ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ 10 ರೂಪಾಯಿಯ ಜಲ್ಮುರಿ ಸವಿದಿದ್ದು, ಈ ತಿನಿಸು ಭಾರೀ ಜನಪ್ರಿಯವಾಗಿದೆ. ಸಾಮಾನ್ಯ ಮಂಡಕ್ಕಿಗಿಂತ ಭಿನ್ನವಾದ, ಸಾಸಿವೆ ಎಣ್ಣೆಯ ವಿಶೇಷ ಸ್ಪರ್ಶವಿರುವ ಈ ಜಲ್ಮುರಿಯನ್ನು ತಯಾರಿಸುವ ಸಂಪೂರ್ಣ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.
ಪಶ್ಚಿಮ ಬಂಗಾಳದ ಚುನಾವಣೆ ಇನ್ನೇನು ಸಮೀಪ ಆಗ್ತಿದೆ. 23 ಮತ್ತು 29ರಂದು ಎರಡು ಹಂತಗಳಲ್ಲಿ ಈ ಚುನಾವಣೆ ನಡೆಯಲಿದೆ. ಇದೇ ವೇಳೆ ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಪ್ರಚಾರದಲ್ಲಿ ತೊಡಗಿದ್ದಾರೆ. ಹೇಗಾದರೂ ಮಾಡಿ ಈ ಬಾರಿ ದೀದೀ ಆಡಳಿತಕ್ಕೆ ತಿಲಾಂಜಲಿ ಇತ್ತು, ಮೋದಿ ಆಡಳಿತ ತರಬೇಕು ಎನ್ನುವ ಲೆಕ್ಕಾಚಾರ ಶುರುವಾಗಿದೆ. ಇದರ ನಡುವೆಯೇ, ನಿನ್ನೆ ಪ್ರಧಾನಿ ಅಲ್ಲಿಯ ಚಿಕ್ಕ ಅಂಗಡಿಯೊಂದಕ್ಕೆ ಭೇಟಿ ಕೊಟ್ಟು 10 ರೂಪಾಯಿಗಳ ಜಲ್ಮುರಿ ಖರೀದಿ ಮಾಡಿದರು, ಅಲ್ಲಿದ್ದವರಿಗೆ ಹಂಚಿದರು. ಇದಕ್ಕಾಗಿ ಈ ಜಲ್ಮುರಿಗೆ ಈಗ ಸಿಕ್ಕಾಪಟ್ಟೆ ಡಿಮಾಂಡ್ ಬಂದಿದೆ. ಹಾಗಿದ್ದರೆ ಏನಿದು ಜಲ್ಮುರಿ, ಇದನ್ನು ಮಾಡೋದು ಹೇಗೆ ಎನ್ನೋದನ್ನು ಇಲ್ಲಿ ತಿಳಿಸಲಾಗಿದೆ.
26
ಬೇಲ್ಪುರಿ, ಕಡ್ಲೆ ಪುರಿಗಿಂತ ತುಸು ಭಿನ್ನ
ಸಾಮಾನ್ಯವಾಗಿ ಮಸಾಲೆ ಮಂಡಕ್ಕಿ, ಬೇಲ್ಪುರಿ, ಕಡ್ಲೆ ಪುರಿ ಎಂದೆಲ್ಲಾ ನಮ್ಮಲ್ಲಿ ಕರೆಯೋದು ಮಾಮೂಲು. ನೋಡಲು ಅದೇ ರೀತಿ ಇರುತ್ತೆ ಜಲ್ಮುರಿ. ಆದರೆ ಇದನ್ನು ಮಾಡುವ ವಿಧಾನ ಸ್ವಲ್ಪ ವ್ಯತ್ಯಾಸ ಇರುವ ಕಾರಣ, ಟೇಸ್ಟ್ನಲ್ಲಿಯೂ ತುಂಬಾ ವ್ಯತ್ಯಾಸ ಇರುತ್ತದೆ. ಜಲ್ಮುರಿಯಲ್ಲಿ ಅಗತ್ಯವಾಗಿ ಬೇಕಾದದ್ದು ಸಾಸಿವೆ ಎಣ್ಣೆ ಒಂದೆರಡು ಚಮಚ. ಇದನ್ನು ತಯಾರಿಸಲು ಬೇಕಾಗಿರುವ ಸಾಮಗ್ರಿ ಮಾಡುವ ವಿಧಾನ ಎಲ್ಲವುಗಳ ಬಗ್ಗೆ ಇಲ್ಲಿ ಡಿಟೇಲ್ಸ್ ನೀಡಲಾಗಿದೆ.
36
ಬೇಕಾಗುವ ಸಾಮಗ್ರಿಗಳು:
1-2 ಚಮಚ ಸಾಸಿವೆ ಎಣ್ಣೆ (ಇದೇ ಈ ತಿನಿಸಿನ ಹೈಲೈಟ್- ಇದು ಅತ್ಯಗತ್ಯ)
1/2 ಕಪ್ : ಯಾವುದಾದರೂ mixture (ಸೇವ್, ಬಾಂಬೆ ಮಿಕ್ಸ್ ಇತ್ಯಾದಿ)
2-3 ಚಮಚ: ಹುರಿದ ಕಡಲೆಕಾಯಿ
1/2 ಚಮಚ: ಹುರಿದ ಜೀರಿಗೆ ಪುಡಿ
ರುಚಿಗೆ ತಕ್ಕಷ್ಟು: ಉಪ್ಪು,
(ಸಾಮಾನ್ಯ ಉಪ್ಪಿನ ಜೊತೆ ಬ್ಲ್ಯಾಕ್ ಸಾಲ್ಟ್ ಸೇರಿಸಿದರೆ ಇನ್ನಷ್ಟು ಟೇಸ್ಟ್ ಬರುತ್ತದೆ)
1-2: ಹಸಿರು ಮೆಣಸಿನಕಾಯಿ
ನಿಂಬೆ ರಸ: 1 ಚಮಚ
ಕೊತ್ತಂಬರಿ ಸೊಪ್ಪು: ಚಿಕ್ಕದ್ದಾಗಿ ಕತ್ತರಿಸಿದ್ದು
56
ಮಾಡುವ ವಿಧಾನ
ಮಂಡಕ್ಕಿ ಅಥವಾ ಪುರಿ ಗರಿಗರಿ ಇಲ್ಲದಿದ್ದರೆ ಮೊದಲು ಅದನ್ನು 1 ನಿಮಿಷ ಡ್ರೈ ಫ್ರೈ ಮಾಡಿಕೊಳ್ಳಿ
ಇದಕ್ಕೆ ಕತ್ತರಿಸಿದ ಈರುಳ್ಳಿ, ಟೊಮೆಟೊ, ಸೌತೆಕಾಯಿ, ಬೇಯಿಸಿದ ಆಲೂಗಡ್ಡೆ, ಕಡಲೆಕಾಯಿ ಮತ್ತು ಮಿಕ್ಸರ್ ಸೇರಿಸಿ.
ಬಳಿಕ ಬ್ಲ್ಯಾಕ್ ಸಾಲ್ಟ್, ಮಾಮೂಲು ಉಪ್ಪು, ಹುರಿದ ಜೀರಿಗೆ ಪುಡಿ, ಹಸಿರು ಮೆಣಸಿನಕಾಯಿ ಸೇರಿಸಿ.
ಕೊನೆಯಲ್ಲಿ 1-2 ಟೀ ಚಮಚ ಖಾರದ ಸಾಸಿವೆ ಎಣ್ಣೆಯನ್ನು ಸೇರಿಸಿ.
ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ, ನಂತರ ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪನ್ನು ಮೇಲಕ್ಕೆ ಹಾಕಿ. ತಕ್ಷಣ ಸೇವಿಸಬೇಕು. ಇಲ್ಲದಿದ್ದರೆ ಅವು ಪಿಚಿಪಿಚಿಯಾಗಿ ತಿನ್ನಲು ಚೆನ್ನಾಗಿರುವುದಿಲ್ಲ.
66
ಸಲಹೆಗಳು:
ಉಪ್ಪಿನಕಾಯಿ ಎಣ್ಣೆ: ನಿಜವಾದ ಸುವಾಸನೆಗಾಗಿ ಸಾಸಿವೆ ಎಣ್ಣೆಯ ಬದಲಿಗೆ ಮಾವಿನ ಉಪ್ಪಿನಕಾಯಿ ಎಣ್ಣೆಯನ್ನು ಬಳಸಬಹುದು.
ಗರಿಗರಿಯಾದ ಸೇವ್ ಅಥವಾ ಭುಜಿಯಾ ಬಳಸಿದರೆ ಸಕತ್ ಟೇಸ್ಟ್ ಸಿಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.