How to keep your kidneys healthy naturally: ಇತ್ತೀಚೆಗೆ ಚಿಕ್ಕ ವಯಸ್ಸಿನವರಲ್ಲೂ ಕಿಡ್ನಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ನಮ್ಮ ಕೆಟ್ಟ ಆಹಾರ ಪದ್ಧತಿ ಮತ್ತು ದೈನಂದಿನ ಅಭ್ಯಾಸಗಳೇ ಇದಕ್ಕೆ ಮುಖ್ಯ ಕಾರಣ. ಕಿಡ್ನಿ ರೋಗಗಳನ್ನು ದೂರವಿಡಲು ನಾವು ಪಾಲಿಸಬೇಕಾದ ಪ್ರಮುಖ ವಿಷಯಗಳಿವು.
ಹಣ್ಣು, ತರಕಾರಿ ಮತ್ತು ಧಾನ್ಯಗಳ ಸೇವನೆ ಹೆಚ್ಚು ಸಂಸ್ಕರಿಸಿದ ಮತ್ತು ಪ್ರೊಟೀನ್‌ಯುಕ್ತ ಆಹಾರ ಸೇವನೆ ಕಿಡ್ನಿಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದು. ನಿಮ್ಮ ಡಯಟ್‌ನಲ್ಲಿ ಹಣ್ಣು, ತರಕಾರಿ ಮತ್ತು ಧಾನ್ಯಗಳನ್ನು ಸೇರಿಸಿಕೊಳ್ಳಿ.
26
ಸಪ್ಲಿಮೆಂಟ್ ಬಳಕೆ ಕಡಿಮೆ ಮಾಡಿ
ಸಪ್ಲಿಮೆಂಟ್ ಬಳಕೆ ಕಡಿಮೆ ಮಾಡಿ ಫಿಟ್ನೆಸ್ ಕಾಪಾಡಿಕೊಳ್ಳಲು ಕೆಲವರು ಸಪ್ಲಿಮೆಂಟ್‌ಗಳನ್ನು ಬಳಸುತ್ತಾರೆ. ಆದರೆ, ಸಪ್ಲಿಮೆಂಟ್‌ಗಳ ಅತಿಯಾದ ಬಳಕೆಯು ಕಿಡ್ನಿಗಳಿಗೆ ಹಾನಿ ಉಂಟುಮಾಡಬಹುದು.
36
ಚೆನ್ನಾಗಿ ನೀರು ಕುಡಿಯಿರಿ
ಚೆನ್ನಾಗಿ ನೀರು ಕುಡಿಯಿರಿ ದೇಹದಲ್ಲಿ ಸಂಗ್ರಹವಾದ ಕಲ್ಮಶಗಳನ್ನು ಹೊರಹಾಕಲು ಸಾಕಷ್ಟು ನೀರು ಕುಡಿಯುವುದು ಅಗತ್ಯ. ಆದ್ದರಿಂದ, ಆಗಾಗ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
ವೈದ್ಯರನ್ನು ಸಂಪರ್ಕಿಸಿ ರೋಗದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸಾಮಾನ್ಯವಾಗಿ, ರೋಗವು ಉಲ್ಬಣಗೊಂಡಾಗ ಮಾತ್ರ ನಾವು ಗಮನ ಹರಿಸುತ್ತೇವೆ, ಇದು ತಪ್ಪು.
56
ನೋವು ಹೆಚ್ಚಿದ್ದರೆ ಮಾತ್ರ ಔಷಧಿ
ನೋವು ಹೆಚ್ಚಿದ್ದರೆ ಮಾತ್ರ ಔಷಧಿ ನೋವು ನಿವಾರಕಗಳನ್ನು ಅತಿಯಾಗಿ ಸೇವಿಸುವುದರಿಂದ ಕಿಡ್ನಿಗಳು ಹಾನಿಗೊಳಗಾಗುತ್ತವೆ. ನೋವು ಬಂದಾಗ ವೈದ್ಯರನ್ನು ಸಂಪರ್ಕಿಸಿದ ನಂತರವೇ ಔಷಧಿಗಳನ್ನು ತೆಗೆದುಕೊಳ್ಳಿ.
66
ಚೆನ್ನಾಗಿ ನಿದ್ರೆ ಮಾಡಿ
ಚೆನ್ನಾಗಿ ನಿದ್ರೆ ಮಾಡಿ ಸರಿಯಾಗಿ ನಿದ್ದೆ ಮಾಡದಿರುವುದು ಮತ್ತು ವ್ಯಾಯಾಮದ ಕೊರತೆಯು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.