Reheating Tea: ಉಳಿದ ಚಹಾ ಬಿಸಾಡಲು ಮನಸ್ಸಾಗದೆ, ಅದನ್ನು ಬಿಸಿ ಮಾಡಿ ಸ್ವಲ್ಪ ಸಮಯದ ನಂತರ ಕುಡಿಯುತ್ತೇವೆ. ಇದೆಲ್ಲಾ ಸಾಮಾನ್ಯವಾಗಿ ಕಾಣಿಸಿದರೂ, ಆದರೆ ಈ ಅಭ್ಯಾಸವು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ?.
ನಮ್ಮ ದಿನ ಆರಂಭವಾಗುವುದೇ ಒಂದು ಕಪ್ ಬಿಸಿ ಚಹಾದೊಂದಿಗೆ ಅಲ್ಲವೇ. ಆದರೆ ಕೆಲವೊಮ್ಮೆ ನಮಗೆ ಚಹಾ ಕುಡಿಯಲೂ ಸಮಯವಿಲ್ಲದೆಯೋ ಅಥವಾ ಹೆಚ್ಚಾಗಿಯೋ ಹಾಗೆಯೇ ಉಳಿದುಬಿಡುತ್ತದೆ. ಉಳಿದ ಚಹಾ ಬಿಸಾಡಲು ಮನಸ್ಸಾಗದೆ, ಅದನ್ನು ಬಿಸಿ ಮಾಡಿ ಸ್ವಲ್ಪ ಸಮಯದ ನಂತರ ಕುಡಿಯುತ್ತೇವೆ. ಇದೆಲ್ಲಾ ಸಾಮಾನ್ಯವಾಗಿ ಕಾಣಿಸಿದರೂ, ಆದರೆ ಈ ಅಭ್ಯಾಸವು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ?.
26
ಹೆಚ್ಚು ಹೊತ್ತು ಇಡ್ತೀರಾ?
ವಿಶೇಷವಾಗಿ ಹಾಲಿನ ಚಹಾ ಹೆಚ್ಚು ಹೊತ್ತು ಉಳಿಸಿಡುವುದು ಅಪಾಯಕಾರಿ. ಬೇಸಿಗೆಯಲ್ಲಿ ಇದು 2 ರಿಂದ 3 ಗಂಟೆಯಲ್ಲಿ ಹಾಳಾಗಬಹುದು. ಕೋಣೆಯ ಉಷ್ಣಾಂಶದಲ್ಲಿ, ಬ್ಯಾಕ್ಟೀರಿಯಾಗಳು ವೇಗವಾಗಿ ಹೆಚ್ಚಾಗುತ್ತವೆ ಮತ್ತು ಚಹಾದ ಪೋಷಕಾಂಶಗಳು ನಾಶವಾಗುತ್ತವೆ. ಅಷ್ಟೇ ಅಲ್ಲ, ಪದೇ ಪದೇ ಬಿಸಿ ಮಾಡುವುದರಿಂದ ಚಹಾದಲ್ಲಿರುವ ಟ್ಯಾನಿನ್‌ಗಳು ಆಮ್ಲೀಯವಾಗಬಹುದು. ಇದು ಅಸಿಡಿಟಿ, ಗ್ಯಾಸ್ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು.
36
ಉತ್ಕರ್ಷಣ ನಿರೋಧಕ ಗುಣ ಕಡಿಮೆಯಾಗ್ತವೆ
ಇದು ಹಾಲಿನ ಟೀ ಕಥೆಯಾದರೆ, ಇನ್ನು ಬ್ಲಾಕ್ ಟೀ ಅಥವಾ ಗ್ರೀನ್ ಟೀ ಸ್ವಲ್ಪ ಹೆಚ್ಚು ಕಾಲ ಉಳಿಯಬಹುದು. ಶೈತ್ಯೀಕರಣ(Refrigeration)ಗೊಳಿಸಿದರೆ 6-8 ಗಂಟೆಗಳ ಕಾಲ ಇರುತ್ತದೆ. ಆದರೆ ನೀವು ಅವುಗಳನ್ನು ಹೆಚ್ಚು ಸಮಯ ಸಂಗ್ರಹಿಸಿದಷ್ಟೂ ಅವುಗಳ ಸುವಾಸನೆ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಕಡಿಮೆಯಾಗುತ್ತವೆ ಎಂಬುದನ್ನು ನೆನಪಿನಲ್ಲಿಡಿ.
*ರುಚಿಯಲ್ಲಿ ಹುಳಿ ಅಥವಾ ಕಹಿ. *ವಿಚಿತ್ರ ವಾಸನೆ ಅಥವಾ ಪದರ ರಚನೆ. *ಬಣ್ಣ ಅಥವಾ ನೊರೆ ಬರುವಿಕೆಯಲ್ಲಿ ಬದಲಾವಣೆ. *ಕುಡಿದ ನಂತರ ಗಂಟಲಿನಲ್ಲಿ ನೋವು ಅಥವಾ ಸುಡುವ ಅನುಭವ. ಮೇಲಿನ ಈ ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ಚಹಾ ಎಸೆಯಿರಿ.
56
ಉಳಿದ ಚಹಾ ಬಿಸಿ ಮಾಡಿದ್ರೆ ಏನಾಗುತ್ತೆ?
ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ: ಅಸಿಡಿಟಿ, ಗ್ಯಾಸ್, ಮಲಬದ್ಧತೆ ಮತ್ತು ಫುಡ್ ಪಾಯಿಸನ್ ಕೂಡ ಸಂಭವಿಸಬಹುದು. ಪೌಷ್ಟಿಕಾಂಶದ ನಷ್ಟ: ಉತ್ಕರ್ಷಣ ನಿರೋಧಕಗಳು ಖಾಲಿಯಾಗುತ್ತವೆ ಮತ್ತು ಪೋಷಕಾಂಶಗಳು ನಾಶವಾಗುತ್ತವೆ. ಕರುಳಿನ ಆರೋಗ್ಯದ ಮೇಲೆ ಪರಿಣಾಮ: ಮತ್ತೆ ಬಿಸಿ ಮಾಡಿದ ಚಹಾ ಕರುಳಿನ ಬ್ಯಾಕ್ಟೀರಿಯಾವನ್ನು ದುರ್ಬಲಗೊಳಿಸುತ್ತದೆ.
66
ಹೇಗೆ ಕುಡಿಯುವುದು ಒಳ್ಳೆಯದು?
*ತಾಜಾ ಚಹಾ ಮಾಡಿ ತಕ್ಷಣ ಕುಡಿಯಿರಿ. *ಏನಾದರೂ ಉಳಿದಿದ್ದರೂ, 1-2 ಗಂಟೆಗಳಲ್ಲಿ ಮುಗಿಸಿ. *ಪದೇ ಪದೇ ಬಿಸಿ ಮಾಡುವುದನ್ನು ತಪ್ಪಿಸಿ. *ಅಗತ್ಯವಿದ್ದರೆ, ನೀವು ಅದನ್ನು ರೆಫ್ರಿಜರೇಟರ್‌ನಲ್ಲಿ ಇಡಬಹುದು, ಆದರೆ 6–8 ಗಂಟೆಗಳಿಗಿಂತ ಹೆಚ್ಚು ಕಾಲ ಇಡಬಾರದು. *ಟೀ ಎಷ್ಟು ಫ್ರೆಶ್‌ನೆಸ್ ನೀಡುತ್ತದೆಯೋ ಅಷ್ಟೇ ಬೇಗ ಹಾಳಾಗುತ್ತದೆ. ಆದ್ದರಿಂದ ಮುಂದಿನ ಬಾರಿ ಉಳಿದ ಚಹಾ ನೋಡಿದಾಗ ಅದು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನ ಒಮ್ಮೆ ಯೋಚಿಸಿ.