ಭಾನುವಾರದ ಬಾಡೂಟಕ್ಕೆ ರೆಡೀನಾ.. ಮಟನ್ ಟೇಸ್ಟಿ ಅಡುಗೆ ಮಾಡಲು ಈ ವಿಷ್ಯ ನೆನಪಲ್ಲಿಡಿ

Suvarna News   | Asianet News
Published : Jul 01, 2021, 04:30 PM IST

ನಮ್ಮಲ್ಲಿ ಮಾಂಸಹಾರಿ ಪ್ರಿಯರು ತುಸು ಹೆಚ್ಚೇ ಇದ್ದಾರೆ. ಇಂದಿಗೂ ಭಾನುವಾರ ಬಂತೆಂದರೆ ಬಹುತೇಕರ ಅಡುಗೆಮನೆಯಲ್ಲಿ ಮಸಾಲೆ ಹಾಕಿ ಮಾಡಿದ ಮಾಂಸದ ಖಾದ್ಯದ ಘಮ ಮೂಗಿಗೆ ಬಡಿಯುತ್ತೆ. ಪೌಷ್ಠಿಕ ಆಹಾರ ತಜ್ಞರು ನಮ್ಮ ದೇಹದಲ್ಲಿ ಪ್ರೋಟೀನ್ ಕೊರತೆಯಾದಾಗ ಮಾಂಸದ ಅಡುಗೆಗಳನ್ನು ಸೇವಿಸಿ ಎಂದು ಸೂಚಿಸುತ್ತಾರೆ. ಏಕೆಂದರೆ ಮಾಂಸವು ಪ್ರೋಟೀನ್’ನ ಅತ್ಯಗತ್ಯ ಮೂಲವಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ನಿಧಾನವಾಗಿ ಸಸ್ಯಾಹಾರಕ್ಕೆ ಬದಲಾದ ನಂತರವೂ, ಮಾಂಸವನ್ನು ಸೇವಿಸುವ ಜನಸಂಖ್ಯೆ ಇನ್ನೂ ಇದೆ. ವಿಶ್ವಾದ್ಯಂತ ಮೇಕೆ, ಕೋಳಿ, ಕುರಿ, ಟರ್ಕಿ ಮತ್ತು ಗೋಮಾಂಸ ಹೀಗೆ ವಿವಿಧ ರೀತಿಯ ಮಾಂಸವನ್ನು ಸೇವಿಸುತ್ತಾರೆ.

PREV
111
ಭಾನುವಾರದ ಬಾಡೂಟಕ್ಕೆ ರೆಡೀನಾ.. ಮಟನ್ ಟೇಸ್ಟಿ ಅಡುಗೆ ಮಾಡಲು ಈ ವಿಷ್ಯ ನೆನಪಲ್ಲಿಡಿ

ಹದಭರಿತವಾಗಿ ಬೇಯಿಸುವುದು: ಮಾಂಸಾಹಾರದಲ್ಲಿ ಕಾರ್ಬೋಹೈಡ್ರೇಟ್ ಕಡಿಮೆ. ಅಂದಹಾಗೆ ಮೃದುವಾದ ಮಾಂಸವನ್ನು ಬೇಯಿಸುವುದು ಕೆಲವೊಮ್ಮೆ ದೊಡ್ಡ ಕೆಲಸವಾಗಿ ಕಾಣಿಸುತ್ತದೆ. ಏಕೆಂದರೆ ಮಾಂಸವನ್ನು ಹದಭರಿತವಾಗಿ ಬೇಯಿಸುವುದು ಒಂದು ಕಲೆ. ಅದನ್ನು ಮಿತಿ ಮೀರಿ ಬೇಯಿಸಿದರೆ  ಸಂಪೂರ್ಣ ರುಚಿ ಹಾಳಾಗುತ್ತದೆ.

211

ಒಂದು ವೇಳೆ ನಾವು  ಮಾಂಸವನ್ನು ಖರೀದಿಸಿ, ನಂತರ ಅದನ್ನು ಮನೆಯಲ್ಲಿಯೇ ಕತ್ತರಿಸುವುದಾದರೆ  ಸರಿಯಾದ ಚಾಕುಗಳು ಮತ್ತು ಬೋರ್ಡ್’ಗಳನ್ನು ಹೊಂದಿರಬೇಕು. ಅಷ್ಟೇ ಅಲ್ಲ, ಮಾಂಸವನ್ನು ಕತ್ತರಿಸಬೇಕಾದರೆ ಕೆಲವು ವಿಷಯಗಳ ಬಗ್ಗೆ ಜಾಗೃತರಾಗಿರಬೇಕು. ನೀವು ಮಾಂಸಪ್ರಿಯರಾಗಿದ್ದರೆ ಮಾಂಸದಿಂದ ಸರಿಯಾದ ರೀತಿಯಲ್ಲಿ ಅಡುಗೆ ಮಾಡುವ ವಿಧಾನ ತಿಳಿಯಿರಿ.

311

ಮಟನ್ ಸರಿಯಾಗಿ ಕಟ್ ಮಾಡುವ ವಿಧಾನ: ಈಗ ಮಟನ್ ಬಗ್ಗೆ ಮಾತನಾಡುವುದಾದರೆ ಮಟನ್ ಅನ್ನು ಸರಿಯಾಗಿ ಮತ್ತು ಎಲ್ಲಿಂದ ಕಟ್ ಮಾಡಬೇಕು ಅಥವಾ ಹೇಗೆ ಕಟ್ ಮಾಡಬೇಕು ಎಂದು ತಿಳಿದಿರಬೇಕು. ಉದಾಹರಣೆಗೆ ಮುಂಭಾಗದ ಕಾಲು, ಭುಜ, ಹಿಂಗಾಲುಗಳು, ಪಕ್ಕೆಲುಬುಗಳು ಮತ್ತು ಕುತ್ತಿಗೆಯಂತಹ ಕೆಲವು  ಪ್ರಮುಖವಾದ ಜಾಗಗಳ ಸಮೀಪ ನೋಡಿ ಕಟ್ ಮಾಡಬೇಕಾಗುತ್ತದೆ.

411

ಭುಜದಿಂದ ಹೊರತೆಗೆದ ಮಾಂಸವು ಇತರ ಭಾಗಗಳಿಗಿಂತ ಹೆಚ್ಚು ರುಚಿಯಾಗಿರುತ್ತದೆ. ಏಕೆಂದರೆ ಈ ಸ್ನಾಯುಗಳು ನಿರಂತರ ಬಳಕೆಯಲ್ಲಿವೆ ಮತ್ತು ಅಂಗಾಂಶಗಳು ಮತ್ತು ಕೊಬ್ಬಿನ ಸಾಂದ್ರತೆ ಹೆಚ್ಚಿರುತ್ತದೆ.

511

ನಿರ್ದಿಷ್ಟ ಭಾಗದಿಂದ ಯಾವ ರೀತಿಯ ಅಡುಗೆ ಮಾಡಿದರೆ ಉತ್ತಮ ಎಂದು  ತಿಳಿದಿರಬೇಕು. ಬೊನ್ ಗಳನ್ನೂ ಗ್ರಿಲ್ಲಿಂಗ್ ಮಾಡುವ ಮೂಲಕ ಬೇಯಿಸುವುದು ಜನಪ್ರಿಯವಾಗಿದೆ. ಏಕೆಂದರೆ ಇದು ಕೊಬ್ಬಿನ ಪದರವನ್ನು ಹೊಂದಿರುತ್ತದೆ ಮತ್ತು ಅದು ಮಾಂಸವನ್ನು ಬೇಯಲು ಸಹಾಯ ಮಾಡುತ್ತದೆ. ಇದು ಮಟನ್’ನ ಒಟ್ಟಾರೆ ಪರಿಮಳವನ್ನು ಹೆಚ್ಚಿಸುತ್ತದೆ.

611

ಮ್ಯಾರಿನೇಟ್ ಮಾಡುವ ವಿಧಾನ: ಮತ್ತೊಂದು ಪ್ರಮುಖ ವಿಷಯವೆಂದರೆ ಮಟನ್ ಅನ್ನು ಸರಿಯಾದ ರೀತಿಯಲ್ಲಿ ಮ್ಯಾರಿನೇಟ್ ಮಾಡುವುದು. ಮಟನ್’ನ ಮ್ಯಾರಿನೇಷನ್ ಸಮಯವು ಕೋಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಏಕೆಂದರೆ ಇದು ಘನವಾದ ನಾರಿನಂಶವನ್ನು ಹೊಂದಿರುತ್ತದೆ. 

711

ಮ್ಯಾರಿನೇಷನ್ ಮಾಡುವಾಗ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಮಟನ್ ಅನ್ನು ಮ್ಯಾರಿನೇಟ್ ಮಾಡಲು ಕನಿಷ್ಠ 8 ಗಂಟೆಗಳ ಕಾಲ  ಬಿಡಬೇಕು. ಆದರೆ ಫ್ರಿಜ್’ನಲ್ಲಿ ರಾತ್ರಿಯಿಡೀ ಬಿಡುವುದು ಉತ್ತಮ ಮಾರ್ಗವಾಗಿದೆ.

811

ಮ್ಯಾರಿನೇಷನ್ ಸಮಯದಲ್ಲಿ  ಮೊಸರು ಅಥವಾ ನಿಂಬೆಯಂತಹ ಆಹಾರ ಪದಾರ್ಥಗಳನ್ನು ಸೇರಿಸಿದರೆ ಮಾಂಸವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ.  ಮಟನ್ ಅನ್ನು ಮ್ಯಾರಿನೇಟ್ ಮಾಡುವಾಗ ಕೆಲವು ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. 

911

ಮಟನ್ ಬೇಯಿಸುವ ವಿಧಾನ: ಮಟನ್ ಬೇಯಿಸುವಾಗ ಗ್ಯಾಸ್ ಸ್ಟೌವ್ ಬಳಸುತ್ತಿದ್ದರೆ ಅದನ್ನು ಯಾವಾಗಲೂ ಕಡಿಮೆ ಉರಿಯಲ್ಲಿ ಬೇಯಿಸಲು ಪ್ರಯತ್ನಿಸಬೇಕು. ಮಟನ್ ರಸಭರಿತ ಮತ್ತು ಕೋಮಲವಾಗಿರಲು ಇದು ಸರಿಯಾದ ಮಾರ್ಗವಾಗಿದೆ. 

1011

ಹಿಂಭಾಗದ ಪ್ರದೇಶದಿಂದ ತೆಗೆದ ಮಾಂಸವನ್ನು ಬೇಯಿಸಲು ಸಾಕಷ್ಟು ಸಮಯ ಬೇಕಾಗಿಲ್ಲ. ಒಂದು ವೇಳೆ  ಅದನ್ನು ಹೆಚ್ಚು ಸಮಯ ಬೇಯಿಸಿದರೆ ಮಟನ್ ಗಟ್ಟಿಯಾಗಿ, ಅಗಿಯಬೇಕಾಗುತ್ತದೆ. ಭುಜದಿಂದ ಅಥವಾ ಇತರ ಭಾಗದ ಮಾಂಸವನ್ನು ದೀರ್ಘಕಾಲದವರೆಗೆ ಬೇಯಿಸಬೇಕಾಗುತ್ತದೆ.

1111

ಮಟನ್ ಅಡುಗೆ ಮಾಡುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಇತರ ಕೆಲವು ಅಂಶಗಳೆಂದರೆ, ಮಟನ್ ಅನ್ನು ಚೆನ್ನಾಗಿ ತೊಳೆಯಬೇಕು. ಅದನ್ನು ಬೇಯಿಸಲು ಪ್ರಾರಂಭಿಸುವ ಮೊದಲು ಅದು ಒಣಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು. ಮಟನ್ ಅನ್ನು ಸರಿಯಾದ ಸಮಯದಲ್ಲಿ ಬೇಯಿಸಲು ಬಿಡಬೇಕು ಮತ್ತು ತಕ್ಷಣ ಅದನ್ನು ತೆಗೆಯಬಾರದು.

click me!

Recommended Stories