ಕೆಲವೊಮ್ಮೆ ಮನಸ್ಸು ಏನೂ ಕಾರಣ ಇಲ್ಲದೇನೆ ಗೊಂದಲದ ಗೂಡಾಗುತ್ತೆ. ಏನೂ ಇಲ್ಲದೇನೆ ಮನಸ್ಸು ಖಿನ್ನತೆಗೆ ಒಳಗಾಗುತ್ತೆ, ಅಲ್ಲದೆ ಜೋರಾಗಿ ಅತ್ತುಬಿಡಬೇಕು ಎಂದು ಮನಸ್ಸು ಬಾರಿ ಬಾರಿ ಹೇಳುತ್ತೆ.ನಿಮ್ಮ ಜೀವನದಲ್ಲೂ ಇದು ಒಂದಲ್ಲ ಒಂದು ಬಾರಿ ಸಂಭವಿಸಿರಬೇಕು ಅಲ್ವಾ? ಆದರೆ ಇದಕ್ಕೆ ಯಾವುದೇ ಗಂಭೀರ ಕಾರಣ ಇರೋದಿಲ್ಲ. ಇದು ಏಕೆ ಸಂಭವಿಸುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದು ಡೋಪಮೈನ್ ಎಂಬ ಹಾರ್ಮೋನ್ (dopamine hormone) ನಿಂದ ಉಂಟಾಗುತ್ತದೆ.
ಡೋಪಮೈನ್ ಎಂಬುದು ದೇಹದ ಅಡ್ರಿನಲ್ ಗ್ರಂಥಿಯಲ್ಲಿ ಉತ್ಪತ್ತಿಯಾಗುವ ಹಾರ್ಮೋನ್. ಇದು ಒಂದು ನ್ಯೂರೋಟ್ರಾನ್ಸ್ಮಿಟರ್ ಆಗಿದ್ದು, ಇದು ದೇಹ ಮತ್ತು ಮೆದುಳಿನ ವಿವಿಧ ಕ್ರಿಯೆಗಳ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ಡೋಪಮೈನ್‌ನ ಕೆಲವು ಮುಖ್ಯ ಕಾರ್ಯಗಳೆಂದರೆ ಚಲನೆ, ಸ್ಮರಣೆ, ಮನಸ್ಥಿತಿ, ಏಕಾಗ್ರತೆ, ಇತ್ಯಾದಿಗಳಿಗೆ ಕೊಡುಗೆ ನೀಡುವುದು. ದೇಹದಲ್ಲಿ ಸಾಕಷ್ಟು ಮಟ್ಟದ ಡೋಪಮೈನ್ ಹೊಂದಿರುವುದು ದೇಹಕ್ಕೆ ತುಂಬಾ ಅತ್ಯಗತ್ಯ.
ನೀವು ಕೆಲವೊಮ್ಮೆ ತುಂಬಾ ಖುಷಿ ಖುಷಿಯಾಗಿ ಫೀಲ್ ಮಾಡ್ತೀರಿ. ಇದು ಯಾಕೆ ಉಂಟಾಗುತ್ತೆ ಅನ್ನೋದು ಗೊತ್ತಾ? ದೇಹದಿಂದ `ದೊಡ್ಡ ಪ್ರಮಾಣದ ಡೋಪಮೈನ್ ಬಿಡುಗಡೆಯಿಂದ ಇದು ಉಂಟಾಗುತ್ತದೆ. ಇದಲ್ಲದೇ ಖಿನ್ನತೆಗೆ (depression) ಒಳಗಾಗುವುದು ಅಥವಾ ಮನಸ್ಥಿತಿ ಕೆಟ್ಟದಾಗುವುದು ಇವೆಲ್ಲವೂ ಕಡಿಮೆ ಮಟ್ಟದ ಡೋಪಮೈನ್ ಬಿಡುಗಡೆಯಿಂದ ಉಂಟಾಗುತ್ತೆ.
ಡೋಪಮೈನ್ ಮಟ್ಟಗಳು ಸಾಮಾನ್ಯವಾಗಿ ನರವ್ಯೂಹದೊಳಗೆ ಚೆನ್ನಾಗಿ ನಿಯಂತ್ರಿಸಲ್ಪಡುತ್ತವೆ ಆದರೂ, ಅದರ ಮಟ್ಟವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡುವ ಕೆಲವು ವಿಷಯಗಳಿವೆ. ಆದರೆ ಅದರ ಅತಿಯಾದ ಬಿಡುಗಡೆಯು ನಿಮಗೆ ಅನೇಕ ಗಂಭೀರ ಕಾಯಿಲೆಗಳನ್ನು ಉಂಟು ಮಾಡಬಹುದು, ಅವುಗಳ ಬಗ್ಗೆ ಎಚ್ಚರ ಇರಲಿ.
ಡಾರ್ಕ್ ಚಾಕೊಲೇಟ್
ಚಾಕೊಲೇಟ್ ಸಣ್ಣ ಪ್ರಮಾಣದ ಫಿನೈಲ್ಥೈಲಮೈನ್ (PEA) ಅನ್ನು ಹೊಂದಿರುತ್ತದೆ. ಇದು ಡೋಪಮೈನ್ ಬಿಡುಗಡೆ ಮಾಡುವ ಮೂಲಕ ನಮ್ಮ ಮೆದುಳಿನ ಜೀವಕೋಶಗಳನ್ನು ಸಂಕೇತಿಸುತ್ತದೆ. ಡಾರ್ಕ್ ಚಾಕೊಲೇಟ್ (dark chocolate) ತಿಂದ ನಂತರ ಡೋಪಮೈನ್ ಬಿಡುಗಡೆಯಾಗುತ್ತದೆ. ಇದರ ಜೊತೆ ಜೊತೆಗೆ ಮೂಡ್ ಕೂಡ ಚೆನ್ನಾಗಿರುತ್ತೆ.
ಮೂಡ್ ಸರಿ ಮಾಡಲು ನಟ್ಸ್ ಮತ್ತು ಸೀಡ್ಸ್
ನೀವು ಸೇವಿಸುವ ಹೈ ಪ್ರೋಟೀನ್ ತಿಂಡಿ ಡೋಪಮೈನ್ ಜೊತೆ ಕಾರ್ಯನಿರ್ವಹಿಸುವ ಪ್ರಮುಖ ಅಮೈನೋ ಆಸಿಡ್ ಅನ್ನು ಹೊಂದಿರುತ್ತೆ. ಎನ್ಸಿಬಿಐನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನಟ್ಸ್ ಮತ್ತು ಸೀಡ್ಸ್ ಟೈರೋಸಿನ್ ಎಂದು ಕರೆಯಲ್ಪಡುವ ಎಲ್-ಟೈರೋಸಿನ್ ಅನ್ನು ಹೊಂದಿರುತ್ತೆ ಮತ್ತು ಟೈರೋಸಿನ್ ವಿಭಜಿತವಾದಾಗ, ಅದು ಡೋಪಮೈನ್ ಆಗಿ ಪರಿವರ್ತಿಸಲಾಗುತ್ತೆ.
ಕಡಲೆಕಾಯಿ, ಬಾದಾಮಿ, ಕುಂಬಳಕಾಯಿ ಬೀಜಗಳು ಮತ್ತು ಎಳ್ಳು ವಿಶೇಷವಾಗಿ ಟೈರೋಸಿನ್ ನ ಉತ್ತಮ ಮೂಲ. ನೀವು ಮೂಡ್ ಸುಧಾರಿಸುವ, ಸಂತೋಷವನ್ನು ಹೆಚ್ಚಿಸುವ ತಿಂಡಿಯನ್ನು ಹುಡುಕುತ್ತಿದ್ದರೆ ನಟ್ ಬಟರ್ ಮತ್ತು ಸೀಡ್ಸ್ ಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇವಿಸಿ, ಇದರಿಂದ ಮೂಡ್ ಚೆನ್ನಾಗಿರುತ್ತೆ.
ಡೈರಿ ಉತ್ಪನ್ನಗಳು ಡೋಪಮೈನ್ ಅನ್ನು ಬೂಸ್ಟ್ ಮಾಡುತ್ತೆ
ಇವುಗಳಲ್ಲಿ ಚೀಸ್, ಹಾಲು ಮತ್ತು ಮೊಸರಿನಂತಹ ಆಹಾರಗಳು ಸೇರಿವೆ. ಚೀಸ್ ಟೈರಮೈನ್ ಅನ್ನು ಹೊಂದಿರುತ್ತದೆ, ಇದು ಮಾನವ ದೇಹದಲ್ಲಿ ಡೋಪಮೈನ್ ಆಗಿ ಪರಿವರ್ತಿಸಲ್ಪಡುತ್ತದೆ. ಮೊಸರಿನಂತಹ ಪ್ರೋಬಯಾಟಿಕ್‌ಗಳನ್ನು ಹೊಂದಿರುವ ಆಹಾರಗಳು ಡೋಪಮೈನ್ ಮಟ್ಟವನ್ನು ಹೆಚ್ಚಿಸುತ್ತವೆ. ಹಾಗಾಗಿ, ನೀವು ಒತ್ತಡದಲ್ಲಿದ್ದರೆ, ಡೈರಿ ಉತ್ಪನ್ನಗಳು (diary product) ನಿಮಗೆ ಪ್ರಯೋಜನಕಾರಿ.
ಕಾಫಿ ಮೂಡ್ ನ್ನು ತಾಜಾ ಮತ್ತು ಸಂತೋಷವಾಗಿರಿಸುತ್ತದೆ
ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ ಪ್ರಕಾರ ಕಾಫಿಯಲ್ಲಿರುವ ಕೆಫೀನ್ ಮೆದುಳಿನ ಡೋಪಮೈನ್ ಹೆಚ್ಚಿಸುತ್ತೆ. ಮೆದುಳಿನಲ್ಲಿ ಕೆಫೀನ್ ನ ಮುಖ್ಯ ಗುರಿ ಅಡೆನೋಸಿನ್ (ಮೆದುಳಿನ ಚಟುವಟಿಕೆಯನ್ನು ಕಡಿಮೆ ಮಾಡುವ ಮೆದುಳಿನ ರಾಸಾಯನಿಕ ಗ್ರಾಹಕಗಳು. ಇದು ಡೋಪಮೈನ್ ಮಟ್ಟಗಳ ಮೇಲೆ ಪರಿಣಾಮ ಬೀರುತ್ತೆ, ಇದರಿಂದ ಮನಸ್ಸು ತಾಜಾ ಮತ್ತು ಸಂತೋಷವಾಗಿರಲು ಸಾಧ್ಯವಾಗುತ್ತೆ.
ಹಸಿರು ಎಲೆ ತರಕಾರಿಗಳು ಡೋಪಮೈನ್ ಬೂಸ್ಟರ್
ಹಸಿರು ಎಲೆ ತರಕಾರಿಗಳನ್ನು (green vegetables) ವೈಜ್ಞಾನಿಕವಾಗಿ ಕ್ರೂಸಿಫೆರಸ್ ತರಕಾರಿ ಗುಂಪು ಎಂದು ಕರೆಯಲಾಗುತ್ತದೆ, ಇದರಲ್ಲಿ ಲೆಟ್ಯೂಸ್, ಪಾಲಕ್, ಎಲೆಕೋಸು, ಕೇಲ್, ಹೂಕೋಸು, ಬ್ರೊಕೋಲಿ ಮತ್ತು ಇತರ ಅನೇಕ ತರಕಾರಿಗಳು ಸೇರಿವೆ. ಇವು ಸಸ್ಯಾಹಾರಿಗಳಿಗೆ ಮುಖ್ಯ ಡೋಪಮೈನ್ ಬೂಸ್ಟರ್ ಆಗಿ ಕಾರ್ಯನಿರ್ವಹಿಸಬಹುದು.