ಕಾರ್ನ್ ಸಿಲ್ಕ್ ಮರೆತು ಕೂಡ ಎಸೆಯಬೇಡಿ, ಇದನ್ನು ಈ ರೀತಿ ಬಳಸಬಹುದು ಕೇಳಿಸ್ಕೊಳ್ಳಿ!

First Published Aug 8, 2022, 5:39 PM IST

ಮಳೆಗಾಲದಲ್ಲಿ ಬಿಸಿ ಬಿಸಿ ಜೋಳ ತಿನ್ನೋದೇ ಒಂದು ಮಜ. ಜನರು ಇದನ್ನು ಸಾಕಷ್ಟು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಜನರು ಜೋಳದ ಸಿಪ್ಪೆ ಸುಲಿದು ಅದರ ಕೂದಲನ್ನು ಅಥವಾ ಕಾರ್ನ್ ಸಿಲ್ಕ್ ಎಂದು ಕರೆಯಲಾಗುವ ಕೂದಲನ್ನು ಎಸೆಯೋದನ್ನು ನೀವು ಗಮನಿಸಿರಬಹುದು. ಆದರೆ ನೀವು ಕಸವಾಗಿ ಎಸೆಯುವ ಕಾರ್ನ್ ಸಿಲ್ಕ್, ನಮಗೆ ತುಂಬಾ ಪ್ರಯೋಜನಕಾರಿ ಎಂದು ತಿಳಿದರೆ ನಿಮಗೆ ಅಚ್ಚರಿಯಾಗೋದು ಖಂಡಿತಾ. ಹಾಗಿದ್ರೆ ಬನ್ನಿ ಕಾರ್ನ್ ಸಿಲ್ಕ್ ನ ಪ್ರಯೋಜನ ಮತ್ತು ಅದನ್ನು ಹೇಗೆ ಬಳಸೋದು ಎಂದು ಇಲ್ಲಿ ತಿಳಿಯಿರಿ.

ಕಾರ್ನ್ ಸಿಲ್ಕ್ ನಲ್ಲಿರುವ(Corn silk) ಪೋಷಕಾಂಶ

ಜೋಳ, ಇದು ವಿಟಮಿನ್, ಮಿನರಲ್ಸ್  ಮತ್ತು ಫೈಬರಿನಿಂದ ಸಮೃದ್ಧವಾಗಿದೆ ಮತ್ತು ರುಚಿ ಜೊತೆಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಕಾರ್ನ್ ಸಿಲ್ಕ್ ಅಂದರೆ ಜೋಳದ ಕೂದಲು ಸಹ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತೆ, ಇದರಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ 2 ಜೊತೆಗೆ, ವಿಟಮಿನ್ ಸಿ ಮತ್ತು ಕೆ ನಂತಹ ಪ್ರಮುಖ ಪೋಷಕಾಂಶಗಳು ಸಹ ಇರುತ್ತೆ, ಇವು ಆರೋಗ್ಯಕ್ಕೆ ಉತ್ತಮವಾಗಿದೆ.

ಕಾರ್ನ್ ಸಿಲ್ಕ್ ಬಳಸೋದು ಹೇಗೆ?

ನೀವು ಕಾರ್ನ್ ಸಿಲ್ಕ್ ಅನ್ನು ಅನೇಕ ರೀತಿಯಲ್ಲಿ ಬಳಸಬಹುದು. ನಿಮಗೆ ಕಾರ್ನ್ ಸಿಲ್ಕ್ ಟೀ(Corn silk tea) ಮಾಡೋದು ಹೇಗೆ ಅನ್ನೋದನ್ನು ಹೇಳುತ್ತೇವೆ, ಇದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಮತ್ತು ತಯಾರಿಸಲು ತುಂಬಾ ಈಸಿ. 

ಹಾಗಿದ್ರೆ ಬನ್ನಿ ಕಾರ್ನ್ ಸಿಲ್ಕ್ ಟಿ ಮಾಡಲು ನಿಮಗೆ ಅಗತ್ಯವಿರೋ ವಸ್ತುಗಳು ಯಾವುವು ಅನ್ನೋದನ್ನು ನೋಡೋಣ. ಬೇಕಾಗಿರೋದು ಈ ಮೂರು ವಸ್ತು ಮಾತ್ರ.
1 ಟೇಬಲ್ ಸ್ಪೂನ್ ಕಾರ್ನ್ ಸಿಲ್ಕ್ 
ಒಂದು ಕಪ್ ನೀರು 
ರುಚಿಗೆ ತಕ್ಕಷ್ಟು ನಿಂಬೆ ಹಣ್ಣು(Lemon)
 

ಮಾಡೋ ವಿಧಾನ

ಕಾರ್ನ್ ಸಿಲ್ಕ್ ಟೀ ಮಾಡಲು, ಮೊದಲನೆಯದಾಗಿ, ನೀರನ್ನು ಕುದಿಯುವಂತೆ ಮಾಡಿ. ಅದಕ್ಕೆ ಒಂದು ಟೀ ಚಮಚ ಒಣ ಮತ್ತು ಕತ್ತರಿಸಿದ ಕಾರ್ನ್ ಸಿಲ್ಕ್ ಅಂದರೆ ಜೋಳದ  ಕೂದಲನ್ನು ಸೇರಿಸಿ. ಇದು ಚೆನ್ನಾಗಿ ಕುದಿಯುವಾಗ, ಗ್ಯಾಸ್  ನಿಧಾನಗೊಳಿಸಿ ಮತ್ತು 15 ರಿಂದ 20 ನಿಮಿಷಗಳ ಕಾಲ ಹಾಗೆ ಬಿಡಿ. 

ಟೀ ಚೆನ್ನಾಗಿ ಕುದಿ ಬಂದ ಬಳಿಕ ಅದಕ್ಕೆ ಅರ್ಧ ನಿಂಬೆಹಣ್ಣನ್ನು ಹಿಂಡಿ. ನೀವು ಬಯಸಿದರೆ, ರುಚಿಗಾಗಿ  ಅರ್ಧ ಟೀಸ್ಪೂನ್ ಜೇನುತುಪ್ಪವನ್ನು(Honey) ಸಹ ಸೇರಿಸಬಹುದು. ಇಲ್ಲದಿದ್ದರೆ, ಅದನ್ನು ಅದೇ ರೀತಿಯಲ್ಲಿ ಫಿಲ್ಟರ್ ಮಾಡಿ ಮತ್ತು ಅದನ್ನು ಸೇವಿಸಿ. ಇದು ಆರೋಗ್ಯಕ್ಕೆ ತುಂಬಾನೆ ಉತ್ತಮವಾಗಿದೆ.

ಕಾರ್ನ್ ಸಿಲ್ಕ್ ಚಹಾದ ಪ್ರಯೋಜನಗಳು

- ಕಾರ್ನ್ ಸಿಲ್ಕ್ ಟೀ ತೂಕ ಇಳಿಸಿಕೊಳ್ಳಲು(Weight loss) ತುಂಬಾ ಸಹಾಯ ಮಾಡುತ್ತೆ. ಇದು ನಮ್ಮ ದೇಹದಿಂದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತೆ ಮತ್ತು ವಿಷವನ್ನು ಹೊರಹಾಕಲು ಸಹಾಯ ಮಾಡುತ್ತೆ. ಇದರಿಂದ ದೇಹವು ಆರೋಗ್ಯಯುತವಾಗಿ ಇರುತ್ತೆ.

- ಮೂತ್ರಪಿಂಡದ ಕಲ್ಲಿನಿಂದ(Kidney stone) ನೀವು ತೊಂದರೆಗೀಡಾಗಿದ್ದರೆ, ಕಾರ್ನ್ ಸಿಲ್ಕ್ ಟೀ ನಿಮಗೆ ತುಂಬಾ ಪ್ರಯೋಜನಕಾರಿ, ಏಕೆಂದರೆ ಇದು ಮೂತ್ರಪಿಂಡದಲ್ಲಿ ಸಂಗ್ರಹವಾಗಿರುವ ವಿಷ ಮತ್ತು ನೈಟ್ರೇಟ್ಗಳನ್ನು ಹೊರಹಾಕಲು ಸಹಾಯ ಮಾಡುತ್ತೆ, ಇದು ಮೂತ್ರಪಿಂಡದ ಕಲ್ಲಿನ ಅಪಾಯವನ್ನು ಕಡಿಮೆ ಮಾಡುತ್ತೆ.

- ರಕ್ತದೊತ್ತಡವನ್ನು(Blood pressure) ಸಮತೋಲನದಲ್ಲಿಡಲು ಕಾರ್ನ್ ಸಿಲ್ಕ್ ಟೀ ಸಹ ಸಹಾಯ ಮಾಡುತ್ತೆ . ಇದಕ್ಕಾಗಿ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ. ರಕ್ತದೊತ್ತಡ ಬ್ಯಾಲೆನ್ಸ್ ಆಗಿದ್ದರೆ, ಹೃದಯದ ಆರೋಗ್ಯವು ಸಹ ಚೆನ್ನಾಗಿರುತ್ತೆ. ಇದರಿಂದ ನೀವು ಸಹ ಸಂಪೂರ್ಣ ಆರೋಗ್ಯ ಹೊಂದಬಹುದು.

- ನೀವು ಮೂತ್ರದ ಸೋಂಕಿನಿಂದ(urine infection) ತೊಂದರೆಗೀಡಾಗಿದ್ದರೆ, ಕಾರ್ನ್ ಸಿಲ್ಕ್ ಟೀಯನ್ನು ಸೇವಿಸಬೇಕು, ಏಕೆಂದರೆ ಇದು ಉರಿಯೂತ ನಿವಾರಕ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ ಮತ್ತು ಸೋಂಕುಗಳನ್ನು ದೂರವಿಡುತ್ತೆ. ಆದುದರಿಂದ ನಿಯಮಿತವಾಗಿ ಕಾರ್ನ್ ಸಿಲ್ಕ್ ಟೀ ಮಾಡಿ ಸೇವಿಸಿ.

- ಕಾರ್ನ್ ಸಿಲ್ಕ್ ಟೀ ಮಧುಮೇಹಿ ರೋಗಿಗಳಿಗೆ ರಾಮಬಾಣ. ಇದು ಅಗತ್ಯ ಮಿನರಲ್ಸ್ ಮತ್ತು ವಿಟಮಿನ್ಸ್ ಹೊಂದಿರುತ್ತೆ, ಇದು ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ನಿರ್ವಹಿಸಿ  ಮಧುಮೇಹವನ್ನು(Diabetes) ನಿಯಂತ್ರಣದಲ್ಲಿಡುತ್ತೆ. ಆದುದರಿಂದ ಇನ್ನೊಂದು ಬಾರಿ ಜೋಳ ಮನೆಗೆ ತಂದ್ರೆ ಕಾರ್ನ್ ಸಿಲ್ಕ್ ನಿಂದ ಇದನ್ನು ಮಾಡಲು ಮರೆಯಬೇಡಿ.
 

click me!