ಹಲ್ಲುಜ್ಜಿದ ಮೇಲೆ ಹೀಗೆ ಮಾಡ್ತಿದ್ದೀರಾ? ಹೊಟ್ಟೆಯಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳಿಗೆ ಕಾದಿದೆ ಕಂಟಕ!

Published : Oct 16, 2026, 02:43 PM IST

Gut health bacteria: ದಿನನಿತ್ಯದ ಈ ಸಣ್ಣ ನಿರ್ಲಕ್ಷ್ಯವು ನಮ್ಮ ಆರೋಗ್ಯಕ್ಕೆ ಹೇಗೆ ಕಂಟಕವಾಗಬಹುದು? ಇದನ್ನು ತಡೆಯಲು ಇರುವ ಸರಳ ಪರಿಹಾರವೇನು? ಪೂರ್ಣ ಮಾಹಿತಿ ಇಲ್ಲಿದೆ.

PREV
14
ದೊಡ್ಡ ಆರೋಗ್ಯ ಸಮಸ್ಯೆಗೆ ಕಾರಣ

ದೊಡ್ಡ ಆರೋಗ್ಯ ಸಮಸ್ಯೆಗೆ ಕಾರಣ
ನೀವು ಬೆಳಗ್ಗೆ ಎದ್ದ ತಕ್ಷಣ ಬ್ರಶ್ ಮಾಡಿ, ಬಾಯಿ ಮುಕ್ಕಳಿಸಿ ಹೊರಟುಬಿಡುತ್ತೀರಾ? ಹಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ. ಏಕೆಂದರೆ ದಿನನಿತ್ಯ ನಾವು ಮಾಡುವ ಈ ಸಣ್ಣ ನಿರ್ಲಕ್ಷ್ಯವು ದೊಡ್ಡ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

24
ಇದರಲ್ಲಿ ಏನೆಲ್ಲಾ ಇರುತ್ತೆ ಗೊತ್ತಾ?

ಇದರಲ್ಲಿ ಏನೆಲ್ಲಾ ಇರುತ್ತೆ ಗೊತ್ತಾ?
ನಾವು ಹಲ್ಲುಜ್ಜಲು ಬಳಸುವ ಹೆಚ್ಚಿನ ಟೂತ್‌ಪೇಸ್ಟ್‌ಗಳಲ್ಲಿ ಸೋಡಿಯಂ ಲಾರಿಲ್ ಸಲ್ಫೇಟ್ (Sodium Lauryl Sulfate) ಮತ್ತು ಟೈಟಾನಿಯಂ ಡೈಆಕ್ಸೈಡ್ (Titanium Dioxide) ನಂತಹ ಪ್ರಬಲ ಕೆಮಿಕಲ್ಸ್‌ಗಳನ್ನು ಬಳಸಲಾಗುತ್ತದೆ. ಆಶ್ಚರ್ಯವೆಂದರೆ, ಈ ರಾಸಾಯನಿಕಗಳನ್ನು ನಾವು ಬಟ್ಟೆ ಒಗೆಯಲು ಬಳಸುವ ಡಿಟರ್ಜೆಂಟ್‌ಗಳು ಹಾಗೂ ಕೂದಲು ತೊಳೆಯುವ ಶಾಂಪೂಗಳಲ್ಲಿಯೂ ಕ್ಲೀನಿಂಗ್ ಏಜೆಂಟ್ ಆಗಿ ಬಳಸಲಾಗುತ್ತದೆ.

34
ಜೀರ್ಣಾಂಗ ವ್ಯವಸ್ಥೆ ಮೇಲೆ ದುಷ್ಪರಿಣಾಮ

ಜೀರ್ಣಾಂಗ ವ್ಯವಸ್ಥೆ ಮೇಲೆ ದುಷ್ಪರಿಣಾಮ
ಸಾಮಾನ್ಯವಾಗಿ ಹಲ್ಲುಜ್ಜಿದ ನಂತರ ನೀರಿನಿಂದ ಬಾಯಿ ಮುಕ್ಕಳಿಸಿದರೂ, ಈ ರಾಸಾಯನಿಕಗಳ ಅಂಶಗಳು ನಮ್ಮ ಹಲ್ಲುಗಳು ಮತ್ತು ಒಸಡುಗಳಲ್ಲಿ ಸೂಕ್ಷ್ಮವಾಗಿ ಉಳಿದುಬಿಡುತ್ತವೆ.

ಬಾಯಿಯಲ್ಲಿ ಉಳಿಯುವ ಈ ಕೆಮಿಕಲ್ಸ್‌ಗಳು ಲಾಲಾರಸದೊಂದಿಗೆ ಸೇರಿ ಹೊಟ್ಟೆಯನ್ನು ಪ್ರವೇಶಿಸುತ್ತವೆ.

ಇದರಿಂದ ಹೊಟ್ಟೆಯಲ್ಲಿರುವ, ನಮಗೆ ಜೀರ್ಣಕ್ರಿಯೆಗೆ ಸಹಕಾರಿಯಾಗಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು (Good Bacteria) ನಾಶವಾಗುವ ಅಪಾಯವಿರುತ್ತದೆ.

ಇದು ದೀರ್ಘಾವಧಿಯಲ್ಲಿ ಜೀರ್ಣಾಂಗ ವ್ಯವಸ್ಥೆ ಹಾಗೂ ಒಟ್ಟಾರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು.

44
ತಪ್ಪಿಸಲು ಸರಳ ಪರಿಹಾರವೇನು?

ತಪ್ಪಿಸಲು ಸರಳ ಪರಿಹಾರವೇನು?
ಈ ಸಮಸ್ಯೆಯಿಂದ ಬಚಾವಾಗಲು ವೈದ್ಯರು/ತಜ್ಞರು ಸರಳ ಹಾಗೂ ಪರಿಣಾಮಕಾರಿ ಮಾರ್ಗವನ್ನು ಸೂಚಿಸಿದ್ದಾರೆ..

ಬ್ರಶ್‌ನಿಂದ ಹಲ್ಲುಜ್ಜಿದ ನಂತರ ಹಾಗೂ ನೀರಿನಿಂದ ಬಾಯಿ ಮುಕ್ಕಳಿಸಿದ ಮೇಲೆ, ನಿಮ್ಮ ಶುಭ್ರವಾದ ಬೆರಳಿನಿಂದ (ಕೈಯಿಂದ) ಮತ್ತೊಮ್ಮೆ ಹಲ್ಲುಗಳು ಹಾಗೂ ಒಸಡುಗಳನ್ನು ಚೆನ್ನಾಗಿ ತೇಜಿ (ಉಜ್ಜಿ).

ನಂತರ ಪುನಃ ನೀರಿನಿಂದ ಚೆನ್ನಾಗಿ ಬಾಯಿ ಗುಳುಗುಳು ಮಾಡಿ ಉಗಿಯಿರಿ.

ಹೀಗೆ ಮಾಡುವುದರಿಂದ ಹಲ್ಲು ಮತ್ತು ಒಸಡಿನ ಮೂಲೆಗಳಲ್ಲಿ ಅಡಗಿರುವ ರಾಸಾಯನಿಕಗಳ ಶೇಷ ಸಂಪೂರ್ಣವಾಗಿ ತೊಳೆದುಹೋಗುತ್ತದೆ. ಇದು ನೋಡಲು ಅತ್ಯಂತ ಸಣ್ಣ ಅಭ್ಯಾಸದಂತೆ ಕಂಡರೂ, ನಿಮ್ಮ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮುಖ್ಯವಾದ ಹೆಜ್ಜೆಯಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories