Okra with rice benefits: ಮಧುಮೇಹ ಮತ್ತು ಅಧಿಕ ತೂಕ ಇರುವವರು ಅನ್ನ ತಿನ್ನಲು ಹೆದರುತ್ತಾರೆ. ಏಕೆಂದರೆ ಅನ್ನದಲ್ಲಿ ಕಾರ್ಬೋಹೈಡ್ರೇಟ್ಸ್ ಹೆಚ್ಚಿರುತ್ತದೆ. ಆದರೆ ಇನ್ಮೇಲೆ ನೀವು ಚಿಂತಿಸಬೇಕಿಲ್ಲ. ನೀವು ಅನ್ನ ತಿಂದರೂ ಸಹ ನಿಮ್ಮ ದೇಹದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಬಹುದು.
ಅನ್ನ ತಿನ್ನುವುದರಿಂದ ದೇಹದಲ್ಲಿ ಕಾರ್ಬೋಹೈಡ್ರೇಟ್ಸ್ ಹೆಚ್ಚಾಗುತ್ತವೆ ಎಂಬುದು ನಿಜ. ಆದರೆ ಕೆಲವು ಸಲಹೆಗಳನ್ನು ಅನುಸರಿಸುವುದರಿಂದ ನೀವು ಹೆಚ್ಚಾಗದಂತೆ ತಡೆಯಬಹುದು. ಅಷ್ಟೇ ಅಲ್ಲ, ದೇಹದಲ್ಲಿ ಸಕ್ಕರೆ ಅಂಶ ಮತ್ತು ತೂಕ ಹೆಚ್ಚಾಗುವುದನ್ನು ನಿಯಂತ್ರಣದಲ್ಲಿಡಬಹುದು. ಇದಕ್ಕಾಗಿ ನೀವು ಹೆಚ್ಚು ಶ್ರಮಿಸಬೇಕಾಗಿಲ್ಲ. ಅಡುಗೆ ಮಾಡುವಾಗ ಅಕ್ಕಿಗೆ ಸ್ವಲ್ಪ ಬೆಂಡೆಕಾಯಿ ಅಥವಾ ಆಲೂಗಡ್ಡೆ ಸೇರಿಸಿ.
26
ಸಕ್ಕರೆ ಮಟ್ಟವು ಹೆಚ್ಚಾಗಲ್ಲ
ಹೌದು. ಅಕ್ಕಿಗೆ ಸ್ವಲ್ಪ ಬೆಂಡೆಕಾಯಿ ಸೇರಿಸಿದಾಗ ವೇಗವಾಗಿ ಬೇಯುವುದಲ್ಲದೆ, ಅದನ್ನು ಔಷಧವಾಗಿಯೂ ಪರಿವರ್ತಿಸುತ್ತದೆ. ಇದನ್ನು ಹೇಳುತ್ತಿರುವುದು ನಾವಲ್ಲ. ಡಾ. ಸಂತೋಷ್ ಜಾಕೋಬ್. ಇವರು ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಇದನ್ನು ಉಲ್ಲೇಖಿಸಿದ್ದು, ಅಕ್ಕಿಯೊಂದಿಗೆ ಬೆಂಡೆಕಾಯಿ ಬೇಯಿಸಿ ತಿನ್ನುವುದರಿಂದ ನಮ್ಮ ದೇಹದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುವುದಿಲ್ಲ ಮತ್ತು ನಿಯಂತ್ರಣದಲ್ಲಿರುತ್ತದೆ ಎಂದು ತಿಳಿಸಿದ್ದಾರೆ.
36
ಅನ್ನದಲ್ಲಿ ಹೀರಲ್ಪಡುತ್ತೆ
ಅಕ್ಕಿ ಬೇಯಿಸುವಾಗ ಬೆಂಡೆಕಾಯಿ ಸೇರಿಸುವುದರಿಂದ ಬೆಂಡೆಕಾಯಿಯಲ್ಲಿರುವ ನೈಸರ್ಗಿಕ ಜೆಲ್ ಪ್ರತಿಯೊಂದು ಧಾನ್ಯವನ್ನು ತಲುಪುತ್ತದೆ. ಇದಲ್ಲದೆ ಬೆಂಡೆಕಾಯಿಯಲ್ಲಿರುವ ಎಲ್ಲಾ ಪೋಷಕಾಂಶಗಳು, ಜೀವಸತ್ವಗಳು ಮತ್ತು ಫೈಬರ್ ಅನ್ನದಲ್ಲಿ ಹೀರಲ್ಪಡುತ್ತದೆ. ಈ ರೀತಿ ಬೇಯಿಸಿದ ಅನ್ನವನ್ನು ತಿನ್ನುವುದರಿಂದ ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ.
ಬೆಂಡೆಕಾಯಿಯಲ್ಲಿರುವ ಫೈಬರ್ ಅಕ್ಕಿಯೊಂದಿಗೆ ಬೆರೆತಾಗ ಜೀರ್ಣಕ್ರಿಯೆಯ ಪ್ರಕ್ರಿಯೆಯು ವೇಗವಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸುತ್ತದೆ. ಈ ಅಕ್ಕಿ ಪ್ರಿಬಯಾಟಿಕ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
56
ಬೆಂಡೆಕಾಯಿಯಲ್ಲಿರುವ ಪೋಷಕಾಂಶಗಳು
ಬೆಂಡೆಕಾಯಿಯಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ. ಬೆಂಡೆಕಾಯಿಯಲ್ಲಿರುವ ಮೆಗ್ನೀಶಿಯಂ, ಫೋಲೇಟ್, ಫೈಬರ್, ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಸಿ ಮತ್ತು ಕೆ1 ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುತ್ತೆ.
66
ತೂಕ ನಿಯಂತ್ರಣ
ಬೆಂಡೆಕಾಯಿಯನ್ನು ಅಕ್ಕಿಯೊಂದಿಗೆ ಬೇಯಿಸಿದಾಗ ಅದರ ಪೋಷಕಾಂಶಗಳು ಅನ್ನದೊಂದಿಗೆ ಸೇರಿಕೊಳ್ಳುತ್ತೆ. ಈ ಅನ್ನವನ್ನು ತಿನ್ನುವುದರಿಂದ ಉತ್ತಮವಾಗಿ ಜೀರ್ಣವಾಗುತ್ತದೆ. ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ತೂಕ ಇಳಿಸಿಕೊಳ್ಳಲು ಅಥವಾ ಅದನ್ನು ನಿಯಂತ್ರಣದಲ್ಲಿಡಲು ಬಯಸುವವರಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.