ತಂದೂರಿ ಆಲೂ ತಿಂದು ನೋಡಿ:ಚಿಕನ್, ಮಟನ್ ಎಲ್ಲಾ ಮರೆತು ಬಿಡ್ತೀರಾ

First Published | Oct 11, 2021, 11:43 AM IST

ಆಲೂಗಡ್ಡೆ (Potato) ನಮ್ಮ ಅಡುಗೆಮನೆಯಲ್ಲಿ ಒಂದು ಸೂಪರ್ ತರಕಾರಿಯಾಗಿದೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ, ಎಲ್ಲರಿಗೂ ಆಲೂಗಡ್ಡೆ ತುಂಬಾನೆ ಇಷ್ಟವಾಗಿರುತ್ತೆ. ಅದರಿಂದ ತಯಾರಿಸಿದ ಪಕೋಡ, ಪರೋಟ ಅಥವಾ ಸಾರು, ಸಬ್ಜಿ ಎಲ್ಲರೂ ಇಷ್ಟಪಡುತ್ತಾರೆ. ಪಾರ್ಟಿಗೆ ಬಂದಾಗಲೆಲ್ಲಾ, ನಾವು ಚಿಕನ್ , ಮಟನ್ ,ಅಥವಾ ನಮ್ಮ ಅತಿಥಿಗೆ ಸಾಧ್ಯವಾದಷ್ಟು ಚೀಸ್ ನಂತಹ ತಂದೂರಿ ಭಕ್ಷ್ಯಗಳನ್ನು ಬಡಿಸುತ್ತೇವೆ, ಆದರೆ ಇಂದು  ಚಿಕನ್ ಮಟನ್ ಮತ್ತು ಚೀಸ್ ಅನ್ನು ವಿಫಲಗೊಳಿಸುವ ಭಕ್ಷ್ಯವನ್ನು ಹೇಗೆ ತಯಾರಿಸೋದು ಹೇಳುತ್ತೇವೆ. 

ಹೌದು ಇಂದು  ನಿಮಗಾಗಿ ತಂದೂರಿ ಆಲೂಗಡ್ಡೆ (Tandoori Aloo) ಹೇಗೆ ಮಾಡೋದು ತಿಳಿಸುತ್ತೇವೆ. ಅದನ್ನು ತ್ವರಿತವಾಗಿ ಮಾಡಬಹುದು ಮತ್ತು ಇದು ಎಷ್ಟು ಅದ್ಭುತ ರುಚಿಯನ್ನು ಹೊಂದಿರುತ್ತದೆ ಎಂದರೆ ಪಾರ್ಟಿಯಲ್ಲಿರುವ ಜನರು ಅದನ್ನು ಕೇಳಿ ಕೇಳೆ ತಿನ್ನೋದು ಖಂಡಿತಾ. 

ತಂದೂರಿ ಆಲೂಗಡ್ಡೆತಯಾರಿಸಲು ಏನೇನು ಬೇಕು? 
10-15 ಸಣ್ಣ ಗಾತ್ರದ ಆಲೂಗಡ್ಡೆ (Baby potato)
2 ಟೀ ಚಮಚ ಬೆಣ್ಣೆ
2 ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿ
1 ಟೀ ಚಮಚ ಶುಂಠಿ
6  ಬೆಳ್ಳುಳ್ಳಿ
5 ಹಸಿ ಮೆಣಸಿನಕಾಯಿ
1/2 ಕಪ್ ಮೊಸರು
ರುಚಿಗೆ ಉಪ್ಪು
1 ಟೀ ಚಮಚ ಮೆಣಸು
1 ಟೀ ಚಮಚ ಹುರಿದ ಜೀರಿಗೆ ಪುಡಿ

Tap to resize

ತಂದೂರಿ ಆಲೂ (Potato)  ತಯಾರಿಸಲು ಮೊದಲು ಆಲೂಗಡ್ಡೆಯನ್ನು ಚೆನ್ನಾಗಿ ತೊಳೆಯಿರಿ. ಆಲೂಗಡ್ಡೆ ಸಿಪ್ಪೆ ತೆಳುವಾಗಿದ್ದರೆ ಸಿಪ್ಪೆ ತೆಗೆಯದೆ ತಯಾರಿಸಬಹುದು. ಇಲ್ಲದಿದ್ದರೆ ಅಂದರೆ ಆಲೂಗೆಡ್ಡೆ ಸಿಪ್ಪೆ ತುಂಬಾನೆ ದಪ್ಪ ಇದ್ದರೆ ಮೊದಲಿಗೆ ಸಿಪ್ಪೆ ತೆಗೆದು ನೀರಿನಲ್ಲಿ ಹಾಕಿ.

ನಂತರ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನಕಾಯಿಯನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಈ ಪೇಸ್ಟ್ ಅನ್ನು ತಾಜಾ ಮೊಸರಿನಲ್ಲಿ ಬೆರೆಸಿ. (ತಂದೂರಿ ಮ್ಯಾರಿನೇಷನ್ (marination) ಮಾಡಲು ನಮಗೆ ದಪ್ಪ ಮೊಸರು ಬೇಕು ಎಂಬುದನ್ನು ನೆನಪಿಡಿ. ಇದಕ್ಕಾಗಿ ಮೊಸರನ್ನು ಬಟ್ಟೆಯಲ್ಲಿ ಕಟ್ಟಿ ಸ್ವಲ್ಪ ಕಾಲ ನೇತು ಹಾಕಿ. ಇದರಿಂದ ಮೊಸರಿನಿಂದ ಬರುವ ನೀರೆಲ್ಲಾ ಹೊರಹೋಗುತ್ತದೆ. )

ಈಗ ನಾನ್ ಸ್ಟಿಕ್ ಪ್ಯಾನ್ ಗೆ (non stick pan)ಸ್ವಲ್ಪ ಬೆಣ್ಣೆಯನ್ನು ಸೇರಿಸಿ ಮತ್ತು ಇಡೀ ಆಲೂಗಡ್ಡೆಯನ್ನು ಮಧ್ಯಮ ಉರಿಯಲ್ಲಿ ಚಿನ್ನದ ಕಂದು ಬಣ್ಣ (golden brown color) ಬರುವವರೆಗೆ ಹುರಿಯಿರಿ ಮತ್ತು ಅದನ್ನು ಟಿಶ್ಯೂ ಪೇಪರ್ ನಲ್ಲಿ ಹಾಕಿ. ಇದರಿಂದ ಎಣ್ಣೆ ಅಂಶವನ್ನು ಹೀರಿಕೊಳ್ಳುತ್ತದೆ. 

ಸಿದ್ಧಪಡಿಸಿದ ಮ್ಯಾರಿನೇಟ್ ಗೆ ಉಪ್ಪು ಮತ್ತು ಮೆಣಸು ಸೇರಿಸಿ ಮತ್ತು ನಂತರ ಫ್ರೈ ಮಾಡಿದ ಆಲೂಗಡ್ಡೆಯನ್ನು (fried potato)  ಅದಕ್ಕೆ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಮಿಶ್ರಣವನ್ನು ಮ್ಯಾರಿನೇಟ್ (marinate) ಮಾಡಲು 10 ರಿಂದ 20 ನಿಮಿಷಗಳ ಕಾಲ ಇರಿಸಿ.

ತಂದೂರಿ ಮಾಡುವ ಗ್ರಿಲ್ ಇಲ್ಲದೇ ಇದ್ದರೆ, ಈಗ   ಗ್ಯಾಸ್ ಸ್ಟೌ ಮೇಲೆ ಮೆಶ್  ಅನ್ನು ಹಾಕಬೇಕು ಮತ್ತು ಆಲೂಗಡ್ಡೆಯನ್ನು ಅದರ ಮೇಲೆ ಮಧ್ಯಮ ಶಾಖದ ಮೇಲೆ ಬೇಯಿಸಬಹುದು ಅಥವಾ ಮೈಕ್ರೋವೇವ್ ನಲ್ಲಿ  (microwave) 10-15 ನಿಮಿಷಗಳ ಕಾಲ ಹುರಿಯಬಹುದು.

ತಂದೂರಿ ಆಲೂಗಡ್ಡೆ ಸಿದ್ಧವಾಗಿದೆ, ಹುರಿದ ಜೀರಿಗೆ ಪುಡಿಯನ್ನು ಸಿಂಪಡಿಸಿ, ಅದನ್ನು ಬಡಿಸುವ ಮೊದಲು ಅದರ ಮೇಲೆ ಸ್ವಲ್ಪ ಚಾಟ್ ಮಸಾಲಾ ವನ್ನು ಸಿಂಪಡಿಸಿ ಮತ್ತು ಹಸಿರು ಚಟ್ನಿಯೊಂದಿಗೆ (green chutney) ಅತಿಥಿಗೆ ಬಿಸಿಯಾಗಿ ಸರ್ವ್ ಮಾಡಿ.

Latest Videos

click me!