ಚಿಂತೆ ಬೇಡ..ಇಡ್ಲಿ ಸಾಂಬಾರ್ ತಿನ್ಕೊಂಡು ನೀವು ಇಷ್ಟು ಕೆಜಿ ತೂಕ ಇಳಿಸಿಕೊಳ್ಳಬಹುದು!

Published : Apr 10, 2025, 01:01 PM ISTUpdated : Apr 10, 2025, 01:02 PM IST

ಸಣ್ಣಗಾಗೋಕೆ ಏನ್ ಏನೋ ಟಿಪ್ಸ್ ಫಾಲೋ ಮಾಡುವ ಬದಲು ನೀವು ಸುಮ್ಮನೆ ಇಡ್ಲಿ ಸಾಂಬರ್ ತಿನ್ಕೊಂಡು ಖುಷಿಯಾಗಿರಬಹುದು.....  

PREV
18
ಚಿಂತೆ ಬೇಡ..ಇಡ್ಲಿ ಸಾಂಬಾರ್ ತಿನ್ಕೊಂಡು ನೀವು ಇಷ್ಟು ಕೆಜಿ ತೂಕ ಇಳಿಸಿಕೊಳ್ಳಬಹುದು!

ಮನುಷ್ಯ ಆರೋಗ್ಯವಾಗಿದ್ದಾನೆ ಅನ್ನೋದನ್ನು ಆತನ ತೂಕದ ಮೇಲೆ ಹೇಳಬಹುದು. ಜೀವನಶೈಲಿ ಬದಲಾಗುತ್ತಿದ್ದಂತೆ ಓಬೇಸಿಟಿ ಹೆಚ್ಚಾಗುತ್ತದೆ. ತಿಂದಿದ್ದು ಜೀರ್ಣ ಆಗಲ್ಲ, ಸ್ವಲ್ಪ ಓಡಾಡಿದರು ಕಾಲು ನೋವಾಗುವುದು, ಸೊಂಕ ನೋವು ಅಜೀರ್ಣ ...ಅಬ್ಬಬ್ಬಾ ಒಂದೆರಡು ಸಮಸ್ಯೆ ಅಲ್ಲ. 
 

28

ಏನೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಮೊದಲು ಹೇಳುವುದು ತೂಕ ಉಳಿಸಿಕೊಳ್ಳಬೇಕು ಇಲ್ಲ ತೂಕ ಗಳಿಸಿಕೊಳ್ಳಬೇಕು. ಗಳಿಸಿಕೊಳ್ಳುವವರಿಗೆ ಒಂದು ತರ ಸರ್ಕಸ್ ಆದ್ರೆ ಇಳಿಸಿಕೊಳ್ಳುವವರಿಗೆ ಒಂದು ತರ ಸರ್ಕಸ್. 

38

ತೂಕ ಇಳಿಸುವಾಗ ಮೊದಲು ಎಲ್ಲರೂ ಫಾಲೋ ಮಾಡುವುದು ವೇಟ್ ಲಾಸ್. ಆಮೇಲೆ ವಾಕಿಂಗ್, ಜಿಮ್ ಆಂಡ್ ಯೋಗ ಬರುತ್ತದೆ. ಮನೆಯಲ್ಲಿ ಇದ್ರೆ ಡಯಟ್ ಮಾಡ್ಬೋದು ಆದರೆ ಮನೆಯಿಂದ ಹೊರಗೆ ಇದ್ರೆ? ಪ್ರಯಾಣ ಮಾಡುವಾಗ ಏನ್ ಮಾಡೋದು?
 

48

ಈ ಹಿಂದೆ ನಡೆದ ಅಧ್ಯಾಯನದ ಪ್ರಕಾರ ಪ್ರಯಾಣ ಮಾಡುವಾಗ ಅಥವಾ ಹೊರಗಡೆ ಆಹಾರ ಸೇವಿಸುವಾಗ ಸ್ವಲ್ಪ ಕಟ್ಟುನಿಟ್ಟು ಮಾಡಬೇಕು. ಚೈನೀಸ್ ಐಟಂ ಅಥವಾ ಫ್ರೈಡ್‌ ಫುಡ್ ತಿನ್ನುವ ಬದಲು ನನ್ನ ಸೌತ್‌ ಇಂಡಿಯನ್ ಇಡ್ಲಿ ಸಾಂಬಾರ್ ಬೆಸ್ಟ್‌.
 

58

ಹೌದು! ಇಡ್ಲಿ ಸಾಂಬಾರ್ ತಿನ್ಕೊಂಡು ತೂಕ ಇಳಿಸಿಕೊಳ್ಳಬಹುದು. ಯಾವ ಹೋಟೆಲ್‌ಗೆ ಹೋದರೂ ಸಿಗುತ್ತದೆ. ಅಕ್ಕಿ, ಉದ್ದಿನಬೆಳೆ, ಅವಲಕ್ಕಿ ನೆನೆಸಿಟ್ಟು ರುಬ್ಬಿ ಮಾಡುವುದು. ಸಾಂಬರ್‌ನಲ್ಲಿ ತರಕಾರಿಗಳು ಇರುತ್ತದೆ. 
 

68

ಹೀಗಾಗಿ ನೀವು ನೆಮ್ಮದಿಯಿಂದ ಒಂದೆರಡು ಇಡ್ಲಿ ಎಕ್ಸಟ್ರಾ ತಿಂದ್ರೂ ಸಮಸ್ಯೆ ಇಲ್ಲ. ಒಂದು ವೇಳೆ ತಂಗಿನ ಚಟ್ನಿ ಸಿಕ್ಕರೆ ಅದು ಮತ್ತೊಂದು ರೀತಿಯ ಸ್ವರ್ಗ. ಎಲ್ಲರೂ ಆರೋಗ್ಯಕ್ಕೆ ಒಳ್ಳೆಯದು. 

78

ತೂಕನಷ್ಟಕ್ಕೆ ಸಂಬಂಧಿಸಿದಂರೆ ಸಾಂಬಾರ್‌ ಬಗ್ಗೆ ಹೇಳುವುದಾದರೆ, ಇದು ಪ್ರೋಟೀನ್‌ಗಳು, ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಾತ್ರವಲ್ಲ ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. 

88

ಪ್ರತಿದಿನ ಆಫೀಸ್‌ಗೆ ಹೋಗುವವರು ಹೊರಗಡೆ ತಿನ್ನಬೇಕು ಅಂದ್ರೆ ಇಡ್ಲಿ ತಿನ್ನಬೇಕು. ಬೇಸರ ಆದರೂ ಪರ್ವಾಗಿಲ್ಲ ಇದನ್ನು ತಿನ್ನಿ ಏನಿಲ್ಲ ಅಂದ್ರೂ ತಿಂಗಳಲ್ಲಿ 1 ಕೆಜಿ ಕಡಿಮೆ ಆಗ್ಬೋದು. 

Read more Photos on
click me!

Recommended Stories