ವಂದೇ ಭಾರತ್​ ಹೊಸ ಇತಿಹಾಸ: ಜೀವಂತ ಹೃದಯ ಸಾಗಾಟ- 2 ಗಂಟೆಯಲ್ಲಿ 250 ಕಿ.ಮೀ ವೇಗ

Published : Aug 02, 2026, 07:56 PM IST

ಭಾರತೀಯ ರೈಲ್ವೆ ಇತಿಹಾಸದಲ್ಲಿ ಮೊದಲ ಬಾರಿಗೆ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಜೀವಂತ ಹೃದಯವನ್ನು ಸೂರತ್‌ನಿಂದ ಅಹಮದಾಬಾದ್‌ಗೆ ಯಶಸ್ವಿಯಾಗಿ ಸಾಗಿಸಲಾಗಿದೆ. ಈ ಕ್ಷಿಪ್ರ ಸಾರಿಗೆ ಮತ್ತು ಗ್ರೀನ್ ಕಾರಿಡಾರ್ ವ್ಯವಸ್ಥೆಯಿಂದಾಗಿ, ಗಂಭೀರ ಹೃದಯ ರೋಗಿಯೊಬ್ಬರಿಗೆ   ಹೊಸ ಜೀವನ ನೀಡಲು ಸಾಧ್ಯವಾಯಿತು.

PREV
16
ವಂದೇ ಭಾರತ್​ ಹೊಸ ಇತಿಹಾಸ

ವಂದೇ ಭಾರತ್​ ರೈಲಿನಲ್ಲಿ ಹೊಸ ಇತಿಹಾಸ ದಾಖಲಾಗಿದೆ. ಇದೇ ಮೊದಲ ಬಾರಿಗೆ ಜೀವಂತ ಹೃದಯವನ್ನು ಈ ರೈಲಿನಲ್ಲಿ ಸಾಗಿಸಲಾಗಿದೆ. ಈ ಮೂಲಕ ಭಾರತೀಯ ರೈಲ್ವೆ ವೈದ್ಯಕೀಯ ತುರ್ತು ಸೇವೆಯಲ್ಲಿ ಹೊಸ ದಾಖಲೆ ಬರೆದಿದೆ. ಗುಜರಾತ್‌ನ ಸೂರತ್‌ನಿಂದ ಅಹಮದಾಬಾದ್‌ಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ಸುಮಾರು 250 ಕಿ.ಮೀ. ದೂರ ಅತ್ಯಂತ ವೇಗವಾಗಿ ಸಾಗಿಸಿ, ಗಂಭೀರ ಹೃದಯ ರೋಗಿಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ.

26
ಜೀವ ಉಳಿಸಿದ ರೈಲು

ಈ ಘಟನೆ ಭಾರತೀಯ ರೈಲ್ವೆ ಕೇವಲ ಪ್ರಯಾಣಿಕರು ಮತ್ತು ಸರಕು ಸಾಗಣೆಗೆ ಮಾತ್ರ ಸೀಮಿತವಾಗಿಲ್ಲ, ಅಗತ್ಯದ ಸಂದರ್ಭದಲ್ಲಿ ಜೀವ ಉಳಿಸುವ ಆರೋಗ್ಯ ಸೇವೆಗಳಲ್ಲಿಯೂ ಪ್ರಮುಖ ಪಾತ್ರ ವಹಿಸಬಲ್ಲದು ಎಂಬುದನ್ನು ಸಾಬೀತುಪಡಿಸಿದೆ.

36
ಗ್ರೀನ್ ಕಾರಿಡಾರ್

ಅಹಮದಾಬಾದ್ ರೈಲ್ವೆ ನಿಲ್ದಾಣಕ್ಕೆ ರೈಲು ತಲುಪಿದ ನಂತರ RPF ಮತ್ತು ಗುಜರಾತ್ ಪೊಲೀಸ್ ಪ್ಲಾಟ್‌ಫಾರ್ಮ್ ಸಂಖ್ಯೆ 1 ರಿಂದ ಯು.ಎನ್. ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಅಂಡ್ ರಿಸರ್ಚ್ ಸೆಂಟರ್​ವರೆಗೆ ಗ್ರೀನ್ ಕಾರಿಡಾರ್ ನಿರ್ಮಿಸಿದರು.

46
ಹೊಸ ಜೀವನ

ಈ ಮೀಸಲಾದ ಮಾರ್ಗದ ಸಹಾಯದಿಂದ ಹೃದಯವನ್ನು ವೇಗವಾಗಿ ಆಸ್ಪತ್ರೆಗೆ ತಲುಪಿಸಲಾಯಿತು. ಇದರಿಂದ ನಿಗದಿತ ಸಮಯದಲ್ಲಿ ಕಸಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಾಧ್ಯವಾಯಿತು. ಈ ಸಮಯದ ಸೂಕ್ಷ್ಮ ಕಾರ್ಯಾಚರಣೆಯಲ್ಲಿ ರೈಲ್ವೆ ರಕ್ಷಣಾ ಪಡೆ, ಗುಜರಾತ್ ಪೊಲೀಸ್, ಭಾರತೀಯ ರೈಲ್ವೆ ಹಾಗೂ ವೈದ್ಯಕೀಯ ತಂಡಗಳು ಒಟ್ಟಾಗಿ ಇದನ್ನು ಯಶಸ್ವಿ ಮಾಡಿದೆ. ಇದರಿಂದ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗೆ ಹೊಸ ಜೀವನ ದೊರೆತಿದೆ.

56
ಅಹಮದಾಬಾದ್‌ಗೆ ತಲುಪಿದ ಹೃದಯ

ಸೂರತ್‌ನಿಂದ ಹೊರಟ ಹೃದಯವನ್ನು 20901 ಮುಂಬೈ ಸೆಂಟ್ರಲ್ ಗಾಂಧಿ ನಗರ ಕ್ಯಾಪಿಟಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ಮೂಲಕ ಅಹಮದಾಬಾದ್‌ಗೆ ತರಲಾಯಿತು. ಕೇವಲ 2 ಗಂಟೆಯಲ್ಲಿ ಹೃದಯ ರವಾನೆಯಾಗಿದೆ. ಇದರಿಂದಾಗಿ ಹೃದಯವನ್ನು ಯಶಸ್ವಿ ಕಸಿ ಮಾಡಲು ಅಗತ್ಯವಿರುವ ನಿಗದಿತ ಸಮಯದೊಳಗೆ ತಲುಪಿಸಲು ಸಾಧ್ಯವಾಯಿತು.

66
77 ಯಶಸ್ವಿ ಹೃದಯ ಕಸಿ ಚಿಕಿತ್ಸೆ

ಯುಎನ್ ಮೆಹತಾ ಇನ್‌ಸ್ಟಿಟ್ಯೂಟ್‌ನಲ್ಲಿ ಇದುವರೆಗೆ 77 ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆಗಳು ನಡೆದಿದ್ದು, ಈ ಸಾಧನೆ ಆರೋಗ್ಯ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲಾಗಿದೆ ಎಂದು ಹೇಳಿದರು. ಅಹಮದಾಬಾದ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ವೇದ್ ಪ್ರಕಾಶ್ ಅವರ ಪ್ರಕಾರ, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವೇಗ, ಸಮಯಪಾಲನೆ ಮತ್ತು ವಿಶ್ವಾಸಾರ್ಹತೆಯೇ ಈ ಜೀವ ರಕ್ಷಕ ಕಾರ್ಯಾಚರಣೆಯ ಯಶಸ್ಸಿಗೆ ಪ್ರಮುಖ ಕಾರಣ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories