ಅಯ್ಯೋ ಚಪಾತಿ ಉಳಿತು ಅಂತ ಎಸಿಬೇಡಿ.. ಅದ್ರಿಂದಲೂ ಇಷ್ಟೆಲ್ಲಾ ಪ್ರಯೋಜನಗಳಿವೆ

Published : Dec 14, 2025, 02:45 PM IST

Gut health foods: ಹೆಚ್ಚಿನ ಜನರು ಹಿಂದಿನ ರಾತ್ರಿ ಮಾಡಿಟ್ಟ ಚಪಾತಿ ಉಳಿದಾಗ ನಿಷ್ಪ್ರಯೋಜಕ ಎಂದು ಭಾವಿಸಿ ಎಸೆಯುತ್ತಾರೆ. ಆದರೆ ಹಳೆಯ ಚಪಾತಿ ಎಷ್ಟು ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ?. ಇಲ್ಲಿ ಉಳಿದ ಚಪಾತಿ ತಿನ್ನುವುದರಿಂದಾಗುವ ಪ್ರಯೋಜನಗಳನ್ನ ನೋಡೋಣ.. 

PREV
18
ಏಕೈಕ ತಿಂಡಿ

ಬೆಳಗ್ಗೆ, ಮಧ್ಯಾಹ್ನ ಅಥವಾ ರಾತ್ರಿ ಯಾವುದೇ ಟೈಂಗಾದರೂ ಸೇವಿಸಬಹುದಾದ ಏಕೈಕ ತಿಂಡಿ ಚಪಾತಿ. ದೋಸೆ ಬಿಟ್ಟರೆ ಹೆಚ್ಚಿನ ಭಾರತೀಯರ ಮನೆಯಲ್ಲಿ ಕಾಣಸಿಗುವುದು ಚಪಾತಿ ಮಾತ್ರ.

28
ಹಳಸಲು ಎಂದು ಜರಿಬೇಡಿ

ಗ್ರಿಡಲ್‌ನಲ್ಲಿ ನೇರವಾಗಿ ಬೇಯಿಸಿದ ಬಿಸಿ ಬಿಸಿ ಚಪಾತಿ ತಿನ್ನುವುದರಿಂದ ಹಸಿವು ಹೆಚ್ಚಾಗುತ್ತದೆ. ಹಾಗೆಯೇ ಕೆಲವೊಮ್ಮೆ ಚಪಾತಿ ಉಳಿದಿರುತ್ತೆ. ಇದನ್ನು ಮರುದಿನ ದಿನ ಸೇವಿಸಲು ಕೆಲವರು ಹಳಸಲು ಎಂದು ಜರಿಯಬಹುದು. ಇಂತಹ ಚಪಾತಿ ತಿನ್ನಲು ಇಷ್ಟಪಡುವುದಿಲ್ಲ.

38
ಆರೋಗ್ಯ ಪ್ರಯೋಜನಗಳು

ಅದಕ್ಕಾಗಿಯೇ ಅನೇಕ ಮಹಿಳೆಯರು ಅಂತಹ ಚಪಾತಿಯನ್ನ ಪ್ರಾಣಿಗಳಿಗೆ ತಿನ್ನಲು ಕೊಡುತ್ತಾರೆ. ಆದರೆ ಅಂತಹ ಉಳಿದ ಚಪಾತಿಯೇ ಆರೋಗ್ಯದ ನಿಧಿ ಎಂದು ನಿಮಗೆ ತಿಳಿದಿಲ್ಲ. ಇದನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಸಿಗುತ್ತವೆ.

48
ಉಳಿದ ಚಪಾತಿ ಪ್ರಯೋಜನ

ನೀವು ಕೂಡ ಇದೇ ಸಾಲಿಗೆ ಸೇರಿದ್ದರೆ ಚಪಾತಿ ತಿನ್ನದೆ ಎಸೆಯುತ್ತಿದ್ದರೆ ಈಗಲೇ ಜಾಗರೂಕರಾಗಿರಿ. ಏಕೆಂದರೆ ಇಲ್ಲಿ ನಾವು ಉಳಿದ ಚಪಾತಿ ತಿನ್ನುವುದರಿಂದಾಗುವ ಪ್ರಯೋಜನಗಳ ಬಗ್ಗೆ ನಿಮಗೆ ಹೇಳಲಿದ್ದೇವೆ.

58
ಜೀರ್ಣಕ್ರಿಯೆ ಸುಧಾರಣೆ

ಉಳಿದ ಚಪಾತಿಯಲ್ಲಿ ನಾರಿನ ಅಂಶ ಹೆಚ್ಚಾಗಿರುತ್ತದೆ. ರಾತ್ರಿಯಿಡೀ ಶೇಖರಣೆ ಮಾಡುವುದರಿಂದ ನಿರೋಧಕ ಪಿಷ್ಟದ ಬೆಳವಣಿಗೆ ಹೆಚ್ಚಾಗುತ್ತದೆ, ಇದು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನು (ಪ್ರಿಬಯಾಟಿಕ್‌ಗಳು) ಪೋಷಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಮಲಬದ್ಧತೆ, ಗ್ಯಾಸ್ ಮತ್ತು ಅಸಿಡಿಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.

68
ರಕ್ತದಲ್ಲಿನ ಸಕ್ಕರೆ ನಿಯಂತ್ರಣ

ತಾಜಾ ಚಪಾತಿಗಿಂತ ಉಳಿದ ಚಪಾತಿ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ. ಇದರ ನಿರೋಧಕ ಪಿಷ್ಟದ ಅಂಶದಿಂದಾಗಿ, ಇದು ರಕ್ತಪ್ರವಾಹಕ್ಕೆ ಗ್ಲೂಕೋಸ್ ಅನ್ನು ನಿಧಾನವಾಗಿ ಬಿಡುಗಡೆ ಮಾಡುತ್ತದೆ, ರಕ್ತದಲ್ಲಿನ ಸಕ್ಕರೆಯ ಏರಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ.

78
ದೇಹವನ್ನು ತಂಪಾಗಿರುಸುತ್ತೆ

ಆಯುರ್ವೇದದ ಪ್ರಕಾರ, ಬೆಳಗ್ಗೆ ತಣ್ಣನೆಯ ಹಾಲು ಅಥವಾ ಮೊಸರಿನೊಂದಿಗೆ ಹಳೆಯ ಅಥವಾ ಉಳಿದ ಚಪಾತಿ ತಿನ್ನುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಮತ್ತು ತಂಪಾಗಿಸುವ ಪರಿಣಾಮ ಬೀರುತ್ತದೆ. ಇದು ಬೇಸಿಗೆಯಲ್ಲಿ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

88
ತೂಕ ಇಳಿಸಿಕೊಳ್ಳಲು ಸಹಕಾರಿ

ನಿರೋಧಕ ಪಿಷ್ಟ ಮತ್ತು ನಾರಿನಂಶದಿಂದಾಗಿ ಉಳಿದ ಚಪಾತಿ ತಿನ್ನುವುದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವನೆ ಇರುತ್ತದೆ, ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಮತ್ತು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

Read more Photos on
click me!

Recommended Stories