ಫ್ರಿಜ್​ ಹೊರಗಿಟ್ಟರೂ 6-8 ತಿಂಗಳು ಕೆಡದ, ದಿಢೀರ್​ ದೋಸೆ- ಇಡ್ಲಿ ಹಿಟ್ಟು ರೆಡಿ ಹೀಗೆ: ಆಹಾರ ತಜ್ಞ ಮಾಹಿತಿ

Published : Apr 20, 2026, 02:01 PM IST

ಆರ್​ಆರ್​ವಿ ಕೇಟರ್ಸ್​ನ ವಿನಯ್​ ಶ್ರೀನಿವಾಸ್​​ ಅವರು ಮನೆಯಲ್ಲಿಯೇ ದಿಢೀರ್ ಇಡ್ಲಿ-ದೋಸೆ ಪುಡಿ ತಯಾರಿಸುವ ಸುಲಭ ವಿಧಾನವನ್ನು ಹಂಚಿಕೊಂಡಿದ್ದಾರೆ. ಅಕ್ಕಿ, ಉದ್ದಿನಬೇಳೆ ಮತ್ತು ಅವಲಕ್ಕಿ ಬಳಸಿ ತಯಾರಿಸಿದ ಈ ಪುಡಿಯನ್ನು ಫ್ರಿಜ್ ಇಲ್ಲದೆಯೇ ಆರೆಂಟು ತಿಂಗಳು ಸಂಗ್ರಹಿಸಿಡಬಹುದು.  

PREV
15
ಸೂಪರ್​ ಟಿಪ್ಸ್​

ಇಡ್ಲಿ, ದೋಸೆ ಮಾಡುವುದಾದರೆ ಅಕ್ಕಿ, ಬೇಳೆ, ಅವಲಕ್ಕಿ ನೆನೆ ಹಾಕುವುದು, ಮಾರನೆಯ ದಿನ ರುಬ್ಬುವುದು... ಹೀಗೆ ಪ್ರೊಸಿಜರ್​ ತುಂಬಾ ಇರುತ್ತವೆ. ಇದೇ ಕಾರಣಕ್ಕೆ ದಿಢೀರ್​ ಆಗಿ ಇಡ್ಲಿನೋ, ದೋಸೆನೋ ಬೇಕೆಂದರೆ ಅಂಗಡಿಗಳಿಂದ ಹಿಟ್ಟು ತರುತ್ತಿದ್ದಾರೆ ಕೆಲವು ಮನೆಗಳಲ್ಲಿ. ಆದರೆ ಅವು ಯಾವಾಗ ಪ್ಯಾಕ್​ ಮಾಡಿರುತ್ತಾರೋ, ಅದರಲ್ಲಿ ಏನು ಬೆರಕೆ ಆಗಿರುತ್ತದೆಯೋ ಆ ದೇವರೇ ಬಲ್ಲ. ಆದ್ದರಿಂದ ದಿಢೀರ್​ ಇಡ್ಲಿ, ದೋಸೆ ಬೇಕು ಎನ್ನುವವರಿಗೆ, ಆರೋಗ್ಯಪೂರ್ಣವಾಗಿಯೂ ಇರುವಂಥ ಒಂದೊಳ್ಳೆ ಟಿಪ್ಸ್​ ಕೊಟ್ಟಿದ್ದಾರೆ ಆರ್​ಆರ್​ವಿ ಕೇಟರ್ಸ್​ನ ಮ್ಯಾನೇಜಿಂಗ್​ ಡೈರೆಕ್ಟರ್​ ಆಗಿರುವ ವಿನಯ್​ ಶ್ರೀನಿವಾಸ್​​ ಕೆ.ಆರ್​. ಅವರು.

25
ಅಪಾರ ಅನುಭವ

ಆರ್​ಜೆ ಸೌಜನ್ಯ ಅವರ ಯುಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ಇದಾಗಲೇ ಇಂದಿರಾ ಕ್ಯಾಂಟೀನ್​ ಸೇರಿದಂತೆ ಹಲವಾರು ಹೋಟೆಲ್​ಗಳ ಉಸ್ತುವಾರಿ ವಹಿಸಿಕೊಂಡಿರುವ, ಆಹಾರದ ವಿಷಯದಲ್ಲಿ ಅಪಾರ ಅನುಭವ ಹೊಂದಿರುವ ಅವರು ಈಗ ಬಹುತೇಕ ಮಂದಿಗೆ ತಿಳಿಯದ ವಿಷಯ ಹಂಚಿಕೊಂಡಿದ್ದಾರೆ.

35
ಫ್ರಿಜ್​ ಇಲ್ಲದೇ ಆರೆಂಟು ತಿಂಗಳು

ಬೇರೆ ದೇಶಗಳಿಗೆ ಹೋಗುವುದಾದರೂ ತೆಗೆದುಕೊಂಡು ಹೋಗಬಹುದು, ಮನೆಯಲ್ಲಿಯೇ ಫ್ರಿಜ್​ನಲ್ಲಿ ಇಡದೇ ಆರೆಂಟು ತಿಂಗಳು ಇದನ್ನು ಇಟ್ಟುಕೊಳ್ಳಬಹುದು ಎನ್ನುವ ಮಾಹಿತಿ ಅವರು ಕೊಟ್ಟಿದ್ದಾರೆ.

45
ಬೇಕಿರುವುದು ಇಷ್ಟು

ಇದಕ್ಕೆ ಬೇಕಿರುವುದು ಒಂದು ಕೆ.ಜಿ ಅಕ್ಕಿ, 250 ಗ್ರಾಂ ಉದ್ದಿನ ಬೇಳೆ ಮತ್ತು 100 ಗ್ರಾಂ ಅವಲಕ್ಕಿ ಇಷ್ಟೇ.

55
ನೆರಳಿನಲ್ಲಿ ನೆನೆಸಿಡಿ

ಎಲ್ಲವನ್ನೂ ತೊಳೆದು ನೆರಳಿನಲ್ಲಿ ಒಣಗಿಸಿ ಇಡಬೇಕು. ಚೆನ್ನಾಗಿ ಡ್ರೈ ಆದ ಮೇಲೆ ಅವುಗಳ ಪುಡಿಯನ್ನು ಮಾಡಿಟ್ಟುಕೊಳ್ಳಬೇಕು. ನಿಮಗೆ ದೋಸೆ,, ಇಡ್ಲಿ ತಿನ್ನಬೇಕು ಎನ್ನಿಸಿದಾಗ, ಇವುಗಳನ್ನು ಮಿಕ್ಸ್​ ಮಾಡಿ ರಾತ್ರಿ ನೆನೆ ಹಾಕಿದರೆ, ಬೆಳಿಗ್ಗೆ ಆಗುವಷ್ಟರಲ್ಲಿ ಅದು ಫರ್ಮಂಟೈನ್​ ಆಗಿರುತ್ತದೆ. ಇದರ ದೋಸೆ-ಇಡ್ಲಿ ಮಾಡಿದರೆ ಸಕತ್​ ಟೇಸ್ಟ್​ ಬರುತ್ತದೆ ಎಂದಿದ್ದಾರೆ ಶ್ರೀನಿವಾಸ್​​ ಅವರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories