ನಾಗರಪಂಚಮಿ ವಿಶೇಷ : ಅರಿಶಿಣ ಎಲೆ ಕಡುಬು ಮಾಡುವ ಸುಲಭ ವಿಧಾನ

Published : Jul 21, 2025, 01:07 PM ISTUpdated : Jul 21, 2025, 01:12 PM IST

ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿ ಇದೇ ಜು. 29ರಂದು ಇದನ್ನು ನಾಡಿನೆಲ್ಲೆಡೆ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದ ದಿನ ಕೆಲ ವಿಶೇಷ ತಿಂಡಿಗಳನ್ನು ಮಾಡಲಾಗುತ್ತದೆ. ಅದರಲ್ಲಿ ಮುಖ್ಯವಾದುದು ಅರಿಶಿಣ ಎಲೆ ಕಡುಬು ಮಾಡುವ ವಿಧಾನ ಇಲ್ಲಿದೆ.

PREV
113
ನಾಗರ ಪಂಚಮಿ ವಿಶೇಷ ತಿನಿಸು

ಇನ್ನೇನು ಆಷಾಢ ತಿಂಗಳು ಕಳೆದು ಶ್ರಾವಣ ಬರುತ್ತಿದ್ದಂತೆ ಒಂದೊಂದೇ ಹಬ್ಬಗಳು ಶುರುವಾಗುತ್ತವೆ. ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿ ಇದನ್ನು ನಾಡಿನೆಲ್ಲೆಡೆ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದ ದಿನ ಕೆಲ ವಿಶೇಷ ತಿಂಡಿಗಳನ್ನು ಮಾಡಲಾಗುತ್ತದೆ.

213
ಅರಿಶಿಣ ಎಲೆ ಕಡುಬು

ಈ ರೀತಿಯ ವಿಶೇಷ ತಿಂಡಿಗಳಲ್ಲಿ ಅರಿಶಿನ ಎಲೆಯಿಂದ ತಯಾರಿಸಲಾಗುವ ಅರಿಶಿಣ ಎಲೆ ಕಡುಬು ಕೂಡ ಒಂದು. ಕೆಲವರು ಇದನ್ನು ಅರಿಶಿಣ ಎಲೆ ಹಿಟ್ಟು, ಅರಿಶಿನ ಎಲೆ ಕಡುಬು ಪಾಥೋಳಿ ಎಂದೆಲ್ಲಾ ಕರೆಯುತ್ತಾರೆ.

313
ದಕ್ಷಿಣ ಕನ್ನಡ ಮಲೆನಾಡು ಕರಾವಳಿ ಭಾಗದ ವಿಶೇಷ ತಿನಿಸು

ಸಾಮಾನ್ಯವಾಗಿ ಇದನ್ನು ನಾಗರಪಂಚಮಿ ಹಬ್ಬದಂದು ದಕ್ಷಿಣ ಕನ್ನಡ ಕರಾವಳಿ ಕೊಡಗು ಭಾಗದಲ್ಲಿ ಮಾಡುತ್ತಾರೆ. ಹೀಗಿರುವಾಗ ನಾಗರಪಂಚಮಿ ಹಬ್ಬಕ್ಕೆ ಮಾಡುವ ಈ ತಿನಿಸನ್ನು ಸುಲಭವಾಗಿ ಮನೆಯಲ್ಲೇ ಮಾಡುವುದು ಹೇಗೆ ಅಂತ ನೋಡೋಣ.

413
ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

ದೋಸೆಗೆ ಬಳಸುವ ಎರಡೂವರೆ ಕಪ್ ಬೆಳ್ತಿಗೆ ಅಕ್ಕಿ(ಎರಡೂವರೆ ಗ್ಲಾಸ್‌)

ಬೆಲ್ಲ ಒಂದು ಕಪ್(ಒಂದು ಗ್ಲಾಸ್‌)

ಅರಿಶಿಣದ ಹಸಿರು ಎಲೆಗಳು -20

ತುರಿದ ತೆಂಗಿನ ಕಾಯಿ ಎರಡೂವರೆ ಕಪ್‌

ಏಲಕ್ಕಿ ಪುಡಿ

ರುಚಿಗೆ ತಕ್ಕಷ್ಟು ಉಪ್ಪು

513
ಅಕ್ಕಿಯನ್ನು ನೆನೆಸಿಡಿ

ಮೊದಲಿಗೆ ಅಕ್ಕಿಯನ್ನು ನೀರಿನಲ್ಲಿ ನೆನೆಸಿಡಿ, ಬೆಳಗ್ಗೆ ಈ ಕಡುಬು ಮಾಡ್ತಿರಿ ಅಂತಾದ್ರೆ ರಾತ್ರಿಯೇ ಅಕ್ಕಿಯನ್ನು ನೀರಿನಲ್ಲಿ ನೆನೆಸಿಡಬಹುದು 3ರಿಂದ 4 ಗಂಟೆ ಅಕ್ಕಿಯನ್ನು ನೀರಿನಲ್ಲಿ ನೆನೆಸಿಡಿ.

613
ನುಣ್ಣಗೆ ರುಬ್ಬಿ

ಹೀಗೆ ನೀರಲ್ಲಿ ನೆನೆಸಿಟ್ಟ ಅಕ್ಕಿಯನ್ನು ಚೆನ್ನಾಗಿ ತೊಳೆದು ತುಸು ಉಪ್ಪು(ರುಚಿಗೆ ತಕ್ಕಷ್ಟು) ಹಾಕಿ ನುಣ್ಣಗೆ ರುಬ್ಬಿಕೊಳ್ಳಿ, ಜಾಸ್ತಿ ನೀರು ಹಾಕಿ ಹಿಟ್ಟು ನೀರಾಗುವಂತೆ ಮಾಡಬೇಡಿ, ನುಣ್ಣಗೆ ರುಬ್ಬಲು ಎಷ್ಟು ಬೇಕೋ ಅಷ್ಟು ನೀರು ಹಾಕಿ. 

713
ಜಾಸ್ತಿ ನೀರು ಹಾಕಬೇಡಿ

ಏಕೆಂದರೆ ಹಿಟ್ಟು ತುಸು ಗಟ್ಟಿಯಾಗಿದ್ರೆ ಒಳ್ಳೆದು, ಇಲ್ಲದಿದ್ದರೆ ಎಲೆಗೆ ಮೆತ್ತುವ ವೇಳೆ ಅದು ಹರಿದು ಹೋಗಿ ಬಿಡುತ್ತದೆ. ಹೀಗಾಗಿ ಹಿಟ್ಟು ಅರಿಶಿಣದ ಎಲೆಯ ಮೇಲೆ ಹಿಡಿದುಕೊಳ್ಳುವುವಷ್ಟು ದಪ್ಪ ಇರಬೇಕು.

813
ಹೂರಣಕ್ಕಾಗಿ ಬೆಲ್ಲವನ್ನು ಕರಗಿಸಿ

ಹಿಟ್ಟು ಕಡೆದಿಟ್ಟುಕೊಂಡ ನಂತರ (ಮಿಕ್ಸಿ ಮಾಡಿದ ನಂತರ) ಈಗ ಹಿಟ್ಟಿನ ಒಳಗೆ ಇಡುವಂತಹ ಹೂರಣವನ್ನು ಸಿದ್ಧಪಡಿಸಿಕೊಳ್ಳಬೇಕು. ಇದಕ್ಕಾಗಿ ಮೊದಲಿಗೆ ಬೆಲ್ಲವನ್ನು ಕರಗಿಸಿ ಇಟ್ಟುಕೊಳ್ಳಿ, ಬೆಲ್ಲವನ್ನು ಒಂದು ಪಾತ್ರೆಯಲ್ಲಿ ಹಾಕಿ ಅರ್ಧ ಗ್ಲಾಸ್ ನೀರು ಹಾಕಿ ಅದನ್ನು ಗ್ಯಾಸ್‌ನ ಮೇಲೆ ಇಟ್ಟು ಕರಗಿಸಿ.

913
ಕರಗಿದ ಬೆಲ್ಲಕ್ಕೆ ತುರಿದ ತೆಂಗಿನ ಕಾಯಿ ಸೇರಿಸಿ

ಬೆಲ್ಲವನ್ನು ಪಾಕ ಮಾಡುವ ಅಗತ್ಯವಿಲ್ಲ, ಜಸ್ಟ್ ಅದು ಕರಗಿದರೆ ಸಾಕು. (ಕೆಲವರು ಬೆಲ್ಲವನ್ನು ಕರಗಿಸುವ ಬದಲು ಚಾಕುವಿನಲ್ಲಿ ತುರಿದು ಕೂಡ ಹಾಕ್ತಾರೆ ಹಾಗೂ ಮಾಡಬಹುದು). ಈಗ ಕರಗಿದ ಬೆಲ್ಲಕ್ಕೆ ಕಾಯಿತುರಿಯನ್ನು ಮಿಶ್ರಣ ಮಾಡಿ. ಅದಕ್ಕೆ ಅರ್ಧ ಚಮಚ ಏಲಕ್ಕಿ ಪುಡಿ ಹಾಕಿ 2 ನಿಮಿಷ ಚೆನ್ನಾಗಿ ತಿರುಗಿಸಿ ಸ್ಟೌ ಮೇಲಿಂದ ಇಳಿಸಿ.

1013
ಸ್ಟೌ ಮೇಲೆ ಇಡ್ಲಿ ಪಾತ್ರೆಯಲ್ಲಿ ನೀರು ಬಿಸಿಯಾಗಲು ಇಡಿ

ಈಗ ಇಡ್ಲಿ ಪಾತ್ರೆಯೊಂದರಲ್ಲಿ ಸ್ವಲ್ಪ ನೀರು ಇಟ್ಟು ಸ್ಟೌ ಮೇಲೆ ಬಿಸಿ ಆಗೋದಕ್ಕೆ ಬಿಡಿ, ಆ ನೀರು ಬಿಸಿಯಾಗಿ ಹಬೆ ಬರುವುದಕ್ಕೆ ಬಿಡಿ. ಈ ಸಮಯದಲ್ಲಿ ನೀವು ಅರಿಶಿಣ ಎಲೆಯನ್ನು ಚೆನ್ನಾಗಿ ತೊಳೆದು ನೀರು ಒರೆಸಿ ನಂತರ ಒಂದೊಂದೇ ಅರಿಶಿಣದ ಎಲೆಗೆ ನೀವು ಮೊದಲೇ ಮಾಡಿಟ್ಟ ಹಿಟ್ಟನ್ನು ಕೈಯಲ್ಲಿ ಮೆತ್ತನೆಯಾಗಿ ಸವರಿ,

1113
ಈಗ ಅರಿಶಿಣದ ಎಲೆಗೆ ಹಿಟ್ಟನ್ನು ಮೆತ್ತಿ

ಈ ಹಿಟ್ಟು ಎಲೆಯಿಂದ ಹರಿದು ಹೊರಗೆ ಹೋಗುವಷ್ಟು ತೆಳ್ಳಗೆ ಇರಬಾರದು. ಈಗ ಹಿಟ್ಟು ಸವರಿದ ಎಲೆಯ ಮೇಲೆ ಮೊದಲೇ ಸಿದ್ಧಪಡಿಸಿದ ತೆಂಗಿನಕಾಯಿ ಬೆಲ್ಲದ ಹೂರಣವನ್ನು ಹಿಟ್ಟಿನ ಮೇಲೆ ಹರವಿ ನಂತರ ಸರಿ ಮಧ್ಯಕ್ಕೆ ಎಲೆಯನ್ನು ಮಡಚಿ ನಂತರ ಸೈಡ್‌ನಲ್ಲೂ ಎಲೆ ತೆರೆದುಕೊಳ್ಳದಂತೆ ಕೈಯಲ್ಲಿ ಮೆತ್ತಗೆ ಒತ್ತಿ

1213
ಇಡ್ಲಿ ಪಾತ್ರಯೊಳಗೆ ಬೇಯಲು ಇಡಿ

ಬಳಿಕ ಒಲೆ ಮೇಲೆ ಇರುವ ಇಡ್ಲಿ ಪಾತ್ರೆಯಲ್ಲಿ ಅಟ್ಟಣಿಗೆ ಇಟ್ಟು ಒಂದೊಂದೇ ಹಿಟ್ಟನ್ನು ಇದೇ ರೀತಿ ಮಾಡಿ ಇಡುತ್ತಾ ಹೋಗಿ. ಎಲ್ಲಾ ಎಲೆಗಳಿಗೂ ಹೀಗೆ ಹಿಟ್ಟು ಮೆತ್ತಿ ಹೂರಣ ತುಂಬಿದ ನಂತರ ಪಾತ್ರೆಯೊಳಗೆ ಇಟ್ಟ ಮೇಲೆ ಇಡ್ಲಿ ಪಾತ್ರೆಯ ಮುಚ್ಚಳವನ್ನು ಮುಚ್ಚಿ

1313
ಅರಿಶಿಣ ಎಲೆ ಹಿಟ್ಟು ರೆಡಿ

ಇದನ್ನು ಅರ್ಧ ಗಂಟೆ ಬೇಯಿಸುವುದಕ್ಕೆ ಬಿಡಿ. ಅರ್ಧ ಗಂಟೆಯ ನಂತರ ಗ್ಯಾಸ್ ಆಫ್ ಮಾಡಿ ಈಗ ಮುಚ್ಚಳ ತೆಗಿರಿ ಅರಿಶಿಣ ಎಲೆ ಕಡುಬು ಅಥವಾ ಅರಿಶಿನ ಎಲೆ ಹಿಟ್ಟು ಈಗ ರೆಡಿ, ಅದನ್ನು ತುಪ್ಪದ ಜೊತೆ ಬಿಸಿ ಬಿಸಿಯಾಗಿ ಸರ್ವ್ ಮಾಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories