ಪನೀರ್ ಅನ್ನು ಹೇಗೆ ಕಲಬೆರಕೆ ಮಾಡಲಾಗುತ್ತದೆ?
ಪನೀರ್ ತಯಾರಿಸಲು ಹಾಲನ್ನು ಬಿಟ್ಟು ಈ ವಸ್ತುಗಳನ್ನು ಸೇರಿಸಲಾಗುತ್ತಿದೆ.
ಪಿಷ್ಟ: ತೂಕ ಮತ್ತು ಪ್ರಮಾಣವನ್ನು ಹೆಚ್ಚಿಸಲು ಸೇರಿಸಲಾಗುತ್ತದೆ; ಇದು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಉಂಟುಮಾಡಬಹುದು.
ಡಿಟರ್ಜೆಂಟ್: ಹಾಲಿನ ಕೊಬ್ಬಿನಂತೆ ಕಾಣಲು ಡಿಟರ್ಜೆಂಟ್ (detergent) ಬಳಕೆ ಮಾಡಲಾಗುತ್ತದೆ. ಇದನ್ನ ಸೇವಿಸಿದಾಗ ದೇಹಕ್ಕೆ ವಿಷಕಾರಿಯಾಗಬಹುದು ಮತ್ತು ಅಂಗಾಂಗ ಹಾನಿಗೆ ಕಾರಣವಾಗಬಹುದು.
ಸಿಂಥೆಟಿಕ್ ಹಾಲು ಅಥವಾ ಯೂರಿಯಾ: ಮೂತ್ರಪಿಂಡದ ಸಮಸ್ಯೆಗಳು ಮತ್ತು ಜಠರಗರುಳಿನ ಸೋಂಕುಗಳು ಸೇರಿದಂತೆ ಗಂಭೀರ ಆರೋಗ್ಯ ಅಪಾಯಗಳನ್ನುಂಟುಮಾಡುವ ವಸ್ತುಗಳಿವು.
ಬಣ್ಣಗಳು ಮತ್ತು ರಾಸಾಯನಿಕಗಳು: ಪನೀರ್‌ಗೆ ರಿಚ್ ಲುಕ್ ನೀಡಲು ಬಳಸಲಾಗುತ್ತದೆ; ಆದರೆ ಇವು ಮಾನವನ ಬಳಕೆಗೆ ಯೋಗ್ಯವಾಗಿಲ್ಲ.