ಸಂಜೆ ಅಥವಾ ರಾತ್ರಿ ಊಟಕ್ಕೆ ವಿಭಿನ್ನವಾದ ಎಗ್‌ರೈಸ್ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಮನೆಯಲ್ಲಿ ಲಭ್ಯವಿರುವ ಪದಾರ್ಥಗಳನ್ನು ಬಳಸಿ, ಅನ್ನ ಮತ್ತು ಮಸಾಲೆಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಿ, ನಂತರ ಮೊಟ್ಟೆಯೊಂದಿಗೆ ಬೆರೆಸಿ ರುಚಿಕರವಾದ ಎಗ್‌ರೈಸ್ ತಯಾರಿಸಬಹುದು.
ಸಂಜೆ ಅಥವಾ ರಾತ್ರಿ ಊಟಕ್ಕೆ ಏನಾದ್ರೂ ಮಾಡಬೇಕು ಅಂತ ಯೋಚಿಸುತ್ತಿದ್ರೆ ಇಂದು ನಾವು ಹೇಳುವ ರೀತಿಯಲ್ಲಿ ಎಗ್ ರೈಸ್ ಮಾಡ್ಕೊಳ್ಳಿ. ಸಾಮಾನ್ಯವಾಗಿ ಮಾಡುವ ವಿಧಾನಕ್ಕಿಂತ ಸ್ಪಲ್ಪ ವಿಭಿನ್ನವಾಗಿ ಈ ರೆಸಿಪಿ ಮಾಡಬಹುದಾಗಿದೆ. ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿಕೊಂಡು ರುಚಿಯಾದ ಎಗ್‌ರೈಸ್ ಮಾಡಿಕೊಳ್ಳಬಹುದು.
25
ಬೇಕಾಗುವ ಸಾಮಾಗ್ರಿಗಳು
ಅನ್ನ: ಒಂದು ಕಪ್, ಮೊಟ್ಟೆ: ಎರಡು, ಹಸಿಮೆಣಸಿನಕಾಯಿ: 2, ಅಚ್ಚ ಖಾರದ ಪುಡಿ: 1 ಟೀ ಸ್ಪೂನ್, ಬೆಳ್ಳುಳ್ಳಿ-ಶುಂಠಿ ಪೇಸ್ಟ್: 1 ಟೀ ಸ್ಪೂನ್, ಅರಿಶಿಣ: ಚಿಟಿಕೆ
ಎಣ್ಣೆ: 4 ರಿಂದ 5 ಟೀ ಸ್ಪೂನ್, ಚಿಕ್ಕ ಗಾತ್ರದ ಒಂದು ಈರುಳ್ಳಿ, ನಿಂಬೆರಸ: 2 ಟೀ ಸ್ಪೂನ್, ಕೋತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು
35
ಮಾಡುವ ವಿಧಾನ
ಮೊದಲಿಗೆ ಅಗಲವಾದ ಪಾತ್ರೆಗೆ ತಯಾರಿಸಿಕೊಂಡಿರುವ ಅನ್ನವನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ಅಚ್ಚಖಾರದ ಪುಡಿ, ನಿಂಬೆರಸ ಸೇರಿಸಿಕೊಂಡು ಮಿಕ್ಸ್ ಮಾಡಿಕೊಂಡು ಎತ್ತಿಟ್ಟುಕೊಳ್ಳಿ. ಇದೀಗ ಒಲೆ ಆನ್ ಮಾಡ್ಕೊಂಡು ಬಾಣಲೆ ಇರಿಸಿಕೊಳ್ಳಿ. ಪಾತ್ರೆ ಬಿಸಿಯಾಗ್ತಿದ್ದಂತೆ ಎಣ್ಣೆ ಹಾಕಿಕೊಳ್ಳಬೇಕು.
ಎಣ್ಣೆ ಬಿಸಿಯಾದ ಬಳಿಕ ಕತ್ತರಿಸಿಕೊಂಡಿರುವ ಹಸಿಮೆಣಸಿನಕಾಯಿಕ, ಈರುಳ್ಳಿ ಸೇರಿಸಿ ಎರಡ್ಮೂರು ನಿಮಿಷ ಚೆನ್ನಾಗಿ ಬಾಡಿಸಿಕೊಳ್ಳಬೇಕು. ಅ ಬಳಿಕ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಸೇರಿಸಿಕೊಳ್ಳಿ. ಆನಂತರ ಎರಡು ಮೊಟ್ಟೆಗಳನ್ನು ಒಡೆದು ಬಾಣಲೆಗೆ ಹಾಕಿಕೊಳ್ಳಿ. ಮೊಟ್ಟೆ ಚೆನ್ನಾಗಿ ಬೇಯುತ್ತಿದ್ದಂತೆ ಮಸಾಲೆಯೊಂದಿಗೆ ಮಿಕ್ಸ್ ಮಾಡುತ್ತಾ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಬೇಕು.
ಇದೀಗ ಕೊನೆಯದಾಗಿ ಅಚ್ಚಖಾರದ ಪುಡಿ ಮತ್ತು ನಿಂಬೆರಸದೊಂದಿಗೆ ಸೇರಿಸಿಕೊಂಡಿರುವ ಅನ್ನವನ್ನು ಬಾಣಲೆಗೆ ಹಾಕಿ ಎಲವನ್ನು ಮಿಕ್ಸ್ ಮಾಡಿಕೊಂಡ್ರೆ ವಿಶೇಷ ಮತ್ತು ವಿಭಿನ್ನ ರುಚಿಯುಳ್ಳ ಎಗ್‌ರೈಸ್ ಸವಿಯಲು ಸಿದ್ಧವಾಗುತ್ತದೆ. ಕೊನೆಗೆ ಕೋತಂಬರಿ ಸೇರಿಸಿಕೊಂಡ್ರೆ ನೋಡಲು ಸಹ ಸುಂದರವಾಗಿ ಕಾಣಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.