ಹಾವಿನ ಮೊಟ್ಟೆ ಸೇವನೆ ಸುರಕ್ಷಿತವೇ ಎಂಬ ಚರ್ಚೆ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಾವಿನ ಮೊಟ್ಟೆ ಸೇವನೆ ಸುರಕ್ಷಿತವೇ ಎಂಬುದರ ಕುರಿತು ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಹಾವಿನ ಮೊಟ್ಟೆ ವಿಷಕಾರಿ ಅಲ್ಲವಾ?
ಸಾಮಾನ್ಯವಾಗಿ ಕೋಳಿ ಮೊಟ್ಟೆಯನ್ನು ಸೇವಿಸಲಾಗುತ್ತದೆ. ಇನ್ನು ಭಾರತದಲ್ಲಿ ಕೋಳಿ ಮೊಟ್ಟೆ ಸಸ್ಯಾಹಾರವೂ ಅಥವಾ ಮಾಂಸಹಾರವೋ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಈ ಎಲ್ಲಾ ಚರ್ಚೆಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಹಾವಿನ ಮೊಟ್ಟೆ ಸೇವನೆ ಸುರಕ್ಷಿತವೇ ಎಂಬುದರ ಕುರಿತು ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಹಾವಿನ ಮೊಟ್ಟೆ ವಿಷಕಾರಿ ಅಲ್ಲವಾ?
25
ಪೋಸ್ಟ್ ವೈರಲ್
Quora ಎಂಬ ಹೆಸರಿನ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರೊಬ್ಬರು, ಹಾವುಗಳ ಮೊಟ್ಟೆಗಳನ್ನು ಆಹಾರ ರೂಪದಲ್ಲಿ ಸೇವಿಸಬಹುದಾ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಹಲವು ವಿಚಿತ್ರವಾದ ಆಹಾರ ಪದ್ಧತಿಗಳ ಬಗ್ಗೆಯೂ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
35
ಹಾವಿನ ಮಾಂಸ ಮತ್ತು ಮೊಟ್ಟೆ
ಚೀನಾ, ಇಂಡೋನೇಷಿಯಾ, ಥೈಲ್ಯಾಂಡ್, ಜಪಾನ್ ಸೇರಿದಂತೆ ಹಲವು ದೇಶಗಳಲ್ಲಿ ಹಾವಿನ ಮಾಂಸ ಮತ್ತು ಮೊಟ್ಟೆಯನ್ನು ತಿನ್ನುತ್ತಾರೆ. ನಮ್ಮಲ್ಲಿ ಕೋಳಿ, ಮೇಕೆ ಅಂತೆ ಅಲ್ಲಿನ ಜನರು ಹಾವುಗಳನ್ನು ಸಾಕಾಣಿಕೆ ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಹಾವುಗಳ ಆಹಾರದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ
ಹಲವು ದೇಶಗಳ ಜನರ ಆಹಾರ ಪದ್ಧತಿಯಲ್ಲಿ ಹಾವಿನ ಮಾಂಸ ಮತ್ತು ಅವುಗಳ ಮೊಟ್ಟೆಗಳು ಸೇರಿವೆ. ಫಲವತ್ತಾಗದ ಹಾವಿನ ಮೊಟ್ಟೆಗಳನ್ನು ಯಾವುದೇ ಭಯವಿಲ್ಲದೇ ತಿನ್ನಬಹುದು. ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿಕೊಂಡ್ರೆ ಏನೂ ಆಗಲ್ಲ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಸಾಮಾನ್ಯ ಮೊಟ್ಟೆಯಂತೆಯೇ ಇವುಗಳು ರುಚಿಯನ್ನು ಹೊಂದಿರುತ್ತವೆ ಎಂದು ನೆಟ್ಟಿಗರು ಹೇಳಿದ್ದಾರೆ.
ವೈಲ್ಡ್‌ಲೈಫ್ ಇನ್‌ಫಾರ್ಮರ್ ವೆಬ್‌ಸೈಟ್‌ನ ವರದಿಯ ಪ್ರಕಾರ, ಹಾವಿನ ಮೊಟ್ಟೆಗಳು ಹೆಚ್ಚಿನ ಪ್ರಮಾಣದ ಪ್ರೋಟಿನ್ ಹೊಂದಿರುತ್ತವೆ. ಪ್ರೋಟಿನ್ ಕೊರತೆ ಅನುಭವಿಸುವ ವಿದೇಶಿಗರು ಹಾವಿನ ಮೊಟ್ಟೆಗಳ ಸೇವನೆಗೆ ಆದ್ಯತೆ ನೀಡುತ್ತಾರೆ. ಹಾವಿನ ಮೊಟ್ಟೆಗಳು ವಿಷಕಾರಿಯಲ್ಲ. ಆದ್ರೆ ಈ ಮೊಟ್ಟೆಗಳನ್ನು ಕ್ರಮಬದ್ಧವಾಗಿ ಬೇಯಿಸಿಕೊಂಡು ತಿನ್ನದಿದ್ರೆ ಉದರಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.