Foods to avoid kidney stones: ಕಿಡ್ನಿಯಲ್ಲಿ ಕಲ್ಲು ಉಂಟಾಗಲು ಹಲವು ಕಾರಣಗಳಿರಬಹುದು. ಉದಾಹರಣೆಗೆ ಆಹಾರ ಪದ್ಧತಿ, ಅಧಿಕ ದೇಹದ ತೂಕ ಅಥವಾ ಕೆಲವು ಔಷಧಿಗಳು. ಆದರೆ ಕಿಡ್ನಿ ಸ್ಟೋನ್ ಇರುವವರು ಕೆಲವು ಆಹಾರಗಳನ್ನು ದೂರವಿಡಲು ವೈದ್ಯರು ಸಲಹೆ ನೀಡುತ್ತಾರೆ.
ಕಿಡ್ನಿಯಲ್ಲಿ ಸ್ಟೋನ್ ಆಗಬಾರದೆಂದ್ರೆ ಕೆಲವು ಆಹಾರದಿಂದ ದೂರವಿರಲು ಅಥವಾ ಪದೇ ಪದೇ ತಿನ್ನದಂತೆ ವೈದ್ಯರು ಸಲಹೆ ನೀಡುತ್ತಾರೆ. ಅವು ಯಾವುವು ಎಂದು ನೋಡೋಣ.
28
ಅಧಿಕ ಆಕ್ಸಲೇಟ್ ಮತ್ತು ಕ್ಯಾಲ್ಸಿಯಂ
ಕೆಲವು ಆಹಾರಗಳಲ್ಲಿ ಆಕ್ಸಲೇಟ್ ಮತ್ತು ಕ್ಯಾಲ್ಸಿಯಂ ಅಧಿಕವಾಗಿದ್ದು, ಇದು ಕಿಡ್ನಿ ಸ್ಟೋನ್‌ಗೆ ಕಾರಣವಾಗುತ್ತದೆ. ಸಿಹಿ ಗೆಣಸು, ಬೆಂಡೆಕಾಯಿ, ಸೋಯಾ ಉತ್ಪನ್ನಗಳನ್ನು ಅತಿಯಾಗಿ ಸೇವಿಸುವುದನ್ನು ತಪ್ಪಿಸಿ.
38
ಅಧಿಕ ಸೋಡಿಯಂ ಇರುವ ಆಹಾರ
ಸಂಸ್ಕರಿಸಿದ ಆಹಾರ, ಉಪ್ಪಿನಕಾಯಿ, ಪ್ಯಾಕ್ ಮಾಡಿದ ತಿಂಡಿಗಳು, ಚಿಪ್ಸ್, ಉಪ್ಪು ಹಾಕಿದ ನಟ್ಸ್ ಮತ್ತು ಫಾಸ್ಟ್ ಫುಡ್‌ಗಳಲ್ಲಿ ಸೋಡಿಯಂ ಅಧಿಕವಾಗಿರುತ್ತದೆ. ಕಿಡ್ನಿ ಸ್ಟೋನ್ ಇದ್ದರೆ ಅಥವಾ ಆಗಬಾರದೆಂದ್ರೆ ಇವುಗಳನ್ನು ಬಿಡಿ.
ಅಧಿಕ ಪ್ರೊಟೀನ್ ಆಹಾರವು ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಕಿಡ್ನಿ ಸ್ಟೋನ್‌ಗೆ ಕಾರಣವಾಗಬಹುದು. ಆದ್ದರಿಂದ, ರೆಡ್ ಮೀಟ್‌ನಂತಹ ಅಧಿಕ ಪ್ರೊಟೀನ್ ಆಹಾರಗಳನ್ನು ತಪ್ಪಿಸಿ.
58
ಸಕ್ಕರೆ ಅಂಶವಿರುವ ಪಾನೀಯಗಳು
ಸಕ್ಕರೆ ಅಂಶವಿರುವ ಪಾನೀಯಗಳ ಅತಿಯಾದ ಸೇವನೆಯು ಕಿಡ್ನಿ ಸ್ಟೋನ್ ಉಂಟಾಗಲು ಕಾರಣವಾಗಬಹುದು.
68
ಕೆಫೀನ್
ಕೆಫೀನ್‌ನ ಅತಿಯಾದ ಬಳಕೆಯು ಕಿಡ್ನಿ ಸ್ಟೋನ್‌ಗೆ ಕಾರಣವಾಗಬಹುದು.
78
ಹಾಲಿನ ಉತ್ಪನ್ನಗಳು
ಹಾಲಿನ ಉತ್ಪನ್ನಗಳ ಅತಿಯಾದ ಬಳಕೆಯು ಕಿಡ್ನಿ ಸ್ಟೋನ್ ಉಂಟಾಗಲು ಕಾರಣವಾಗಬಹುದು.
88
ಗಮನಿಸಿ:
ಆರೋಗ್ಯ ತಜ್ಞರು ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆದ ನಂತರವೇ ಆಹಾರ ಕ್ರಮದಲ್ಲಿ ಬದಲಾವಣೆಗಳನ್ನು ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.