ಹಬ್ಬಗಳು ಬರುತ್ತಿದ್ದಂತೆ ಮನಸಿಗ್ಯಾಕೆ ಇಷ್ಟೊಂದು ಖುಷಿಯಾಗೋದು?ಸೀಕ್ರೆಟ್ ಏನ್ ಗೊತ್ತಾ?

Published : Oct 12, 2026, 04:29 PM IST

Festival Season: ಹಬ್ಬಗಳ ಸೀಸನ್ ಆರಂಭವಾಗುತ್ತಿದ್ದಂತೆ ಮನಸ್ಸಿನಲ್ಲಿ ಸಂತೋಷ ಮತ್ತು ಉತ್ಸಾಹ ಉಂಟಾಗೋದನ್ನು ನೀವು ಗಮನಿಸಿದ್ದೀರಾ? ಯಾಕೆ ಈ ರೀತಿಯಾಗಿ ಖುಷಿಯಾಗೋದು ಎಂದು ನೀವು ಯೋಚನೆ ಮಾಡಿದ್ದೀರಾ? ನಮ್ಮ ಮೆದುಳು, ಭಾವನೆಗಳು ಮತ್ತು ಹಬ್ಬದ ವಾತಾವರಣದ ನಡುವಿನ ಆಸಕ್ತಿದಾಯಕ ಸಂಬಂಧದ ಬಗ್ಗೆ ತಿಳಿಯಿರಿ.

PREV
16
ಹಬ್ಬಗಳ ಸೀಸನ್ ಶುರುವಾಗುತ್ತಿದ್ದಂತೆ ಮನಸ್ಸು ಖುಷಿಯಾಗುವುದೇಕೆ?

ಹಬ್ಬಗಳು ಹತ್ತಿರವಾಗುತ್ತಿದ್ದಂತೆ ಎಲ್ಲರ ಮನಸ್ಸು ಸಂತೋಷ ಮತ್ತು ಉತ್ಸಾಹದಿಂದ ತುಂಬಿಕೊಳ್ಳುತ್ತದೆ. ಆದರೆ, ಹಬ್ಬದ ದಿನಗಳು ಬರುತ್ತಿದ್ದಂತೆ ನಮ್ಮ ಮೆದುಳು ಅಷ್ಟೊಂದು ಖುಷಿಯಾಗುವುದೇಕೆ ಎಂದು ಎಂದಾದರೂ ಯೋಚಿಸಿದ್ದೀರಾ? ನಮ್ಮ ಮೆದುಳು, ಭಾವನೆಗಳು ಮತ್ತು ಸಾಮಾಜಿಕ ಸಂಬಂಧಗಳ ನಡುವೆ ಆಳವಾದ ನಂಟಿದೆ. ಆದರೆ, ನಾವು ಈ ವಿಷಯದ ಬಗ್ಗೆ ಹೆಚ್ಚಾಗಿ ಗಮನ ಹರಿಸುವುದಿಲ್ಲ. ಹಬ್ಬದ ಸೀಸನ್ ಆರಂಭವಾಗುತ್ತಿದ್ದಂತೆ ನಮ್ಮ ಮನಸ್ಸು ಏಕೆ ಸಂತೋಷದಿಂದ ತುಂಬುತ್ತದೆ ವಿವರವಾಗಿ ತಿಳಿಯೋಣ.

26
ಡೋಪಮಿನ್ (Dopamine)

ಹಬ್ಬದ ಸಮಯದಲ್ಲಿ ಶಾಪಿಂಗ್ ಮಾಡುವುದು, ಮನೆಯನ್ನು ಅಲಂಕರಿಸುವುದು, ಉಡುಗೊರೆಗಳನ್ನು ಕೊಟ್ಟು ಪಡೆಯುವುದು ಮತ್ತು ಸಂಭ್ರಮಿಸುವುದು ನಮ್ಮ ಮೆದುಳಿಗೆ ಸಂತೋಷವನ್ನು ನೀಡುತ್ತವೆ. ಈ ಚಟುವಟಿಕೆಗಳು ಮೆದುಳಿನ ರಿವಾರ್ಡ್ ಮೆಕಾನಿಸಂನ್ನು ಆಕ್ಟಿವ್ ಮಾಡುತ್ತದೆ. ಇದರಿಂದ ಡೋಪಮಿನ್ ಬಿಡುಗಡೆಯಾಗುವ ಪ್ರಕ್ರಿಯೆಯಲ್ಲಿ ಬದಲಾವಣೆ ಉಂಟಾಗುತ್ತದೆ. ಡೋಪಮಿನ್ ಮೆದುಳಿನಲ್ಲಿರುವ ಒಂದು ಕೆಮಿಕಲ್ ಮೆಸೆಂಜರ್ ಆಗಿದ್ದು, ಇದು ಪ್ರೇರಣೆ, ನಿರೀಕ್ಷೆ ಮತ್ತು ಸಂತೋಷದ ಅನುಭವಗಳನ್ನು ನೀಡುತ್ತೆ.

36
ಸಾಮಾಜಿಕ ಸಂಪರ್ಕ (Social Connection)

ಹಬ್ಬಗಳೆಂದರೆ ಕುಟುಂಬದವರು, ಸ್ನೇಹಿತರು ಮತ್ತು ಆತ್ಮೀಯರನ್ನು ಭೇಟಿಯಾಗುವ ವಿಶೇಷ ಸಮಯ. ಅವರಿಂದ ಪ್ರೀತಿ, ಬೆಂಬಲ ಮತ್ತು ಮೆಚ್ಚುಗೆಯನ್ನು ಪಡೆಯುವ ನಿರೀಕ್ಷೆಯೂ ನಮ್ಮಲ್ಲಿರುತ್ತದೆ. ಇಂತಹ ಸಂಬಂಧಗಳು ಒತ್ತಡವನ್ನು ನಿವಾರಿಸಿ ಸಂತೋಷವಾಗಿರಲು ಸಹಾಯ ಮಾಡುತ್ತವೆ ಮತ್ತು ಭಾವನಾತ್ಮಕ ಆರೋಗ್ಯವನ್ನು ಸುಧಾರಿಸಬಹುದು.

46
ಭಾವನಾತ್ಮಕ ನೆನಪುಗಳು (Emotional Memory)

ಹಬ್ಬದ ಹಾಡುಗಳು, ಸುತ್ತಮುತ್ತಲಿನ ಸುವಾಸನೆ, ಅಲಂಕಾರಗಳು, ಸಾಂಪ್ರದಾಯಿಕ ಅಡುಗೆಗಳು ಮತ್ತು ಬಾಲ್ಯದ ನೆನಪುಗಳಿಗೆ ಸಂಬಂಧಿಸಿದ ಇತರ ಸಂಗತಿಗಳು ಹಬ್ಬದ ಸಮಯದಲ್ಲಿ ಮತ್ತೆ ನೆನಪಾಗುತ್ತವೆ. ಇವು ನಮ್ಮ ಹಳೆಯ ಸಂತೋಷದ ಕ್ಷಣಗಳನ್ನು ನೆನಪಿಸಿ, ಮನಸ್ಸಿನಲ್ಲಿ ಆಹ್ಲಾದಕರ ಭಾವನೆಗಳನ್ನು ಮೂಡಿಸುತ್ತದೆ.

56
ದಿನನಿತ್ಯದ ಕೆಲಸಕ್ಕೆ ವಿರಾಮ (Break from Routine)

ಹಬ್ಬಗಳ ಸೀಸನ್ ನಮ್ಮ ದೈನಂದಿನ ಏಕತಾನತೆಯಿಂದ ಸ್ವಲ್ಪ ವಿರಾಮ ಪಡೆಯಲು ಅವಕಾಶ ನೀಡುತ್ತದೆ. ಇದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಶ್ರಾಂತಿ ಪಡೆಯಲು ಸಾಧ್ಯವಾಗಬಹುದು. ಈ ಬದಲಾವಣೆ ಕೆಲವು ಸಮಯಕ್ಕೆ ಆಗಿದ್ದರೂ ಸಹ, ಒತ್ತಡವನ್ನು ಕಡಿಮೆ ಮಾಡಲು ಮತ್ತು ಮನಸ್ಸನ್ನು ಉಲ್ಲಾಸದಿಂದ ಇರಿಸಲು ಇದು ಸಹಾಯ ಮಾಡುತ್ತದೆ.

66
ಎಲ್ಲರಿಗೂ ಹಬ್ಬದ ಖುಷಿ ಒಂದೇ ರೀತಿ ಇರುವುದಿಲ್ಲ

ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ಹಬ್ಬದ ಸಮಯದಲ್ಲಿ ಎಲ್ಲರೂ ಒಂದೇ ರೀತಿಯ ಸಂತೋಷವನ್ನು ಅನುಭವಿಸುವುದಿಲ್ಲ. ಪ್ರತಿಯೊಬ್ಬರ ಭಾವನೆಗಳೂ ವಿಭಿನ್ನವಾಗಿರುತ್ತವೆ. ಆರ್ಥಿಕ ಸಂಕಷ್ಟ, ಒಂಟಿತನ ಮತ್ತು ಹೆಚ್ಚಿನ ನಿರೀಕ್ಷೆಗಳು ಕೆಲವೊಮ್ಮೆ ಹಬ್ಬದ ಸುಂದರ ಕ್ಷಣಗಳನ್ನು ಆನಂದಿಸಲು ಅಡ್ಡಿಯಾಗಬಹುದು. ಇಂತಹ ಸಂದರ್ಭಗಳಲ್ಲಿ ಸಂತೋಷದ ಬದಲಿಗೆ ಒತ್ತಡ, ದುಃಖ ಅಥವಾ ಬೇಸರ ಉಂಟಾಗಬಹುದು.ಅದೇನೇ ಇರಲಿ ಪ್ರತಿಯೊಬ್ಬರು ತಮ್ಮ ಭಾವನಾತ್ಮಕ ಆರೋಗ್ಯಕ್ಕೆ ಹೆಚ್ಚು ಬೆಲೆ ಕೊಡಬೇಕು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories