Chai making tips: ಒಂದು ವೇಳೆ ನೀವು ಟೀ ಪ್ರಿಯರಾಗಿದ್ದರೆ ಅದನ್ನು ತಯಾರಿಸುವ ವಿಧಾನ ತಿಳಿದುಕೊಳ್ಳಿ. ಇದು ಅದರ ರುಚಿಯನ್ನು ಹಲವು ಪಟ್ಟು ಹೆಚ್ಚಿಸುತ್ತೆ. ಉತ್ತಮ ಟೀ ತಯಾರಿಸಲು ನೀವು ಮೊದಲು ನೀರನ್ನು ಬಳಸಬೇಕೇ ಅಥವಾ ಹಾಲನ್ನೋ ನೋಡೋಣ..
ಹೆಚ್ಚು ಕಡಿಮೆ ಭಾರತದಲ್ಲಿ ಬಹುತೇಕರು ತಮ್ಮ ದಿನವನ್ನು ಪ್ರಾರಂಭಿಸುವುದೇ ಟೀ ಮೂಲಕ. ಕೆಲವರು ಟೀಯನ್ನು ಯಾವ ಲೆವೆಲ್‌ಗೆ ಇಷ್ಟಪಡ್ತಾರೆಂದ್ರೆ ದಿನಕ್ಕೆ 3-4 ಕಪ್ ಇರಲೇಬೇಕು. ಒಂದು ವೇಳೆ ನೀವು ಟೀ ಪ್ರಿಯರಾಗಿದ್ದರೆ ಅದನ್ನು ತಯಾರಿಸುವ ವಿಧಾನ ತಿಳಿದುಕೊಳ್ಳಿ. ಇದು ಅದರ ರುಚಿಯನ್ನು ಹಲವು ಪಟ್ಟು ಹೆಚ್ಚಿಸುತ್ತೆ. ಉತ್ತಮ ಟೀ ತಯಾರಿಸಲು ನೀವು ಮೊದಲು ನೀರನ್ನು ಬಳಸಬೇಕೇ ಅಥವಾ ಹಾಲನ್ನೋ ನೋಡೋಣ..
26
ಹಂತ 1
ಟೀ ತಯಾರಿಸಲು ಮೊದಲು ಪಾತ್ರೆಗೆ ನೀರನ್ನು ಸುರಿಯಿರಿ. ನಂತರ ಗ್ಯಾಸ್ ಆನ್ ಮಾಡಿ. ನೀರು ಚೆನ್ನಾಗಿ ಕುದಿಯಲು ಬಿಡಿ.
36
ಹಂತ 2
ನೀರು ಕುದಿಯಲು ಪ್ರಾರಂಭಿಸಿದ ನಂತರ ಟೀಪುಡಿ ಸೇರಿಸಿ. ಈ ಟೀಪುಡಿಯು ನೀರಿನ ಪರಿಮಳ ಹೆಚ್ಚಿಸುವವರೆಗೆ ಕಡಿಮೆ ಉರಿಯಲ್ಲಿ ಕುದಿಯಲು ಬಿಡಿ.
ಈಗ ನೀವು ಟೀಗೆ ಏಲಕ್ಕಿ, ಶುಂಠಿ, ಲವಂಗ, ಕರಿಮೆಣಸು, ದಾಲ್ಚಿನ್ನಿ, ತುಳಸಿ ಎಲೆಗಳಂತಹ ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಪದಾರ್ಥಗಳನ್ನು ಸೇರಿಸಲು ಬಯಸಿದರೆ ನೀವು ಅವುಗಳನ್ನು ಸೇರಿಸಬಹುದು.
56
ಹಂತ 4
ಮಿಶ್ರಣ ಚೆನ್ನಾಗಿ ಕುದಿಯಲು ಪ್ರಾರಂಭಿಸಿದ ನಂತರ ಸಕ್ಕರೆ ಸೇರಿಸಿ. ಇದಾದ ನಂತರ ಕೊನೆಯಲ್ಲಿ ಮಿಶ್ರಣಕ್ಕೆ ಹಾಲು ಸೇರಿಸಿ.
66
ಹಂತ 5
ಹಾಲು ಸೇರಿಸಿದ ನಂತರ 2 ರಿಂದ 3 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಕುದಿಯಲು ಬಿಡಿ. ಟೀ ಅದರ ಬಣ್ಣವನ್ನು ಪಡೆದ ನಂತರ ಉರಿಯನ್ನು ಆಫ್ ಮಾಡಿ. ಅದನ್ನು ಒಂದು ಕಪ್ ಅಥವಾ ಗಾಜಿನೊಳಗೆ ಸೋಸಿ.
ಈ ರೀತಿ ಟೀ ತಯಾರಿಸುವುದರಿಂದ ಅದರ ಬಣ್ಣ ಮತ್ತು ಸುವಾಸನೆ ಹೆಚ್ಚಾಗುತ್ತದೆ. ತಜ್ಞರು ಹೇಳುವಂತೆ ಈ ವಿಧಾನವು ಟೀ ರುಚಿಯನ್ನು ಹೆಚ್ಚಿಸುತ್ತದೆ.