ಇದು ಇಡ್ಲಿ ಕ್ಯಾಂಡಿ..! ಫೋಟೋ ಶೇರ್ ಮಾಡಿದ ಆನಂದ್ ಮಹೀಂದ್ರ

First Published Oct 1, 2021, 2:39 PM IST
  • ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಸ್ಪೆಷಲ್ ಇಡ್ಲಿ
  • ತಿನ್ನೋಕು ಸುಲಭ, ನೋಡೋಕೆ ಸೂಪರ್

ಸೌತ್ ಇಂಡಿಯಾದಲ್ಲಿ ಉಪಹಾರದಲ್ಲಿ ಇಡ್ಲಿ ಇಲ್ಲಾಂದ್ರೆ ಕೇಳಿ.. ಎಲ್ಲರ ಮೊದಲ ಆಯ್ಕೆ ಇಡ್ಲಿ. ನೋಡೋಕೆ ಬೆಳ್ಳಗೆ, ಸಾಫ್ಟ್ ಆಗಿ, ಘಮ ಘಮಿಸೋ ಇಡ್ಲಿ ಉಪಹಾರಕ್ಕೆ ಸಿಕ್ಕಿತೆಂದರೆ ದಿನಪೂರ್ತಿ ಉಲ್ಲಾಸ. ಸೌತ್‌ನ ಫೇಮಸ್ ಬ್ರೇಕ್‌ಫಾಸ್ಟ್ ಇದು

ಬೆಂಗಳೂರು ಎಲ್ಲರಲ್ಲೂ ಹೊಸತನ ಹುಡುಕೋದಕ್ಕೆ ಫೇಮಸ್. ಆಹಾರ, ಬಟ್ಟೆ, ಅಡುಗೆ, ಚಾಟ್ಸ್ ಹೀಗೆ ಎಲ್ಲದರಲ್ಲೂ ಹೊಸತನ ಬೇಕು. ಕಾರಣ ಇಲ್ಲಿ ಪ್ರತಿದಿನ ಹೊಸ ಜನ ಬರುತ್ತಿರುತ್ತಾರೆ.

ಆಕಾರದಿಂದ ತೊಡಗಿ ಫ್ಲೇವರ್ ತನಕ ಎಂಥೆಂಥಾ ಇಡ್ಲಿ ಬೇಕು ಹೇಳಿ.. ದೊಡ್ಡ ಲಿಸ್ಟ್ ಸಿಗುತ್ತೆ ಸಿಲಿಕಾನ್ ಸಿಟಿಯಲ್ಲಿ. ರವೆ ಇಡ್ಲಿ, ತಟ್ಟೆ ಇಡ್ಲಿ, ಮಸಾಲೆ ಇಡ್ಲಿ ಹೀಗೆ ಹತ್ತು ಹಲವು ಬಗೆ

ಈಗ ಬೆಂಗಳೂರಿನ ಕ್ಯಾಂಡಿ ಇಡ್ಲಿಯೊಂದು ರಾತ್ರೋ ರಾತ್ರಿ ವೈರಲ್ ಆಗಿದೆ. ಅಂದ ಚಂದದ ಸಾಫ್ಟ್ ಇಡ್ಕಿಯ ರೂಪ ಬದಲಾವಣೆ ನೆಟ್ಟಿಗರ ಮನಸು ಗೆದ್ದು ಬಿಟ್ಟಿದೆ

ಐಸ್ ಕ್ಯಾಂಡಿ ಬರುವಂತೆ ಸ್ಟಿಕ್‌ನಲ್ಲಿ ಇಡ್ಲಿ ಎಟ್ಯಾಚ್ ಆಗಿದ್ದು ಸಾಂಬಾರು, ಚಟ್ನಿಯಲ್ಲಿ ಡಿಪ್ ಮಾಡಿ ಆರಾಮಕ್ಕೆ ತಿನ್ನಬಹುದು. ಸ್ಟಿಕ್ ಇರೋದ್ರಿಂದ ಸ್ಪೂನ್ ಅಗತ್ಯವೂ ಇಲ್ಲ

ಆನಂದ್ ಮಹೀಂದ್ರಾ ಹೊಸ ಬಗೆಯ ಇಡ್ಲಿಯ ಫೋಟೋ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಭಾರತದ ನಾವೀನ್ಯತೆಯ ರಾಜಧಾನಿಯಾದ ಬೆಂಗಳೂರು ತನ್ನ ಕ್ರಿಯೇಟಿವಿಟಿಯನ್ನು ಅನಿರೀಕ್ಷಿತ ವಿಚಾರಗಳಲ್ಲೂ ತೋರಿಸೋದನ್ನು ತಡೆಯಲು ಸಾಧ್ಯವಿಲ್ಲ. ಕಡ್ಡಿಯ ಮೇಲೆ ಇಡ್ಲಿ, ಇದರ ಪರವಾಗಿರುವವರು, ವಿರೋಧಿಸುವವರು ?? ಯಾರು ಎಂದು ಅವರು ಕ್ಯಾಪ್ಶನ್ ಕೊಟ್ಟಿದ್ದಾರೆ.

ಅವನು ಬರೆದ. ಚಿತ್ರಕ್ಕೆ ಪ್ರತಿಕ್ರಿಯಿಸಿ, ಟ್ವಿಟ್ಟರ್ ಬಳಕೆದಾರರು, "ಬರಿ ಕೈಗಳಿಂದ ಇಡ್ಲಿ ತಿನ್ನುವುದು ನಿಜವಾದ ಸಂಪ್ರದಾಯ," ಮತ್ತು "ನಾವೀನ್ಯತೆ ಯಾವಾಗಲೂ ಸ್ವಾಗತಾರ್ಹ" ಎಂದು ಬರೆದಿದ್ದಾರೆ.

ಇದಕ್ಕೆ ಬಹಳಷ್ಟು ಜನ ಕಮೆಂಟ್ ಮಾಡಿದ್ದು, ಸೂಪರ್ ಐಡಿಯಾ ಆದ್ರೆ ಮರದ ಕಡ್ಡಿಗಳು ಸುಮ್ಮನೆ ವೇಸ್ಟ್ ಎಂದಿದ್ದಾರೆ. ಇನ್ನೂ ಕೆಲವರು ಖಂಡಿತವಾಗಿಯೂ ನಮ್ಮ ಇಡ್ಲಿ ಸಂಸ್ಕೃತಿಯ ಮೇಲೆ ಆದ ಆಕ್ರಮಣ ಎಂದಿದ್ದಾರೆ. ಇನ್ನೂ ಕೆಲವರು ಸರಿಯಾಗಿ ಪಾಕ ಬರೋ ಇಡ್ಕಿ ಸ್ಟಿಕ್‌ಗೆ ಅಂಟುವುದಿಲ್ಲ ಎಂದಿದ್ದಾರೆ. ನಮಗಿದು ಹೈದರಾಬಾದ್‌ನಲ್ಲಿಯೂ ಬೇಕು. ಈ ಮಾರ್ಕೆಟಿಂಗ್ ಟ್ರಿಕ್ಸ್ ಸರಿಸಾಟಿ ಇಲ್ಲ. ಮುಂದೆ ಬೆಂಗಳೂರು ಏನು ಕೊಡುತ್ತೆ ಎಂದು ಪ್ರಶ್ನಿಸಿದ್ದಾರೆ.

ದಕ್ಷಿಣ ಭಾರತದ ಪ್ರಮುಖ ಉಪಹಾರವನ್ನು ತಯಾರಿಸುವಲ್ಲಿ ತೋರಿಸಿರುವ ಸೃಜನಶೀಲತೆಯನ್ನು ಕೆಲವರು ಇಷ್ಟಪಟ್ಟರೆ, ಇತರರು ಇದೇನು ಇಡ್ಲಿ ಅವತಾರ ಎಂದು ಅಚ್ಚರಿಪಟ್ಟಿದ್ದಾರೆ. ಈ ಚಿತ್ರವು ದಕ್ಷಿಣದ ಬೆಂಗಳೂರಿನದ್ದು ಎನ್ನಲಾಗುತ್ತಿದೆ.

ಇಡ್ಲಿ ಮತ್ತು ಸಾಂಬಾರ್‌ಗಳ ಕಾಂಬಿನೇಷನ್ ಸಾಮಾನ್ಯವಾಗಿ ಸಾಸಿವೆ ಒಗ್ಗರಣೆ ಹಾಕಿದ ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯುತ್ತಾರೆ. ಇದು ದಕ್ಷಿಣ ಭಾರತೀಯರಲ್ಲಿ ಜನಪ್ರಿಯವಾಗಿರುವ ಉಪಹಾರವಾಗಿದೆ.

ಕಳೆದ ವರ್ಷ ಯುಕೆ ಮೂಲದ ಅಕಾಡೆಮಿಕ್ ಇಡ್ಲಿಯನ್ನು ವಿಶ್ವದ ಅತ್ಯಂತ ಬೋರಿಂಗ್ ವಿಷಯ ಎಂದು ಟ್ವೀಟ್ ಮಾಡಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ಸಿಕ್ಕಾಪಟ್ಟೆ ಟೀಕೆಯೂ ಕೇಳಿಬಂದಿತ್ತು. ವಾಸ್ತವದಲ್ಲಿ ಇಡ್ಲಿ ಆರೋಗ್ಯಯುಕ್ತ ವಿಟಮಿನ್ ಹಾಗೂ ಪ್ರೊಟೀನ್ ಒಳಗೊಂಡ ಆರೋಗ್ಯಕರ ಉಪಹಾರವಾಗಿದೆ

click me!