Akshay Kumar Fitness: ಅಕ್ಷಯ್ ಭಾರತೀಯ ಆಹಾರವನ್ನು ಬಹಳ ಇಷ್ಟಪಡುತ್ತಾರೆ. ಮಸಾಲೆಯುಕ್ತ ಮತ್ತು ಖಾರದ ಆಹಾರ ಎಂಜಾಯ್ ಮಾಡ್ತಾರೆ. ಇತ್ತೀಚೆಗೆ ಅವರು ತಮ್ಮ ಆಹಾರ ಮತ್ತು ಆಹಾರ ಪದ್ಧತಿಯ ಬಗ್ಗೆ ಪ್ರಮುಖ ವಿಚಾರ ವಿಚಾರ ರಿವೀಲ್ ಮಾಡಿದ್ದು, ಫ್ಯಾನ್ಸ್ ಶಾಕ್ ಆಗಿದ್ದಾರೆ.
ಫಿಟ್ನೆಸ್ ಮತ್ತು ಆರೋಗ್ಯಕರ ಜೀವನಶೈಲಿಗೆ ಹೆಸರುವಾಸಿಯಾಗಿರುವವರು ಅಕ್ಷಯ್ ಕುಮಾರ್. ಬಾಡಿ ಲಾಂಗ್ವೇಜ್ ಅಥವಾ ಫಿಟ್ನೆಸ್ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದ ಬಾಲಿವುಡ್ ತಾರೆಯರಲ್ಲಿ ಇವರೂ ಒಬ್ಬರು. ಆದರೆ ಇತ್ತೀಚೆಗೆ, ಅಕ್ಷಯ್ ಕುಮಾರ್ ತಮ್ಮ ಆಹಾರ ಮತ್ತು ಆಹಾರ ಪದ್ಧತಿಯ ಬಗ್ಗೆ ಪ್ರಮುಖ ವಿಚಾರ ವಿಚಾರ ರಿವೀಲ್ ಮಾಡಿದ್ದು, ಫ್ಯಾನ್ಸ್ ಶಾಕ್ ಆಗಿದ್ದಾರೆ.
25
ಸೂರ್ಯಾಸ್ತದ ಮೊದಲು
ಹೌದು, ಅಕ್ಷಯ್ ಚೋಲೆ ಪುರಿ ಮತ್ತು ಜಿಲೇಬಿಯಂತಹ ಎಲ್ಲಾ ಬಗೆಯ ಆಹಾರ ತಿಂತಾರೆ. ಆದರೆ ಒಂದು ನಿಯಮವಿದೆ. ಸಂಜೆ 6 ಗಂಟೆಯ ಮೊದಲು, ಅಂದರೆ ಸೂರ್ಯಾಸ್ತದ ಮೊದಲು ಮಾತ್ರ ತಿನ್ನುತ್ತಾರೆ. ನಂತರ ರಾತ್ರಿಯಿಡೀ ಬೇರೆ ಏನನ್ನೂ ತಿನ್ನಲ್ಲ.
35
ದೇಹಕ್ಕೆ ಸಾಕಷ್ಟು ನಿದ್ರೆ ಮತ್ತು ವಿಶ್ರಾಂತಿ
ಅಕ್ಷಯ್ ಕುಮಾರ್ ಕ್ಯಾಲೋರಿಗಳನ್ನು ಎಣಿಸುವವರೇ ಅಲ್ಲ. ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆಯೇ ಅಥವಾ ಕಡಿಮೆಯಾಗುತ್ತದೆಯೇ ಎಂಬುದನ್ನು ಪರಿಗಣಿಸುವುದಿಲ್ಲ. ಸಮಯಕ್ಕೆ ಸರಿಯಾಗಿ ತಿನ್ನುವುದು ಮತ್ತು ದೇಹಕ್ಕೆ ಸಾಕಷ್ಟು ನಿದ್ರೆ ಮತ್ತು ವಿಶ್ರಾಂತಿ ನೀಡುವುದರಿಂದ ಸ್ವಾಭಾವಿಕವಾಗಿ ಫಿಟ್‌ನೆಸ್ ಉಂಟಾಗುತ್ತದೆ ಎಂದು ಅವರು ನಂಬುತ್ತಾರೆ.
ಅಕ್ಷಯ್ ಭಾರತೀಯ ಆಹಾರವನ್ನು ಬಹಳ ಇಷ್ಟಪಡುತ್ತಾರೆ. ಮಸಾಲೆಯುಕ್ತ ಮತ್ತು ಖಾರದ ಆಹಾರ ಎಂಜಾಯ್ ಮಾಡ್ತಾರೆ. ಈ ಮೊದಲೇ ಹೇಳಿದ ಹಾಗೆ ಚೋಲೆ ಪುರಿ ಮತ್ತು ಜಲೇಬಿಯಂತಹ ಸಾಂಪ್ರದಾಯಿಕ ಭಕ್ಷ್ಯಗಳು ಸಹ ಅವರ ಮೆನುವಿನಲ್ಲಿವೆ. ಆದರೆ ಇವೆಲ್ಲವನ್ನೂ ಸಂಜೆ 6 ಗಂಟೆಯ ಮೊದಲು ತಿನ್ನಬೇಕೆಂದು ಅವರು ಕಟ್ಟುನಿಟ್ಟಾಗಿ ಫಾಲೋ ಮಾಡ್ತಾರೆ.
55
ಇದೇ ನೋಡಿ ಆ ಅಭ್ಯಾಸ
ವಾಸ್ತವವಾಗಿ ಸೂರ್ಯಾಸ್ತದ ನಂತರ ದೇಹದ ಜೀರ್ಣಕ್ರಿಯೆಯ ಶಕ್ತಿ ನಿಧಾನವಾಗುತ್ತದೆ. ಸಂಜೆ ಹೆವಿ ಊಟ ಮಾಡುವುದರಿಂದ ಮರುದಿನ ನಿದ್ರೆ, ಜೀರ್ಣಕ್ರಿಯೆ ಮತ್ತು ಶಕ್ತಿಯ ಮಟ್ಟಗಳ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಅವರು ಸಂಜೆ 6 ಗಂಟೆಯ ನಂತರ ನೀರು ಅಥವಾ ಗಿಡಮೂಲಿಕೆ ಚಹಾದಂತಹ ಲಘು ಪಾನೀಯಗಳನ್ನು ಮಾತ್ರ ಸೇವಿಸಬೇಕೆಂಬ ನಿಯಮವನ್ನು ವರ್ಷಗಳಿಂದ ಪಾಲಿಸುತ್ತಿದ್ದಾರೆ. ಈ ಅಭ್ಯಾಸವು ಅವರ ಆರೋಗ್ಯ ಮತ್ತು ಫಿಟ್‌ನೆಸ್‌ನ ದೊಡ್ಡ ರಹಸ್ಯವಾಗಿದೆ ಎಂದು ತಿಳಿಸಿದ್ದಾರೆ.