ಜೀವ ತೆಗೆದ ಚಾಲೆಂಜ್; ಖಾರವಾದ ಚಿಪ್ಸ್ ತಿಂದ  14ರ ಬಾಲಕನಿಗೆ ಹೃದಯ ಸ್ತಂಭನ

By Mahmad Rafik  |  First Published May 17, 2024, 11:37 AM IST

ಇಂದು ಸಾಮಾಜಿಕ ಮಾಧ್ಯಮದಲ್ಲಿ ಹಲವು ಚಾಲೆಂಜ್‌ಗಳು ಬರುತ್ತಿರುತ್ತವೆ. ಇಂತಹ  ವಿಚಿತ್ರವಾದ ಚಾಲೆಂಜ್‌ವೊಂದರಲ್ಲಿ ಭಾಗಿಯಾಗಿದ್ದ 14ರ ಬಾಲಕ ಸಾವನ್ನಪ್ಪಿದ್ದಾನೆ.


ನ್ಯೂಯಾರ್ಕ್: ಇಂದು ಜನರು ರಿಯಾಲಿಟಿ ಶೋಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರ ಜೊತೆಗೆ  ಸೋಶಿಯಲ್ ಮೀಡಿಯಾ  ರೀಲ್ಸ್‌ಗಳಲ್ಲಿ ಕಾಣಿಸಿಕೊಳ್ಳುವ  ಹುಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮೂಲಕ ತಾವು ಬೇಗ ಫೇಮಸ್ ಆಗಬೇಕೆಂಬ  ಉದ್ದೇಶ ಇರುತ್ತದೆ. ಆದ್ದರಿಂದ ಏನೇನೂ ಮಾಡಲು ಹೋಗಿ ಪ್ರಾಣಕ್ಕೆ  ಅಪಾಯ ತಂದಕೊಳ್ಳುತ್ತಾರೆ. ಇಂತಹವುದೇ ಒಂದು ಚಾಲೆಂಜ್‌ನಲ್ಲಿ ಭಾಗಿಯಾಗಿದ್ದ  14 ವರ್ಷದ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ.

ಚಾಲೆಂಜ್‌ವೊಂದರಲ್ಲಿ ಭಾಗವಹಿಸಿದ್ದ  14 ವರ್ಷದ ಬಾಲಕ ಹೃದಯ ಸ್ತಂಭನದಿಂದ  ಮೃತನಾಗಿದ್ದಾನೆ. ಅಮೆರಿಕಾದ 14 ವರ್ಷದ ಹ್ಯಾರಿಸ್ ವೊಲೊಬಾಹ್ ಮೃತ ಬಾಲಕ. ಸೋಶಿಯಲ್ ಮೀಡಿಯಾದ ಚಾಲೆಂಜ್‌ವೊಂದರಲ್ಲಿ ಭಾಗವಹಿಸಿದದ್ದ  ಹ್ಯಾರಿಸ್, ಒನ್ ಚಿಪ್ ಚಾಲೆಂಜ್‌ನಲ್ಲಿ ಭಾಗಿಯಾಗಿದ್ದನು. ಈ ಚಾಲೆಂಜ್‌ನಲ್ಲಿ ಅತ್ಯಂತ  ಖಾರವಾದ ಚಿಪ್ಸ್ ತಿನ್ನಬೇಕು. 

Tap to resize

Latest Videos

undefined

ಎರಡು ಸಾರಗಳಿಂದ  ತಯಾರಾಗಿರುತ್ತೆ ಈ ಚಿಪ್ಸ್‌

ಅತಿ  ಖಾರವಾದ ಚಿಪ್ಸ್ ತಿಂದ ಕಾರಣ ಹ್ಯಾರಿಸ್ ಹೃದಯ ಸ್ತಂಭನ ಆಗಿದೆ. ಈ ಚಿಪ್ಸ್‌ ಕ್ಯಾರೊಲಿನಾ ರೀಪರ್ ಮತ್ತು ನಾಗಮ ಪೈಪರ್ ನಿಂದ ತಯಾರಿಸಲಾಗಿರುತ್ತದೆ. ಆದ್ದರಿಂದ ಈ ಚಿಪ್ಸ್ ಅತ್ಯಂತ ಖಾರವಾಗಿರುತ್ತದೆ. 

ಹುಬ್ಬಳ್ಳಿಯಲ್ಲಿ ಬ್ಲೂವೇಲ್ ಭೂತ; ಆಟಕ್ಕೋಸ್ಕರ ಕೈ ಕುಯ್ದುಕೊಂಡಳಾ ಬಾಲಕಿ?

ಮರಣೋತ್ತರ ಶವ ಪರೀಕ್ಷೆ ವರದಿಯಲ್ಲಿ ಸಾವಿನ ರಹಸ್ಯ

ಕ್ಯಾಪ್ಸೈಸಿನ್  ಎಂಬ ಮೆಣಸಿನಕಾಯಿ  ಅಂಶವನ್ನುಅತಿಯಾಗಿ ಸೇವಿಸಿರುವ ಕಾರಣ  ಹ್ಯಾರಿಸ್‌ಗೆ ಹೃದಯ ಸ್ತಂಭನವಾಗಿದೆ ಎಂದು ಸ್ಥಳೀಯ ಮುಖ್ಯ ವೈದ್ಯಕೀಯ ಪರೀಕ್ಷ ಅಧಿಕಾರಿಗಳು ತಿಳಿಸಿದ್ದಾರೆ. ಮರಣೋತ್ತರ ಶವ ಪರೀಕ್ಷೆಯಲ್ಲಿಯೂ ಸಾವಿಗೆ ಅತಿಯಾದ ಖಾರ ಸೇವನೆ ಎಂದು ತಿಳಿದು ಬಂದಿದೆ. 

ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಈ ಖಾರವಾರ  ಚಿಪ್ಸ್  ತಿನ್ನೋ ಚಾಲೆಂಜ್ ಹಲವು ಪ್ರದೇಶಗಳಲ್ಲಿ ನಡೆಯುತ್ತದೆ. ಈ ಚಾಲೆಂಜ್‌ನಲ್ಲಿ ಭಾಗವಹಿಸಿದ್ದ ಕ್ಯಾಲಿಫೋರ್ನಿಯಾದ  ಮೂವರು ಮತ್ತು  ಮಿನ್ನೇಸೋಟದಲ್ಲಿಯ ಏಳು ಜನರು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

ವಿಂಡ್ಸರ್ ಮೇನಾರ್ ಬ್ರಿಡ್ಜ್'ನಲ್ಲಿ ಬ್ಲೂವೇಲ್ ಗೇಮ್'ನ ಡ್ರಾಮಾ; ಸ್ಥಳೀಯರಿಂದ ಯುವಕನ ರಕ್ಷಣೆ

ಅಪಾಯಕಾರಿ ಬ್ಲೂವೇಲ್‌ ಗೇಮ್‌

ಕೆಲ ವರ್ಷಗಳ ಹಿಂದೆ ಬ್ಲೂವೇಲ್‌ ಗೇಮ್‌ ಹೆಚ್ಚು ಸದ್ದು ಮಾಡಿತ್ತು. ಈ ಗೇಮ್‌ಗೆ ಅಡಿಕ್ಟ್‌ ಆದ ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದರು. 2015ರಲ್ಲಿ ಮೊದಲ ಬಾರಿಗೆ ರಷ್ಯಾದಲ್ಲಿ ಈ ಗೇಮ್ ಆಡಲಾಗಿತ್ತು. ಈ ಆನ್‌ಲೈನ್‌ ಗೇಮ್‌ 4-5 ವರ್ಷಗಳ ಹಿಂದ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಿಗೆ ವ್ಯಾಪಿಸಿ ಹಲವರನ್ನು ಬಲಿ ಪಡೆದಿತ್ತು. ಇದರಲ್ಲಿ ಆಟ ನಿರ್ವಹಣೆ ಮಾಡುವ ಅನಾಮಿಕ ವ್ಯಕ್ತಿ, ಆನ್‌ಲೈನ್‌ನಲ್ಲಿ ಲಭ್ಯರಾಗುವ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡು 50 ದಿನಗಳ ಅವಧಿಯಲ್ಲಿ ವಿವಿಧ ರೀತಿಯ ಸವಾಲುಗಳನ್ನು ನೀಡುತ್ತಾ ಹೋಗುತ್ತಾನೆ. ಉದಾಹರಣೆಗೆ ಮೊದಲಿಗೆ ಮಧ್ಯರಾತ್ರಿಯಲ್ಲಿ ಏಳುವ ಸವಾಲು ಇರಬಹುದು. 

ಹಂತಹಂತವಾಗಿ ಸವಾಲಿನ ಗಂಭೀರತೆ ಹೆಚ್ಚುತ್ತಾ ಹೋಗುತ್ತದೆ. ಎತ್ತರದ ಕಟ್ಟಡದ ತುದಿಯಲ್ಲಿ ನಿಲ್ಲುವುದು, ಕೈ ಕತ್ತರಿಸಿಕೊಳ್ಳುವುದು, ಭೀತಿ ಹುಟ್ಟಿಸುವ ಚಲನಚಿತ್ರ ನೋಡುವುದು ಹೀಗೆ ಮುಂದುವರೆಯುತ್ತದೆ. ಅಂತಿಮ ಸವಾಲು ಆತ್ಮಹತ್ಯೆ ಮಾಡಿಕೊಳ್ಳುವುದಾಗಿರುತ್ತದೆ. ಬಹುತೇಕ ಪ್ರಕರಣಗಳಲ್ಲಿ ಬೆದರಿಕೆ, ಬ್ಲ್ಯಾಕ್‌ಮೇಲ್‌ ಅಥವಾ ಮಾನಸಿಕವಾಗಿ ಒತ್ತಡ ಹೇರಿ ಆಟಗಾರರನ್ನು ಬಲೆಗೆ ಬೀಳಿಸಲಾಗುತ್ತದೆ.

click me!