುದಿಸಿ. ನಂತರ ಅವುಗಳನ್ನು ಸೋಸುವ ಮೊದಲು ತಣ್ಣಗಾಗಲು ಬಿಡಿ. ಕುದಿಯುವ ಪ್ರಕ್ರಿಯೆಯು ಸಪೋನಿನ್‌ಗಳು ಮತ್ತು ಆಲ್ಕಲಾಯ್ಡ್ ಗಳನ್ನು ಬಿಡುಗಡೆ ಮಾಡುತ್ತವೆ. ಇವು ಕೊಲೆಸ್ಟ್ರಾಲ್ ಮಟ್ಟ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುವ ಶಕ್ತಿಶಾಲಿ ಸಂಯುಕ್ತಗಳಾಗಿವೆ. ಆದ್ದರಿಂದ 200 ಎಂಎಲ್ ನೀರಿಗೆ ಒಂದು ಚಮಚ ಮೆಂತ್ಯ ಬೀಜಗಳನ್ನು ಹಾಕಿ. 3-5 ನಿಮಿಷಗಳ ಕಾಲ ಕುದಿಸಿ. ತಣ್ಣಗಾದ ನಂತರ ಕುಡಿಯಿರಿ. ಈ ನೀರು ಉರಿಯೂತ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕೀಲು ನೋವು ಮತ್ತು ಹೃದಯದ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಇದರ ರುಚಿ ಸೌಮ್ಯ ಮತ್ತು ಮೃದುವಾಗಿರುತ್ತದೆ ಆದ್ದರಿಂದ ಕಹಿಯನ್ನು ಇಷ್ಟಪಡದವರಿಗೆ ಮಾತ್ರ ಇದು ಬೆಸ್ಟ್ ಅಂತಾನೇ ಹೇಳಬಹುದು.

55
ಯಾವ ವಿಧಾನವು ಉತ್ತಮವಾಗಿದೆ?

ತಜ್ಞರ ಪ್ರಕಾರ, ನೆನೆಸಿದ ಮೆಂತ್ಯ ನೀರು ಜೀರ್ಣ ಕ್ರಿಯೆ, ಸಕ್ಕರೆ ನಿಯಂತ್ರಣ ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸುವಂತಹ ದೈನಂದಿನ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಹಾಗೆಯೇ ಉರಿಯೂತ, ಕೊಲೆಸ್ಟ್ರಾಲ್, ಹೃದಯ ಆರೋಗ್ಯದಂತಹ ನಿರ್ದಿಷ್ಟ ಕಾಯಿಲೆಗೆ ಕುದಿಸಿದ ಮೆಂತ್ಯೆ ನೀರನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಗರಿಷ್ಠ ಪ್ರಯೋಜನ ಪಡೆಯಲು ಎರಡೂ ವಿಧಾನಗಳನ್ನು ಬಳಸಬಹುದು. ಪ್ರತಿದಿನ ಬೆಳಗ್ಗೆ ನೆನೆಸಿದ ಮಂತ್ಯ ನೀರನ್ನು ಕುಡಿಯಿರಿ ಮತ್ತು ನೀವು ವಾರದಲ್ಲಿ ಕೆಲವು ದಿನಗಳು ಮಾತ್ರ ಕುದಿಸಿ ಆರಿಸಿದ ನೀರನ್ನೂ ಕುಡಿಯಬಹುದು.

Read more Photos on
click me!

Recommended Stories